ETV Bharat / state

ಕಟೀಲ್ ಬೆಂಬಲಕ್ಕೆ ನಿಂತ ಕೇಸರಿ ನಾಯಕರು: ಆಡಿಯೋ ವೈರಲ್ ತನಿಖೆಯತ್ತ ಬಿಜೆಪಿ ಚಿತ್ತ - ನಳಿನ್ ಕುಮಾರ್ ಕಟೀಲ್ ಸುದ್ದಿ

ಕಳೆದ ರಾತ್ರಿಯಿಂದ ವೈರಲ್ ಆಗುತ್ತಿರುವ ಕಟೀಲ್ ಅವರದ್ದು ಎನ್ನಲಾದ ಆಡಿಯೋ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೆಜ್ಜೆ ಇರಿಸಲಾಗಿದೆ ಎನ್ನುವ ಸುಳಿವು ನೀಡುವ ಪ್ರಯತ್ನ ನಡೆದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಈ ಆಡಿಯೋವನ್ನು ಕಟೀಲ್ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದು, ಡಿಸಿಎಂ ಅಶ್ವತ್ಥ್​ ನಾರಾಯಣ್, ಸಚಿವರಾದ ಈಶ್ವರಪ್ಪ, ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸೇರಿ ಬಿಜೆಪಿ ನಾಯಕರು ಕಟೀಲ್ ಸಮರ್ಥನೆಗೆ ನಿಂತಿದ್ದಾರೆ.

bjp
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : Jul 19, 2021, 1:00 PM IST

Updated : Jul 19, 2021, 1:07 PM IST

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನುವ ಆಡಿಯೋ ವೈರಲ್ ಹೊಸ ಸಂಚಲನ ಸೃಷ್ಟಿಸಿದ್ದು, ಕಟೀಲ್ ಜೊತೆ ಮಾತನಾಡಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೆ ಆಡಿಯೋದಲ್ಲಿ ಇನ್ನುಳಿದ ಧ್ವನಿಯಲ್ಲಿ ಏನಿದೆ? ಯಾರು ವೈರಲ್ ಮಾಡಿದ್ದಾರೆ ಎನ್ನುವ ಚರ್ಚೆ ಆರಂಭಗೊಂಡಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಕಟೀಲ್ ಪರ ನಿಂತಿದ್ದು ಸಂಪೂರ್ಣ ಬೆಂಬಲ ನೀಡಿದ್ದಾರೆ.

ಕಳೆದ ರಾತ್ರಿಯಿಂದ ವೈರಲ್ ಆಗುತ್ತಿರುವ ಕಟೀಲ್ ಅವರದ್ದು ಎನ್ನಲಾದ ಆಡಿಯೋ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೆಜ್ಜೆ ಇರಿಸಲಾಗಿದೆ ಎನ್ನುವ ಸುಳಿವು ನೀಡುವ ಪ್ರಯತ್ನ ನಡೆದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಈ ಆಡಿಯೋ ಬಗ್ಗೆ ಕಟೀಲ್ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದು, ಡಿಸಿಎಂ ಅಶ್ವತ್ಥ್​ ನಾರಾಯಣ್, ಸಚಿವರಾದ ಈಶ್ವರಪ್ಪ, ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸೇರಿ ಬಿಜೆಪಿ ನಾಯಕರು ಕಟೀಲ್ ಸಮರ್ಥನೆಗೆ ನಿಂತಿದ್ದಾರೆ. ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಆಡಿಯೋ ಕೇವಲ 42 ಸೆಕೆಂಡ್ ಇದ್ದು ಉಳಿದದ್ದು ಎಲ್ಲಿ ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೆ ಯಾರ ಜೊತೆ ಮಾತನಾಡಿದ್ದು, ಇದರಲ್ಲಿ ಕೇವಲ ಕಟೀಲ್ ಅವರದ್ದು ಎನ್ನಲಾದ ಧ್ವನಿ ಮಾತ್ರ ಇದೆ. ಎದುರು ಇದ್ದ ಅಥವಾ ಇನ್ನೊಂದು ಬದಿಯಿಂದ ಮಾತನಾಡಿದ ಧ್ವನಿ ಏಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿರಬಹುದು ಎಂದು ಕಟೀಲ್ ಪರ ಬಿಜೆಪಿ ನಾಯಕರು ವಕಾಲತ್ತು ವಹಿಸಿದ್ದಾರೆ.

ಇದನ್ನು ಓದಿ: ಸಿಎಂ ಸ್ಥಾನ ಬದಲಾವಣೆ ಮಾಡಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ: ರಂಭಾಪುರಿ ಶ್ರೀ

ಯಡಿಯೂರಪ್ಪ ದೆಹಲಿಗೆ ಹೋಗಿ ಬಂದ ನಂತರದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ವಿಷಯ ಮತ್ತೆ ಮುನ್ನಲೆಗೆ ಬಂದಿದ್ದು, ಈ ಸಮಯದಲ್ಲೇ ಆಡಿಯೋ ವೈರಲ್ ಆಗಿರುವುದಕ್ಕೆ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ. ಈ ಆಡಿಯೋ ಹಿಂದೆ ಸ್ವಪಕ್ಷೀಯರ ಕೈವಾಡವಿದೆಯೋ, ಪ್ರತಿಪಕ್ಷಗಳ ಕೈವಾಡವಿದೆಯೋ ಎನ್ನುವುದು ನಿಗೂಢವಾಗಿದೆ. ಇದೀಗ ಎಲ್ಲರೂ ತನಿಖೆ ಆಗಬೇಕು ಎನ್ನುತ್ತಿದ್ದಾರೆ.

ಆದರೆ ಆಡಿಯೋದಲ್ಲಿನ ಧ್ವನಿ ಯಾರದ್ದು ಎನ್ನುವ ಬಗ್ಗೆ ತನಿಖೆ ಅಗತ್ಯವಿಲ್ಲ, ಯಾರು ವೈರಲ್ ಮಾಡಿದ್ದಾರೆ ಎನ್ನುವ ತನಿಖೆ ಆಗಲಿ ಎನ್ನುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರಿಗೆ ಕಟೀಲ್ ಧ್ವನಿಯೋ ಅಲ್ಲವೋ ಎನ್ನುವುದಕ್ಕಿಂತ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯುವ ತವಕವೇ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಸಿಎಂಗೆ ಪತ್ರ:
ಸದ್ಯ ಮಂಗಳೂರಿನಲ್ಲಿರುವ ನಳಿನ್​ಕುಮಾರ್​ ಕಟೀಲ್, ಆಡಿಯೋ ವೈರಲ್ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಸಮಗ್ರ ವಿವರಣೆ ನೀಡಲಿದ್ದು, ತನಿಖೆಗೂ ಮನವಿ ಮಾಡಲಿದ್ದಾರೆ. ಈ ಮನವಿಗೆ ಯಡಿಯೂರಪ್ಪ ಯಾವ ರೀತಿ ಕ್ರಮ ವಹಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಹೈಕಮಾಂಡ್​ಗೆ ಮಾಹಿತಿ:
ನಾಳೆ ಲೋಕಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳುತ್ತಿರುವ ಕಟೀಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌ ಪಿ ನಡ್ಡಾ ಅವರನ್ನು ಭೇಟಿಯಾಗಿ ವೈರಲ್ ಆಡಿಯೋ ಪ್ರಕರಣದ ಬಗ್ಗೆ ವಿವರಣೆ ನೀಡಲಿದ್ದಾರೆ. ಈ ವಿಷಯವನ್ನು ಯಡಿಯೂರಪ್ಪ ಗಮನಕ್ಕೆ ತಂದು ತನಿಖೆಗೂ ಮನವಿ ಮಾಡಿರುವ ಮಾಹಿತಿ ನೀಡಲಿದ್ದು, ತಮ್ಮ ವಿರುದ್ಧ ಪಿತೂರಿ ನಡೆದಿರುವ ಕುರಿತು ಮಾಹಿತಿ ನೀಡಲಿದ್ದಾರೆ.

Last Updated : Jul 19, 2021, 1:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.