ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನ ಮಾಡುವ ಬದಲು ನಿಮ್ಮ ಪಕ್ಷದಲ್ಲೇ ನಡೆಯುತ್ತಿರುವ ಗೊಂದಲವನ್ನು ಸರಿಪಡಿಸಿಕೊಳ್ಳಿ ಎಂದು ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಸಲಹೆ ನೀಡಿದೆ.
ಬಿಜೆಪಿ ತೋಡೋ ಜಾತ್ರೆ: ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಯನ್ನು 'ಸಿದ್ದು - ಡಿಕೆಶಿ ಜೋಡೊ ಯಾತ್ರೆ' ಎನ್ನುವ ಬಿಜೆಪಿಗರು ತಮ್ಮ ಪಕ್ಷದಲ್ಲಿ 'ಬಿಜೆಪಿ ತೋಡೋ ಜಾತ್ರೆ' ನಡೆಯುತ್ತಿರುವುದನ್ನು ಗಮನಿಸಲಿ. ರಾಜ್ಯದ ಜನರಷ್ಟೇ ಅಲ್ಲ ಸ್ವತಃ ಬಿಜೆಪಿಗರೇ "ಬಿಜೆಪಿ ಮುಕ್ತ ಕರ್ನಾಟಕ" ಮಾಡಲು ತುದಿಗಾಲಲ್ಲಿದ್ದಾರೆ. ಯತ್ನಾಳ್ ಹೇಳುತ್ತಿರುವ ಆ ಹುಳವನ್ನು ರಾಜ್ಯ ಬಿಜೆಪಿ ಹುಡುಕಿಕೊಳ್ಳಲಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
-
ಮೋದಿ ಆಡಳಿತದ "ಅಚ್ಛೆ ದಿನ್"ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ.
— Karnataka Congress (@INCKarnataka) October 4, 2022 " class="align-text-top noRightClick twitterSection" data="
ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ?@BJP4Karnataka ಈಗ ಒಪ್ಪುವುದು ಯಾವುದನ್ನು?
ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ?
RSS ಹೇಳಿದ ಮಾತನ್ನೊ?#BharatJodoYatra pic.twitter.com/tAV2o6KmOz
">ಮೋದಿ ಆಡಳಿತದ "ಅಚ್ಛೆ ದಿನ್"ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ.
— Karnataka Congress (@INCKarnataka) October 4, 2022
ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ?@BJP4Karnataka ಈಗ ಒಪ್ಪುವುದು ಯಾವುದನ್ನು?
ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ?
RSS ಹೇಳಿದ ಮಾತನ್ನೊ?#BharatJodoYatra pic.twitter.com/tAV2o6KmOzಮೋದಿ ಆಡಳಿತದ "ಅಚ್ಛೆ ದಿನ್"ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ.
— Karnataka Congress (@INCKarnataka) October 4, 2022
ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ?@BJP4Karnataka ಈಗ ಒಪ್ಪುವುದು ಯಾವುದನ್ನು?
ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ?
RSS ಹೇಳಿದ ಮಾತನ್ನೊ?#BharatJodoYatra pic.twitter.com/tAV2o6KmOz
ಸಂದಾಯ ಭವನವಾದ ಕಂದಾಯ ಭವನ: ಲಂಚ ಲಂಚ ಲಂಚ.. ಶೇ 40ರಷ್ಟು ಬಿಜೆಪಿ ಸರ್ಕಾರದಲ್ಲಿ ಎಲ್ಲೆಲ್ಲೂ ಲಂಚದ ಹಾವಳಿ. ಭ್ರಷ್ಟಾಚಾರದ ಮಹಾಪೋಷಕ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೇ ಜನಸಾಮಾನ್ಯರ ಪ್ರಾಣ ಹಿಂಡುತ್ತಿದ್ದಾರೆ. ಕಂದಾಯ ಭವನವು 'ಸಂದಾಯ ಭವನ'ವಾಗಿರುವುದು ಬಿಜೆಪಿಯ ಸಾಧನೆಗಳಲ್ಲೊಂದು. ಪೇ-ಸಿಎಂ ಆಡಳಿತದಲ್ಲಿ ಹುಟ್ಟು, ಸಾವಿಗೂ ಲಂಚ ಕೊಡುವಂತಾಗಿದೆ ಎಂದಿದೆ.
ಭಾರತ ಐಕ್ಯತಾ ಯಾತ್ರೆಯಿಂದ ಬಿಜೆಪಿಯ ಬುಡ ಅಲ್ಲಾಡುತ್ತಿದೆ. ಭಯ, ಹತಾಶೆಯಿಂದ ಕಂಗೆಟ್ಟಿದೆ ಎಂಬುದಕ್ಕೆ ಆರ್. ಅಶೋಕ್ ಅವರ ಸುದ್ದಿಗೋಷ್ಟಿಯೇ ಸಾಕ್ಷಿ. ಸಚಿವ ಆರ್. ಅಶೋಕ್ ಅವರೇ, ಈ ಚಿತ್ರವಿರುವ ಪೋಸ್ಟರ್ ಯಾವಾಗ ಬಿಡುಗಡೆ ಮಾಡ್ತೀರಿ? ನಾವು ಕೇಳುತ್ತಲೇ ಇದ್ದೇವೆ. ಆದರೆ ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ ಇಲ್ಲ. ರಾಜ್ಯ ಬಿಜೆಪಿಗೆ ದಮ್ಮು ತಾಕತ್ತು ಇದ್ದರೆ ಉತ್ತರಿಸಲಿ.
ಫೋಟೋ ಯಾವಾಗ ಬಿಡುಗಡೆ ಮಾಡುತ್ತೀರಿ: ಬಿಜೆಪಿಗರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದೇಕೆ? ಟಿಪ್ಪುವನ್ನು ಹೊಗಳಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಪುಸ್ತಕ ಹೊರತಂದಿದ್ದೇಕೆ? ರಾಷ್ಟ್ರಪತಿ ಟಿಪ್ಪು ಹೋಗಳಿದ್ದೇಕೆ? ಸಚಿವ ಅಶೋಕ್ ಅವರೇ, ಯಡಿಯೂರಪ್ಪ ಟಿಪ್ಪು ಖಡ್ಗ ಹಿಡಿದ ಈ ಫೋಟೋವನ್ನು ಯಾವಾಗ ಬಿಡುಗಡೆ ಮಾಡುವಿರಿ? ಎಂದು ಕೇಳಿದೆ.
ಇದನ್ನೂ ಓದಿ: ಪರೇಶ್ ಮೇಸ್ತಾ ಪ್ರಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್
40% ಸರ್ಕಾರದಲ್ಲಿ ನಾಲ್ಕು ನಿಂಬೆಹಣ್ಣಿನ ಹಣದಲ್ಲಿ ಬಸ್ ಪೂಜೆ ಮಾಡಬೇಕಾಗಿದೆ. ಧರ್ಮ, ಸಂಸ್ಕೃತಿಗಳ ರಕ್ಷಣೆಯ ಮಾತಾಡುವ ರಾಜ್ಯ ಬಿಜೆಪಿ ಸರ್ಕಾರದವು ಸಂಸ್ಕೃತಿಗೆ ಕೇವಲ 100 ರೂಪಾಯಿ ಬೆಲೆ ಕಟ್ಟಿದ್ದು ವಿಪರ್ಯಾಸ. ಪೇ-ಸಿಎಂ ಬಸವರಾಜ್ ಬೊಮ್ಮಾಯಿ ಅವರೇ, ನಿಜ ಹೇಳಿ 40ರಷ್ಟು ಲೂಟಿಯಲ್ಲಿ ಖಜಾನೆ ದಿವಾಳಿಯಾಗಿದೆಯೇ? ಪೂಜೆಗೂ ಗತಿ ಇಲ್ಲದಾಗಿದೆಯೇ? ಹಿಂದಿ ಎಂದರೆ ಮೋಹ, ಕನ್ನಡಕ್ಕೆ ದ್ರೋಹ! ಹಿಂದಿ ದಿವಸ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ್ರಿ.
ಮಾಲೀಕರ ಅಭಿಪ್ರಾಯ ಒಪ್ಪುವುದೇ ಬಿಜೆಪಿ: ಕನ್ನಡ ಕೊಲ್ಲಲು ವರಿಷ್ಠರ ಆದೇಶ ಬಂದಿದೆಯೇ? ಅಥವಾ ಶೇ 40ರಷ್ಟು ಲೂಟಿಗೆ ಖಜಾನೆ ದಿವಾಳಿಯಾಗಿದೆಯೇ?. ಮೋದಿ ಆಡಳಿತದ "ಅಚ್ಛೆ ದಿನ್"ಗಳನ್ನು ಆರ್ ಎಸ್ ಎಸ್ ವಿಮರ್ಶಿಸಲು ಶುರು ಮಾಡಿದೆ. ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ? ರಾಜ್ಯ ಬಿಜೆಪಿ ಈಗ ಒಪ್ಪುವುದು ಯಾವುದನ್ನು? ಎಂದು ಪ್ರಶ್ನಿಸಿದೆ.
ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ? ಆರ್ ಎಸ್ ಎಸ್ ಹೇಳಿದ ಮಾತನ್ನೊ? ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡಲು ಶುರು ಮಾಡಿದ ಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ ಆರ್ ಎಸ್ ಎಸ್ ಗೆ ಕಾಳಜಿ ಬಂದಿರುವುದು ಆಶ್ಚರ್ಯಕರ. "ಸಬ್ ಚೆಂಗಾಸಿ" ಎನ್ನುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಆರ್ ಎಸ್ ಎಸ್ ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ! ಈ ಬೆಳವಣಿಗೆ 'ಮೋದಿ ಹಠಾವೂ' ಯೋಜನೆಯ ಮುನ್ನುಡಿಯೇ? ಎಂದು ಕೇಳಿದೆ.