ETV Bharat / state

ಸುಮ್ಮನೆ ವಿವಾದ ಸೃಷ್ಟಿಸುತ್ತಿರುವ ಬಿಜೆಪಿ ನಾಯಕರು: ಎಂ.ಬಿ.ಪಾಟೀಲ್ - ಸಚಿವ ಎಂ ಬಿ ಪಾಟೀಲ್

''ಸಿಎಂ ಸಿದ್ದರಾಮಯ್ಯ ಅವರು ದೇವರಿಗೆ ಬಾಗಿಲಲ್ಲಿ ನಿಂತು ತಲೆಬಾಗಿ ನಮಸ್ಕಾರಿಸಿದ್ದಾರೆ. ಆದ್ರೆ, ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ'' ಎಂದು ಸಚಿವ ಎಂ ಬಿ ಪಾಟೀಲ್ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

Minister M B Patil
ಸಚಿವ ಎಂ ಬಿ ಪಾಟೀಲ್
author img

By ETV Bharat Karnataka Team

Published : Jan 5, 2024, 11:05 PM IST

ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ

ಬೆಂಗಳೂರು: ''ಸಿಎಂ ಬಾಗಿಲಲ್ಲಿ ನಿಂತುಕೊಂಡು ದೇವರಿಗೆ ನಮಸ್ಕರಿಸಿದ್ದಾರೆ. ದೇವರಿಗೆ ಹಾಕಲು ನನ್ನ ಕೈಯಲ್ಲಿ ಹೂವಿನ ಹಾರ ಕೊಟ್ಟು ತಲೆ ಬಾಗಿ ನಮಸ್ಕಾರ ಮಾಡಿದ್ದಾರೆ'' ಎಂದು ಸಚಿವ ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು.

ದೇವಸ್ಥಾನದೊಳಗೆ ಹೋಗಲು ಸಿಎಂ ನಿರಾಕರಣೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಸಿಎಂ ವಾಗ್ದೇವಿ ದೇವಸ್ಥಾನಕ್ಕೆ ಹೋಗಿದ್ದಾರೆ. ನಾನೇ ಅವರನ್ನು ಕರೆದುಕೊಂಡು‌ ಹೋಗಿದ್ದೇನೆ. ನಮಸ್ಕಾರ ಮಾಡಿಯೇ ಅವರು ಹೊರಬಂದಿದ್ದಾರೆ. ಬಿಜೆಪಿಯವರು ಸುಮ್ಮನೆ ವಿವಾದ ಮಾಡುತ್ತಿದ್ದಾರೆ, ಅವರಿಗೆ ಮಾಡೋಕೆ ಕೆಲಸವಿಲ್ಲ'' ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮೂವರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, ''ಅದನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಟಿವಿ ಮುಂದೆ ಬಂದು ಮೂರು ಡಿಸಿಎಂ ಆಗಬೇಕು ಅಂದರೂ, ಹೈ ಕಮಾಂಡ್ ಮಾಡಿಲ್ಲ ಅಂದರೆ ಮಾಡಲಾಗುವುದಿಲ್ಲ. ಒಂದು ವೇಳೆ ಹೈ ಕಮಾಂಡ್ ಮಾಡಬೇಕು ಅಂದರೆ ಮಾಡಬೇಡಿ ಅನ್ನೋದಕ್ಕೆ ಆಗಲ್ಲ‌.‌ ಸಿಎಂ, ಡಿಸಿಎಂ ಅದರ ಬಗ್ಗೆ ತೀರ್ಮಾನಿಸಬೇಕು. ಬೇಕೋ ಬೇಡ್ವೋ ಅವರು ಹೇಳಬೇಕು'' ಎಂದರು.

''ಸಚಿವ ಸತೀಶ್ ಜಾರಕಿಹೊಳಿ ಸಭೆ ಕರೆದಿದ್ದು ನನಗೆ ಗೊತ್ತಿಲ್ಲ‌. ಅವರು ಊಟಕ್ಕೆ ಕರೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ನನ್ನನ್ನು ಸಭೆಗೆ ಕರೆದಿಲ್ಲ. ಕೆಲವೊಮ್ಮೆ ಅವರು ನನ್ನನ್ನು ಕರೆದಿರಲಿಲ್ಲ. ನಾನು ಕೂಡ ಅವರನ್ನು ಕರೆದಿರಲಿಲ್ಲ, ಅದರಲ್ಲೇನಿದೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಗೆ ಜಾಮೀನು ವಿಚಾರವಾಗಿ ಪ್ರತಿಕ್ರಿಯಿಸಿ, ''ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜಾಮೀನು ಸಿಕ್ಕಿದ್ರೆ ಮಟ್ಕಾ ಏಜೆಂಟ್ ಆರೋಪ ಹೋಗುತ್ತಾ? ಅವನ ಹಿನ್ನೆಲೆ ಬಿಜೆಪಿಯವರು ತಿಳಿಯಬೇಕಿತ್ತು. ತಿಳಿಯದೆ ಅವರು ಹೋರಾಟಕ್ಕೆ ಧುಮುಕಿದ್ದಾರೆ. ಆ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ಇವುಗಳನ್ನು ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.