ETV Bharat / state

ರಾಜ್ಯ ಬಿಜೆಪಿ ಪಾಳಯದಲ್ಲಿ ವದಂತಿಗಳದ್ದೇ ಸುದ್ದಿ ; ಪರಿಹಾರ ಸೂತ್ರದೊಂದಿಗೆ ಬರಲಿದ್ದಾರೆ ಅರುಣ್ ಸಿಂಗ್ - ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಭೆ

ಈ ಎಲ್ಲಾ ವದಂತಿಗಳ ನಡುವೆಯೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಪಾಳಯದಲ್ಲಿನ ಅಸಮಾಧಾನ ಶಮನದ ಜವಾಬ್ದಾರಿಯೊಂದಿಗೆ ಜೂನ್ 16 ಅಥವಾ 17ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊದಲ ದಿನದಂದೇ ಸಚಿವರ ಸಭೆ ನಡೆಸಲು ನಿರ್ಧರಿಸಿದ್ದು, ಪಕ್ಷದ ಕಚೇರಿಯಲ್ಲಿ ಎಲ್ಲ ಸಚಿವರು ಹಾಜರಾಗಿರಬೇಕೆಂದು ಸಂದೇಶ ಕಳಿಸಲಾಗಿದೆ..

arun
arun
author img

By

Published : Jun 13, 2021, 7:53 PM IST

ಬೆಂಗಳೂರು : ರಾಜ್ಯ ಬಿಜೆಪಿ ಪಾಳಯದಲ್ಲಿ ವದಂತಿಗಳದ್ದೇ ಸುದ್ದಿಯಾಗಿದೆ. ನಾಯಕತ್ವ ಬದಲಾವಣೆ ಮಾತ್ರವಲ್ಲ ರಾಜ್ಯ ನಾಯಕತ್ವ, ರಾಜ್ಯ ಉಸ್ತುವಾರಿಯ ಬದಲಾವಣೆ ವದಂತಿಗಳೂ ಹರಿದಾಡುತ್ತಿವೆ. ವದಂತಿಗಳ ನಡುವೆಯೇ ಪಕ್ಷದಲ್ಲಿನ ಅಸಮಾಧಾನಕ್ಕೆ ಪರಿಹಾರವೆನ್ನುವ ಮುಲಾಮಿನೊಂದಿಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲು ಸಿದ್ದರಾಗಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಕುರಿತು ಕೇಳಿಬಂದ ವದಂತಿಗಳ ನಂತರ ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಖುದ್ದು ಹೈಕಮಾಂಡ್ ನಾಯಕರೇ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ರಾಜ್ಯ ಘಟಕದಲ್ಲಿ ತಲೆದೂರಿರುವ ಗೊಂದಲ ನಿವಾರಣೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ರನ್ನು ಕಳಿಸಿ ಕೊಡುತ್ತಿದೆ.

ರಾಜ್ಯದಲ್ಲಿ ಕೇವಲ ನಾಯಕತ್ವ ಬದಲಾವಣೆಯ ಒಂದು ಕೂಗು ಮಾತ್ರ ಈವರೆಗೂ ಇತ್ತು. ಆದರೆ, ಈಗ ಅದು ಮೂರು ಕೂಗಾಗಿ ಬದಲಾಗಿದೆ. ಸರ್ಕಾರದ ನಾಯಕತ್ವ, ರಾಜ್ಯ ಬಿಜೆಪಿ ನಾಯಕತ್ವ ಹಾಗೂ ರಾಜ್ಯ ಉಸ್ತುವಾರಿ ನಾಯಕತ್ವ ಬದಲಾವಣೆ ಎನ್ನುವ ವದಂತಿಗಳು ಹರಿದಾಡಲು ಶುರುವಾಗಿದೆ.

ಆಡಳಿತದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ. ಮುಖ್ಯಮಂತ್ರಿಗಳಿಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ ಎನ್ನುವ ಕಾರಣ ಮುಂದಿಟ್ಟು ಸಿಎಂ ಬದಲಾವಣೆ ಕೂಗಿ ಮೊಳಗಿಸಲಾಗಿತ್ತು. ಇದೀಗ ರಾಜ್ಯಾಧ್ಯಕ್ಷರು ಸಮರ್ಥವಾಗಿ ಪಕ್ಷವನ್ನು ಮುನ್ನಡೆಸುವಲ್ಲಿ, ಸಂಘಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯಾಧ್ಯಕ್ಷರ ಬದಲಾವಣೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷರು ಹೇಳಿದಂತೆ ಕೇಳುತ್ತಿದ್ದಾರೆ ಎನ್ನುವ ಕಾರಣ ಮುಂದಿಟ್ಟು, ರಾಜ್ಯ ಉಸ್ತುವಾರಿ ಬದಲಾವಣೆ ಮಾಡಲಾಗುತ್ತದೆ ಎನ್ನುವ ವದಂತಿಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿವೆ.

ಈ ಎಲ್ಲಾ ವದಂತಿಗಳ ನಡುವೆಯೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಪಾಳಯದಲ್ಲಿನ ಅಸಮಾಧಾನ ಶಮನದ ಜವಾಬ್ದಾರಿಯೊಂದಿಗೆ ಜೂನ್ 16 ಅಥವಾ 17ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊದಲ ದಿನದಂದೇ ಸಚಿವರ ಸಭೆ ನಡೆಸಲು ನಿರ್ಧರಿಸಿದ್ದು, ಪಕ್ಷದ ಕಚೇರಿಯಲ್ಲಿ ಎಲ್ಲ ಸಚಿವರು ಹಾಜರಾಗಿರಬೇಕೆಂದು ಸಂದೇಶ ಕಳಿಸಲಾಗಿದೆ.

ಸಚಿವರೊಂದಿಗೆ ಸಭೆ ನಡೆಸಲಿರುವ ಅರುಣ್ ಸಿಂಗ್ ಅಸಮಾಧಾನ, ವದಂತಿ, ಸಿಎಂ ಕಾರ್ಯವೈಖರಿ ಕುರಿತು ಎಲ್ಲ ಮಾಹಿತಿ ಪಡೆದುಕೊಳ್ಳಲಿದ್ದಾರೆ.‌ ಪರ-ವಿರೋಧ ಸಹಿ ಸಂಗ್ರಹ ಅಭಿಯಾನದ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಸಚಿವರೊಂದಿಗಿನ ಸಭೆ ನಂತರ ಶಾಸಕರ ಸಭೆ ನಡೆಸಲಿದ್ದಾರೆ. ಎಲ್ಲ ಶಾಸಕರ ಬದಲು ನಾಯಕತ್ವ ಬದಲಾವಣೆ ಪರ-ವಿರೋಧ ಇರುವ ಆಯ್ದ ಶಾಸಕರನ್ನು ಕರೆಸಿಕೊಂಡು ಒನ್ ಟು ಒನ್ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಸಭೆಗೆ ಪಟ್ಟು : ಸಚಿವರ ಸಭೆ ನಡೆಸುವ ಅರುಣ್ ಸಿಂಗ್ ನಿರ್ಧಾರಕ್ಕೆ ಬಿಎಸ್​ವೈ ವಿರೋಧಿ ಬಣದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌ಸಚಿವರ ಸಭೆಯಿಂದ ಯಾವುದೇ ಪ್ರಯೋಜನ ಇಲ್ಲ, ಶಾಸಕರ ಸಭೆ ನಡೆಸಬೇಕು, ಶಾಸಕರ ಅಭಿಪ್ರಾಯ ಪಡೆದು ನಂತರ ಸಚಿವರ ಜೊತೆ ಸಭೆ ಮಾಡಬೇಕು. ಕೂಡಲೇ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಭಿಪ್ರಾಯವನ್ನು ಮುಕ್ತವಾಗಿ ಹೇಳಲು ಅವಕಾಶ ಕಲ್ಪಿಸಬೇಕು ಎನ್ನುವ ಬೇಡಿಕೆ ಇರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.