ETV Bharat / state

ತಾಲಿಬಾನಿಗಳಿಗೆ ಮತಾಂಧತೆ ಇದ್ದರೆ, ಕಾಂಗ್ರೆಸ್​​ಗೆ ಮತದ ಅಂಧತೆ ಇದೆ: ಸಿ.ಟಿ.ರವಿ - Bengaluru ct ravi press meet

ಕಾಂಗ್ರೆಸ್ ಪಕ್ಷ ಮತಾಂತರದ ಪರವಾಗಿ ಇದೆಯೇ? ಎಂದು ಪ್ರಶ್ನಿಸಿದ ಬಿಜೆಪಿ ನಾಯಕ ಸಿ.ಟಿ.ರವಿ, ಕಾಂಗ್ರೆಸ್​ಗೆ ತಾಕತ್ತಿದ್ದರೆ ಬಹಿರಂಗವಾಗಿ ಸ್ಪಷ್ಟಪಡಿಸಲಿ ಅಂತ ಸವಾಲು ಹಾಕಿದ್ದಾರೆ. ಸೆಕ್ಯುಲರ್ ಹೆಸರಿನಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡುವುದನ್ನು ಸಹಿಸಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು ಎಂದು ಕೈ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಸಿ.ಟಿ.ರವಿ
ಸಿ.ಟಿ.ರವಿ
author img

By

Published : Jan 2, 2022, 2:29 PM IST

ಬೆಂಗಳೂರು: ತಾಲಿಬಾನಿಗಳಿಗೆ ಮತಾಂಧತೆ ಇದ್ದರೆ, ಕಾಂಗ್ರೆಸ್​ಗೆ ಮತದ ಅಂಧತೆ ಇದೆ. ಕಾಂಗ್ರೆಸ್ ಅನ್ನು ಹಿಂದೂಗಳು ನಂಬುವ ಕಾಲ ಮುಗಿದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಕಾರಿದರು.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಂಬಿಸಿ ಹಿಂದೂಗಳನ್ನು ಒಡೆದು ಆಳುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಓಟ್ ಬ್ಯಾಂಕ್ ಗಟ್ಟಿಯಾಗಿಟ್ಟುಕೊಳ್ಳಬೇಕು ಅನ್ನುವ ಮತ ಅಂಧತೆ ಅವರಿಗಿದೆ. ಸಿಎಎ ತಂದಾಗ ಕಾಂಗ್ರೆಸ್ ವಿರೋಧ ಮಾಡ್ತು. ನೆಹರು, ಇಂದಿರಾ ಗಾಂಧಿ ಇದ್ದಾಗಲೂ ಅದನ್ನು ತಂದಿದ್ದರು. ಬಿಜೆಪಿ ತಂದಾಗ ವಿರೋಧಿಸಿದರು. ಆರ್ಟಿಕಲ್ 370 ರದ್ದು ವಿಷಯದಲ್ಲೂ ಹೀಗೆ ಮಾಡಿದ್ರು. ಹೊಸ ಶಿಕ್ಷಣ ನೀತಿಯನ್ನೂ ಕೂಡ ಸಾಧಕ-ಬಾಧಕ ಅರ್ಥ ಮಾಡಿಕೊಳ್ಳುವ ಮುಂಚೆಯೇ ವಿರೋಧಿಸಿದರು. ಕಾಲ ಕಾಲಕ್ಕೆ ಬದಲಾವಣೆ ಬೇಕು ಎನ್ನುವ ಮನಸ್ಥಿತಿಯೇ ಕಾಂಗ್ರೆಸ್​ಗೆ ಇಲ್ಲ. ಅದಕ್ಕಾಗಿಯೇ ಒಂದು ಕುಟುಂಬಕ್ಕೆ ಅದು ಜೋತು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್​ನಲ್ಲಿ ಸಿ.ಟಿ.ರವಿ ಸುದ್ದಿಗೋಷ್ಠಿ

ಹಿಂದೂ ಧರ್ಮವನ್ನು ಹಗುರವಾಗಿ ಕಾಣುವುದನ್ನು ನಾವು ಸಹಿಸುವುದಿಲ್ಲ. ಹಿಂದೂ ಧರ್ಮ ಹಗುರವಾಗಿ ಕಂಡರೆ 2018ರ ಫಲಿತಾಂಶದ ಕಡೆ ಒಮ್ಮೆ ಕಣ್ಣು ಹಾಯಿಸಿ. ಕಾಂಗ್ರೆಸ್ ರಾಜಕೀಯ ಲಾಭ ಆಗತ್ತದೆ ಅಂದುಕೊಂಡರೆ ಅದು ತಪ್ಪು. ಯಾವುದೇ ಲಾಭ ಆಗೋದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಲಿ. ಕಾಂಗ್ರೆಸ್​ನಲ್ಲಿ ಯಾರು ಸುಪ್ರಿಂ?. ವಿಪಕ್ಷ ನಾಯಕ ಸುಪ್ರೀಮೋ, ಪಾರ್ಟಿ ಅಧ್ಯಕ್ಷ ಸುಪ್ರಿಮೋ. ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸಿದ್ದರಾಮಯ್ಯ ಏ ಅಧ್ಯಕ್ಷ ನನ್ನ ಬಿಟ್ಟು ಮೀಟಿಂಗ್ ಮಾಡಬೇಡ ಅಂತಾರೆ. ಪಾರ್ಟಿ ಅಧ್ಯಕ್ಷರಿಗೆ ಒಂದು ಮೀಟಿಂಗ್ ಮಾಡುವ ಅವಕಾಶವೂ ಇಲ್ವಾ? ಎಂದು ಕುಟುಕಿದರು.

ಡಿಕೆಶಿನೇ ಶಾಪಗ್ರಸ್ತ:

ದೇವಾಲಯಗಳನ್ನು ಬ್ರಿಟಿಷರು ದೇವರ ಮೇಲಿನ ಪ್ರೀತಿಯಿಂದ ನಿಯಂತ್ರಣಕ್ಕೆ ತರಲಿಲ್ಲ. ದೇವಾಲಯದ ಆದಾಯದ ಮೇಲೆ ಕಣ್ಣಿಟ್ಟು ಸರ್ಕಾರದ ಹಿಡಿತಕ್ಕೆ ತೆಗೆದುಕೊಂಡರು. ದೇವಸ್ಥಾನಗಳ ಹಿಡಿತ ಸ್ವಾತಂತ್ರ್ಯ ನೈಜ ಅರ್ಥಕ್ಕೆ ಸೂಕ್ತವಲ್ಲ. ಕಾಂಗ್ರೆಸ್ ಅಧ್ಯಕ್ಷರು ಉಗ್ರ ವೀರಾವೇಶದಲ್ಲಿ ಭಸ್ಮ ಆಗೋಗ್ತೀರಿ ಅಂತ ಟೀಕಿಸಿದರು. ಅವರೇನಾದ್ರೂ ಅವರನ್ನು ಭಸ್ಮಾಸುರ ಅಂದುಕೊಂಡಿದ್ರೆ ಅವರ ಕೈಯ್ಯನ್ನು ಅವರ ತಲೆ ಮೇಲೆ ಇಡೋದು ಗೊತ್ತು. ಡಿಕೆಶಿನೇ ಶಾಪ ಗ್ರಸ್ತ, ಬೇಲ್ ಮೇಲೆ ಹೊರಗಿದ್ದಾರೆ. ಇಡಿ, ಸಿಬಿಐ ಸ್ವಲ್ಪ ಗಟ್ಟಿಯಾದ್ರೂ ಅವರು ಒಳಗೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮತಾಂತರದ ಪರವಾಗಿದೆಯಾ, ತಾಕತ್ತಿದ್ರೆ ಹೇಳಲಿ ಹಾಗಂತ. ನಾವು ಆಸೆ ಆಮಿಷದ ಮತಾಂತರ ಪರ ಅಂತ ಕಾಂಗ್ರೆಸ್ ಸ್ಪಷ್ಟಪಡಿಸಲಿ. ಸೆಕ್ಯುಲರ್ ಹೆಸರಿನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುವುದನ್ನು ನಾವು ಸಹಿಸೋದಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು. ಬದಲಾಗಿರುವ ಕಾಂಗ್ರೆಸ್, ಗಾಂಧಿ ಹಿಂದುತ್ವ ಬಿಟ್ಟು ಸೋನಿಯಾ ಗಾಂಧಿ ಕಾಂಗ್ರೆಸ್ ಆಗಿದೆ ಎಂದು ಕಿಡಿ ಕಾರಿದರು.

ಪಾದಯಾತ್ರೆ ಗದ್ದುಗೆಯ ಗುದ್ದಾಟದ ಪೈಪೋಟಿ:

ಮೇಕೆದಾಟು ಪಾದಯಾತ್ರೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ಕೊಟ್ಟಾಗಿದೆ. ಪರಿಸರ ಕ್ಲಿಯರೆನ್ಸ್ ಆಗಬೇಕು. ಇವರೇ ತಂದ ಕಾನೂನು, ಇವತ್ತು ಅರ್ಜಿ ಹಾಕಿದರೆ ನಾಳೆ ಸಿಕ್ಕಿಬಿಡತ್ತಾ? ಎಂದು ಪ್ರಶ್ನಿಸಿದರು.

ಹೋರಾಟ ಮಾಡೋದೆ ತಪ್ಪು ಅಂತಿಲ್ಲ, ಆದ್ರೆ ಯಾರನ್ನು ಟಾರ್ಗೆಟ್ ಮಾಡಿ ಪಾದಯಾತ್ರೆ ಮಾಡ್ತಿದ್ದಾರೆ?. ಸಿದ್ದರಾಮಯ್ಯ ವಿರುದ್ಧ ಮೇಲುಗೈ ಸಾಧಿಸಲು ಪಾದಯಾತ್ರೆ ಮಾಡ್ತಿದ್ದೀನಿ ಅಂತ ಹೇಳಲಿ. ನನಗೂ ಪಾದಯಾತ್ರೆ ಮಾಡೋಕೆ ಬರತ್ತೆ ಅಂತ ತೋರಿಸೋಕೆ ಮಾಡ್ತಿದ್ದೀನಿ ಅಂತ ಹೇಳಲಿ. ಕಾಂಗ್ರೆಸ್ ಒಳಗಿರುವ ಬಂಡಾಯ ಹತ್ತಿಕ್ಕುವುದಕ್ಕೆ ಪಾದಯಾತ್ರೆ ಅಂತ ಹೇಳಲಿ ಎಂದು ಟಾಂಗ್ ನೀಡಿದರು.

ಆಂತರಿಕ ಗದ್ದುಗೆ ಗುದ್ದಾಟಕ್ಕೆ ಪಾದಯಾತ್ರೆ ಮಾಡ್ತಿರಬಹುದು. ಸುಳ್ಳು ಹೇಳಿಕೊಂಡು ಪಾದಯಾತ್ರೆ ಮಾಡಬೇಡಿ, ಆರೋಗ್ಯ ಸುಧಾರಣೆಗೆ ಬೇಕಾದ್ರೆ ಪಾದಯಾತ್ರೆ ಮಾಡಿ. ಕುಮಾರಸ್ವಾಮಿ ನೋಡಿದ್ರೆ ನಮ್ಮ ಕಾಲದಲ್ಲಿ ಡಿಪಿಆರ್ ಆಯ್ತು ಅಂತಾರೆ, ಇವರು ನಮ್ಮ ಕಾಲದಲ್ಲಿ ಆಯ್ತು ಅಂತಾರೆ. ನಮ್ಮ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ತಾತ್ವಿಕ ಒಪ್ಪಿಗೆ ಕೊಟ್ಟಾಗಿದೆ. ಯಾರ ವಿರುದ್ಧ ಇವರ ಪಾದಯಾತ್ರೆ?. ಏನು ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡ್ತಾರೆ?. ಡಿಕೆಶಿ ಜಲ ಸಂಪನ್ಮೂಲ ಸಚಿವರಾಗಿದ್ದವರು, ಅವರ ಕಾಲದಲ್ಲಿ ಏನು ಮಾಡಿದರು?. ಹಿಂದೆ ಕೃಷ್ಣೆ ಯೋಜನೆ ಇಟ್ಟುಕೊಂಡು ಯಾತ್ರೆ ಮಾಡಿದ್ವಿ, ಆಗ ಅಧಿಕಾರಕ್ಕೆ ಬಂದ್ವಿ, ಈಗಲೂ ಹಾಗೇ ಆಗಬಹುದು ಎನ್ನುವ ಭ್ರಮೆ ಇರಬಹುದು ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಅವರು ಧರ್ಮಸ್ಥಳ ಹೇಗೆ ಜನಮುಖಿ ಕೆಲಸ ಮಾಡ್ತಿದೆ ಎನ್ನೋದನ್ನು ಅಧ್ಯಯನ ಮಾಡಲಿ‌. ಆಗಲಾದರೂ ದೇವಸ್ಥಾನ ಸರ್ಕಾರದ ಕಪಿ ಮುಷ್ಟಿಯಲ್ಲಿ ಇರಬೇಕು ಎಂದು ಅರ್ಥವಾಗತ್ತದೆ ಅಂತಾ ಕಿಡಿ ಕಾರಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸ ಇರುತ್ತದೆ. ವಿಧಾನಸಭೆ ಚುನಾವಣೆ ರಾಜಕೀಯ ಸನ್ನಿವೇಶ ಬೇರೆ. ರಾಜ್ಯದ ಜನ ಡೆವಲಪ್ಮೆಂಟ್ ಮಾಡೆಲ್ ಬಯಸುತ್ತಾರೆ. ಜೇಲ್ ಆ್ಯಂಡ್ ಬೇಲ್ ಮಾಡೆಲ್ ಜನ ಬಯಸೋದಿಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು.

ನಮ್ಮ ಡೆವಲಪ್ಮೆಂಟ್ ಮಾಡೆಲ್ ಕೆಲವೊಮ್ಮೆ ಚುನಾವಣಾ ಪೂರ್ವದಲ್ಲಿ ನಿರ್ಣಯ ಆಗತ್ತದೆ, ಕೆಲವೊಮ್ಮೆ ಚುನಾವಣೆ ಮುಗಿದ ಮೇಲೆ ಮಾಡ್ತೇವೆ. ಯಡಿಯೂರಪ್ಪ ಹೆಸರೂ ಹೇಳಬೇಕು, ಸಿಎಂ ಬೊಮ್ಮಾಯಿ ಹೆಸರೂ ನಾವು ಹೇಳಬೇಕು ಎಂದರು.

ಜ. 7,8,9 ಚಿಂತನ ಬೈಠಕ್:

ಜ.7,8,9 ಚಿಂತನಾ ಬೈಠಕ್ ಇದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿ ಚಿಂತನಾ ಬೈಠಕ್ ನಲ್ಲಿ ನಿರ್ಣಯ ಮಾಡ್ತೇವೆ. ಸಿಎಂ ಕೂಡ ಅಲ್ಲಿರುತ್ತಾರೆ. ಎಲ್ಲ ಅವಲೋಕನ ಮಾಡಿ ನಮ್ಮ ತೀರ್ಮಾನ ಮಾಡಿಕೊಳ್ತೇವೆ ಎಂದರು.

ಯತ್ನಾಳ್ ಬದಲಾವಣೆ ಬಗ್ಗೆ ಯಾವ ದೃಷ್ಟಿಯಿಂದ ಹೇಳಿದ್ದಾರೆ ಗೊತ್ತಿಲ್ಲ. ಆದರೆ ನಮ್ಮ ಅವಲೋಕನ ನಾವು ಮಾಡಿಕೊಳ್ತೇವೆ. ಸೋಲು-ಗೆಲುವು ಎರಡನ್ನೂ ಅವಲೋಕ‌ನ ಮಾಡಿಕೊಂಡಿದ್ದಕ್ಕೆ ನಮ್ಮ ಪಾರ್ಟಿ ಇಲ್ಲಿಯವರೆಗೆ ಸರ್ವೈವ್ ಆಗಿದೆ. ಕೆಲವು ಪಕ್ಷಗಳಿಗೆ ಗತಿಯೂ ಇಲ್ಲ, ಮತಿಯೂ ಇಲ್ಲ. ಎರಡು ವರ್ಷ ಕೋವಿಡ್ ಸಂಕಷ್ಟ ಇತ್ತು, ಯಾರನ್ನು ನಾವು ಹೊಣೆ ಮಾಡೋದಕ್ಕಾಗತ್ತೆ?‌ ಚೈನಾ ವೈರಸ್ ಅನ್ನೇ ಹೊಣೆ ಮಾಡಬೇಕಾಗುತ್ತದೆ. ನಳಿನ್ ಕುಮಾರ್ ಕಟೀಲ್ ಅವರದೇ ಸ್ಟೈಲ್ ನಲ್ಲಿ ಪಕ್ಷ ಸಂಘಟನೆ ಮಾಡ್ತಿದ್ದಾರೆ. ರೂಟ್ ಲೆವೆಲ್, ಗ್ರಾಸ್ ರೂಟ್ ಲೆವೆಲ್ ಕಾರ್ಯಕರ್ತ ಹೇಗೆ ಸಂಘಟನೆ ಮಾಡಬೇಕೋ ಮಾಡ್ತಿದ್ದಾರೆ. ಅವರನ್ನು ಯಾರಿಗೂ ಹೋಲಿಕೆ ಮಾಡುವುದು ಬೇಡ ಎಂದರು.

ಕ್ಯಾಬಿನೆಟ್ ರೀಶಫಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಂತ್ರಿ ಸ್ಥಾ‌ನ ಬಿಟ್ಟುಕೊಡುವುದು ತ್ಯಾಗ ಅಲ್ಲ. ಮಂತ್ರಿ ಸ್ಥಾನ ಬಿಡುವುದು ಕೂಡ ತ್ಯಾಗ ಅಲ್ಲ, ಬಲಿದಾನವೂ ಅಲ್ಲ. ಅದು ನನ್ನ ಕರ್ತವ್ಯ ಆಗಿತ್ತು. ಪಕ್ಷದ ಸೂಚನೆ ಮೇರೆಗೆ ನಾನು ಮಂತ್ರಿ ಸ್ಥಾನ ಬಿಟ್ಟುಕೊಟ್ಟೆ. ಅವರವರ ಅವಶ್ಯಕತೆ ಇದ್ದಾಗ ಪಕ್ಷ ಜವಾಬ್ದಾರಿ ನೀಡುತ್ತದೆ, ಎಲ್ಲರೂ ಅದನ್ನು ಪಾಲಿಸುತ್ತಾರೆ. ಭಗತ್ ಸಿಂಗ್ , ರಾಜಗುರು ಅಂಥವರದ್ದು ತ್ಯಾಗ ಬಲಿದಾನ. ನಮ್ಮದು ತ್ಯಾಗವೂ ಅಲ್ಲ, ಬಲಿದಾನವೂ ಅಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಉಪ್ಪು ತಿಂದವನು ನೀರು ಕುಡಿಯಲೇ ಬೇಕು:

ಸಿದ್ದರಾಮಯ್ಯ ಬಹಳಷ್ಟು ಸಾರಿ ಹೇಳ್ತಿದ್ರು, ಉಪ್ಪು ತಿಂದವನು ನೀರು ಕುಡಿಬೇಕ್ರಿ ಅಂತಾ. ಕೆಲವರು ಉಪ್ಪು ತಿಂದಿದ್ದಾರೆ, ನೀರು ಕುಡಿತಾರೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.