ETV Bharat / state

ಅತೃಪ್ತರ ರಾಜೀನಾಮೆ ಅಂಗೀಕಾರ ಚುರುಕುಗೊಳಿಸುವಂತೆ ಬಿಜೆಪಿ ಧರಣಿ: ಬಿಎಸ್​ವೈ ಗುಡುಗು

ರಾಜೀನಾಮೆ ನೀಡಿರುವ 5 - 6 ಶಾಸಕರು ಅರ್ಜಿ ಸರಿಯಿದೆ ಎಂದ ಮೇಲೆ ಸ್ಪೀಕರ್​ ಏಕೆ ಅಂಗೀಕರಿಸುತ್ತಿಲ್ಲ? ಇನ್ನೂ ಹಲವರು ರಾಜೀನಾಮೆ ಅರ್ಜಿ ಸರಿಯಿಲ್ಲ ಎಂದ ಮೇಲೆ, ಹೊಸ ಅರ್ಜಿ ಸಲ್ಲಿಕೆಗೆ ಏಕೆ ಅವಕಾಶ ನೀಡುತ್ತಿಲ್ಲ? ಎಂದು ಪ್ರತಿಪಕ್ಷ ನಾಯಕ ಬಿ.ಎಸ್​. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ
author img

By

Published : Jul 10, 2019, 9:58 AM IST

Updated : Jul 10, 2019, 10:06 AM IST

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ಕೂರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವ 5-6 ಶಾಸಕರು ಅರ್ಜಿ ಸರಿಯಿದೆ ಎಂದ ಮೇಲೆ ಸ್ಪೀಕರ್​ ಏಕೆ ಅಂಗೀಕರಿಸುತ್ತಿಲ್ಲ? ಇನ್ನು, ಹಲವರ ರಾಜೀನಾಮೆ ಅರ್ಜಿ ಸರಿಯಿಲ್ಲ ಎಂದಾದರೆ, ಹೊಸ ಅರ್ಜಿ ಸಲ್ಲಿಕೆಗೆ ಏಕೆ ಅವಕಾಶ ನೀಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ

ಈ ಬಗ್ಗೆ ರಾಜ್ಯಪಾಲರು ಹಾಗೂ ಸ್ಪೀಕರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ, ಆನಂತರ ಧರಣಿ ನಡೆಸುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಹಲವು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಪೀಕರ್​ ರಮೇಶ್​ ಕುಮಾರ್​ ಈ ಸಲಹೆಗಳನ್ನು ಪರಿಗಣಿಸಿ, ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಬಿಎಸ್​ವೈ ಒತ್ತಾಯಿಸಿದ್ದಾರೆ.

Intro:Body:Conclusion:
Last Updated : Jul 10, 2019, 10:06 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.