ಬೆಂಗಳೂರು : ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ. ಬಿಎಸ್ವೈ ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ. ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ G23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ತಿರುಗೇಟು ನೀಡಿದೆ.
ಕಾಂಗ್ರೆಸ್ ಪಕ್ಷ ಒಬ್ಬೊಬ್ಬ ಹಿರಿಯ ನಾಯಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಹಿರಿಯ ನಾಯಕ ಕಪಿಲ್ ಸಿಬಲ್ ಅವರು ನಕಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಕಪಿಲ್ ಸಿಬಲ್ ಮನೆ ಮೇಲೆ ತನ್ನ ಕಾರ್ಯಕರ್ತರಿಂದ ದಾಳಿ ಮಾಡಿಸುತ್ತದೆ. ನಿಮ್ಮದು ಯಾವ ಟ್ರೆಂಡ್ ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಪ್ರಶ್ನಿಸಿದೆ.
-
ಯಡಿಯೂರಪ್ಪ ಅವರ ಬಗ್ಗೆ @INCKarnataka ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ.
— BJP Karnataka (@BJP4Karnataka) October 11, 2021 " class="align-text-top noRightClick twitterSection" data="
ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ.
ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ #G23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ.
1/2 pic.twitter.com/yrMwaGe6VU
">ಯಡಿಯೂರಪ್ಪ ಅವರ ಬಗ್ಗೆ @INCKarnataka ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ.
— BJP Karnataka (@BJP4Karnataka) October 11, 2021
ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ.
ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ #G23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ.
1/2 pic.twitter.com/yrMwaGe6VUಯಡಿಯೂರಪ್ಪ ಅವರ ಬಗ್ಗೆ @INCKarnataka ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ.
— BJP Karnataka (@BJP4Karnataka) October 11, 2021
ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ.
ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ #G23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ.
1/2 pic.twitter.com/yrMwaGe6VU
ಸಿದ್ದುಗೆ ಗುದ್ದು : ಗೋವಿಂದ ರಾಜ್ ಡೈರಿ ನೆನಪಿದೆಯೇ? ನೂರಾರು ಕೋಟಿ ಕಪ್ಪವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಪರವಾಗಿ ಸಲ್ಲಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ. ಡೈರಿ ಗೋವಿಂದ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು.
ಮಾಡಲು ಉದ್ಯೋಗವಿಲ್ಲ, ವಾಣಿಜ್ಯ ವ್ಯವಹಾರ ಇಲ್ಲ. ಇಂಥವರು ನೂರಾರು ಕೋಟಿ ಕಪ್ಪ ಕೊಟ್ಟಿದ್ದೇಗೆ? ಸಂಪತ್ತಿನ ಯಾವುದೇ ಮೂಲವಿರದಿದ್ದರೂ ಗೋವಿಂದ ರಾಜ್ ಅವರು ಕಾಂಗ್ರೆಸ್ ಹೈಕಮಾಂಡಿಗೆ ಕೋಟಿಗಟ್ಟಲೆ ಕಪ್ಪ ಸಲ್ಲಿಸಿದ್ಹೇಗೆ?.
ಈ ವ್ಯಕ್ತಿಯೇ ಇಷ್ಟೊಂದು ಕಪ್ಪ ನೀಡಿರಬೇಕಾದರೆ, ಇದರ ಸೂತ್ರದಾರ, ಜಾತಿ ರಾಜಕಾರಣ ಮಾಡುತ್ತಿರುವ ವ್ಯಕ್ತಿ ಎಷ್ಟು ಕಪ್ಪು ಹಣ ಸಂಗ್ರಹಿಸಿರಬಹುದು.? ಸದಾ ಅನ್ಯರ ತಪ್ಪು ಹುಡುಕುವ ಸಿದ್ದರಾಮಯ್ಯ ಅವರ ಸುತ್ತ ಪರಮ ಭ್ರಷ್ಟರೇ ತುಂಬಿದ್ದಾರೆ.
ಗೋವಿಂದ ರಾಜ್, ಕೆ ಜೆ ಜಾರ್ಜ್, ಬೈರತಿ ಸುರೇಶ್, ಡಾ.ಹೆಚ್ ಸಿ ಮಹಾದೇವಪ್ಪ, ಕೆಂಪಯ್ಯ, ಜಮೀರ್ ಎಲ್ಲರೂ ತೆರಿಗೆ ಕಳ್ಳರು, ಪರಮ ಭ್ರಷ್ಟರು. ನಿಮ್ಮ ಸುತ್ತಲಿರುವ ಜನರಿಂದ ನೀವು ಎಂಥವರು ಎಂದು ನಿರ್ಧರಿಸಬಹುದಲ್ಲವೇ ಸಿದ್ದರಾಮಯ್ಯನವರೇ ಎಂದು ಟ್ವೀಟ್ ಮೂಲಕ ಬಿಜೆಪಿ ಆರೋಪಿಸಿದೆ.