ETV Bharat / state

ಕುಮಾರಸ್ವಾಮಿ ವರ್ಚಸ್ಸು ತಗ್ಗಿಸೋ ಪ್ರಯತ್ನ ಮಾಡೋದಾದ್ರೆ ಮಾಡಲಿ: ಮಾಜಿ ಪ್ರಧಾನಿ ಗುಟುರು

ಫೋನ್ ಟ್ಯಾಪಿಂಗ್ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ವರ್ಚಸ್ಸನ್ನು ತಗ್ಗಿಸಲು ಪ್ರಕರಣದ ತನಿಖೆ ಮಾಡಲಾಗುತ್ತಿದೆ ಎಂದು ಸಿಡಿಮಿಡಿಗೊಂಡರು.

ಕುಮಾರಸ್ವಾಮಿ ವರ್ಚಸ್ಸು ತಗ್ಗಿಸೋ ಪ್ರಯತ್ನ ಮಾಡೋದಾದ್ರೆ ಮಾಡಲಿ: ಮಾಜಿ ಪಿಎಂ ಆಕ್ರೋಶ
author img

By

Published : Aug 20, 2019, 8:42 PM IST

ಬೆಂಗಳೂರು: ಫೋನ್ ವಿಚಾರವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಅವರ ವರ್ಚಸ್ಸನ್ನು ತಗ್ಗಿಸಲು ಪ್ರಕರಣದ ತನಿಖೆಯನ್ನು ಸಿಬಿಐ ಮೂಲಕ ಮಾಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ನಡೆದ ಮಂಡ್ಯ ಜಿಲ್ಲಾ ಮುಖಂಡರ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪ್ರತ್ರಿಕ್ರಿಯೆ

ಇದೇ ವೇಳೆ ನೆರೆ ಪರಿಹಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರದಿಂದ ಅನುದಾನ ತರುತ್ತಾರೆ ಬಿಡಿ ಎಂದು ಪರೋಕ್ಷ ಟೀಕೆ ಮಾಡಿದ್ರು.

ನೂತನ ಸಂಪುಟದ ಬಗ್ಗೆ ಮಾತನಾಡಿದ ಗೌಡರು, ಕ್ಯಾಬಿನೆಟ್ ರಚನೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಬೇರೆ ಯಾರನ್ನಾದರೂ ಕೇಳಿಕೊಳ್ಳಿ ಎಂದು ಕಟುವಾಗಿಯೇ ನುಡಿದರು.

Intro:ಬೆಂಗಳೂರು : ನೆರೆ ಪರಿಹಾರಕ್ಕೆ ಕೇಂದ್ರ ಅನುದಾನ ಕೊಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಪರಿಹಾರದ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಶಕ್ತಿ ಇದೆ. ಕೇಂದ್ರಿಂದ ಅನುದಾನ ತರುತ್ತಾರೆ ಬಿಡಿ ಎಂದು ಮಾರ್ಮಿಕವಾಗಿ ಹೇಳಿದರು. Body:ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಮಂಡ್ಯ ಜಿಲ್ಲಾ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪ್ ಪ್ರಕರಣವನ್ನು ಸಿಬಿಐಗೆ ಕೊಟ್ಟ ವಿಚಾರಕ್ಕೆ ಕಳೆದು ಹೋದ ವಿಷಯದ ಬಗ್ಗೆ ಈಗ ಚರ್ಚೆ ಬೇಡ ಎಂದರು.
ಮುಂಬಯಿಗೆ ಯಾಕೆ ಹೋದ್ರು, ಅವರನ್ನು ಯಾರು ಕರೆದುಕೊಂಡು ಹೋದ್ರು, ಏನ್ ಆಯ್ತು ಅದೆಲ್ಲ ಗೊತ್ತಿಲ್ಲ. ಯಾರ್ ಯಾರು ಆಡಿಯೋದಲ್ಲಿ ಮಾತನಾಡಿದ್ದಾರೆ ಗೊತ್ತಿದೆ. ಸದನದಲ್ಲಿ ಚರ್ಚೆಯೂ ಆಗಿದೆ. ಈಗ ಆ ಬಗ್ಗೆ ನಾನು ಮಾತನಾಡುವುದಿಲ್ಲ. ಕುಮಾರಸ್ವಾಮಿ ಅವರ ವರ್ಚಸ್ಸನ್ನು ತಗ್ಗಿಸಲು ತನಿಖೆ ಮಾಡ್ತಿದ್ದಾರೆ. ತನಿಖೆ ಮಾಡಿ ಅವರ ವರ್ಚಸ್ಸು ತಗ್ಗಿಸೋ ಪ್ರಯತ್ನ ಮಾಡೋದಾದ್ರೆ ಮಾಡಲಿ. ಸಿಬಿಐ ತನಿಖೆಗೆ ದೇವೇಗೌಡರು ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದರು.
ಹೊಸ ಕ್ಯಾಬಿನೆಟ್ ಗೆ ಏನು ಸಲಹೆ ಕೊಡುತ್ತೀರಾ ಎಂಬ ಪ್ರಶ್ನೆ. ಸಿಟ್ಟಾದ ದೇವೇಗೌಡರು,
ಕ್ಯಾಬಿನೆಟ್ ರಚನೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.
ಕ್ಯಾಬಿನೆಟ್ ಬಗ್ಗೆ ಬೇರೆ ಯಾರನ್ನಾದರೂ ಕೇಳಿ ಕೊಳ್ಳಿ ಎಂದರು.
ಜೆಡಿಎಸ್ ತೊರೆದಿರುವ ನಾರಾಯಣಗೌಡರು ಬಾಂಬೆಯಿಂದ ಯಾವ ಹಿನ್ನೆಲೆಯಿಂದ ಬಂದರು. ಹಿರಿಯ ಮುಖಂಡರನ್ನು ತಮ್ಮ ಹಣದ ಬಲದಿಂದ ಹಿಂದಿಕ್ಕಿ ಕೆ.ಆರ್. ಪೇಟೆಯಲ್ಲಿ ಗೆದ್ದರು. ಈಗ ಅವರು ಬಿಟ್ಟು ಹೋಗಿರುವುದರಿಂದ ಪಕ್ಷಕ್ಕೆ ಏಟಾಗಿದೆ. ಅದನ್ನು ಈಗ ಸರಿಪಡಿಸಬೇಕಿದೆ. ಇಂದಿನ ಸಭೆಯಲ್ಲಿ ಪಕ್ಷಕ್ಕೆ ನಿಷ್ಠಾವಂತರನ್ನು ಕೆ.ಆರ್. ಪೇಟೆ ಕ್ಷೇತ್ರಕ್ಕೆ ಆಯ್ಕೆ ಮಾಡಿ ಎಂದು ಬಹುಜನರ ಅಭಿಪ್ರಾಯವಾಗಿದೆ. ನಾನೇ ಖುದ್ದಾಗಿ ಕೆ.ಆರ್. ಪೇಟೆಗೆ ತೆರಳೀ ಕಾರ್ಯಕರ್ತರ ಒಮ್ಮತದ ಅಭಿಪ್ರಾಯ ಪಡೆಯಲಾಗುವುದು. ಅಲ್ಲಿನ ಕಾರ್ಯಕರ್ತರಲ್ಲೇ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎಂದು ಸಭೆಯಲ್ಲಿ ತಿಳಿಸಿದ್ದೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಕಚೇರಿ ಇಲ್ಲವೆಂದು ಹೇಳಿದ್ದಾರೆ. ಅದೇ ರೀತಿ ರಾಜ್ಯದ ಯಾವ ಜಿಲ್ಲೆಯಲ್ಲಿ ಜೆಡಿಎಸ್ ಕಚೇರಿ ಇಲ್ಲವೋ ಅಲ್ಲಿ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ. ಸೆಪ್ಟಂಬರ್ ನಿಂದ ಆ ಕಾರ್ಯ ನಡೆಯುತ್ತದೆ ಎಂದರು.

Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.