ETV Bharat / state

2023ರ ವಿಧಾನಸಭಾ ಚುನಾವಣೆಯೇ ಗುರಿ.. ವರಿಷ್ಠರಿಂದ ಅನುಭವ-ಹೊಸತನ ಸಂಗಮದ ಪಡೆ ಸಜ್ಜು.. - BJP High Command created a strong Cabinet

ಒಕ್ಕಲಿಗರ ಕೋಟಾದಡಿ ಏಳು ಮಂದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಹಿಂದುಳಿದವರಿಗೆ ಏಳು ಮತ್ತು ಪರಿಶಿಷ್ಟರಿಗೆ ನಾಲ್ಕು, ಬ್ರಾಹ್ಮಣ ಕೋಟಾದಡಿ ಇಬ್ಬರಿಗೆ, ಒಬ್ಬ ಮಹಿಳೆ ಸೇರಿ 29 ಮಂದಿಗೆ ಅವಕಾಶ ನೀಡಲಾಗಿದೆ..

bjp-high-command-created-a-strong-cabinet-in-karnatakata
ನೂತನ ಸಚಿವರು
author img

By

Published : Aug 4, 2021, 7:13 PM IST

ಬೆಂಗಳೂರು : ಬಲಿಷ್ಠ ಸಚಿವ ಸಂಪುಟವನ್ನು ಕಟ್ಟುವ ಮೂಲಕ ಮುಂದಿನ (2023) ವಿಧಾನಸಭಾ ಚುನಾವಣೆಗೆ ಅನುಭವ-ಹೊಸತನದ ಮಿಶ್ರಣವುಳ್ಳ ಪಡೆಯನ್ನು ದೆಹಲಿ ವರಿಷ್ಠರು ಸಜ್ಜುಗೊಳಿಸಲು ಯತ್ನಿಸಿರುವುದು ಸಚಿವ ಸಂಪುಟ ರಚನೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಸತತ ಎಂಟು ದಿನಗಳ ಕಸರತ್ತಿನ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಯಾಗಿದೆ. ಹಿರಿಯ ನಾಯಕರಾದ ಕೆ ಎಸ್ ಈಶ್ವರಪ್ಪ, ಆರ್.ಅಶೋಕ್‌, ಗೋವಿಂದ ಕಾರಜೋಳ, ಡಾ. ಅಶ್ವತ್ಥ್‌ ನಾರಾಯಣ, ವಿ. ಸೋಮಣ್ಣ, ಜೆ ಸಿ ಮಾಧುಸ್ವಾಮಿ ಸೇರಿ 29 ಮಂದಿ ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡದಿರಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ. ಇದರಿಂದಾಗಿ ಎಲ್ಲ 29 ಮಂದಿ ಕೂಡ ಮಂತ್ರಿಗಳಾಗಿಯೇ ಇರಲಿದ್ದಾರೆ.

ಬಿ ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಕೊಕ್‌ ಕೊಡಲಾಗಿದೆ. ಶಿಕ್ಷಣ ಸಚಿವರಾಗಿದ್ದ ಸುರೇಶ್‌ ಕುಮಾರ್‌ ಹಾಗೂ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರನ್ನೂ ಕೈಬಿಡಲಾಗಿದೆ.

ಇದೇ ರೀತಿ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಬಂಡಾಯ ನಾಯಕರಾಗಿದ್ದ ಸಿ ಪಿ ಯೋಗೇಶ್ವರ್‌ ಅವರನ್ನೂ ಬೊಮ್ಮಾಯಿ ಸಂಪುಟಕ್ಕೆ ಸೇರಿಸಿಲ್ಲ. ವಲಸಿಗರ ಕೋಟಾದಲ್ಲಿ ಮಂತ್ರಿಗಳಾಗಿದ್ದ ಆರ್.ಶಂಕರ್‌ ಮತ್ತು ಶ್ರೀಮಂತ ಪಾಟೀಲ್‌ ಅವರಿಗೂ ಕೊಕ್‌ ಕೊಡಲಾಗಿದೆ.

13 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ : ಕುತೂಹಲದ ಬೆಳವಣಿಗೆಯಲ್ಲಿ ಸಿಎಂ ಹುದ್ದೆಯ ರೇಸ್​ನಲ್ಲಿದ್ದ ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್‌ ಅವರಿಗೆ ಮಂತ್ರಿಯಾಗುವ ಅವಕಾಶ ನಿರಾಕರಿಸಲಾಗಿದೆ. ಈ ಮಧ್ಯೆ ನೂತನ ಸಚಿವ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ ಎಂಬ ಅಂಶ ವಿವಾದಕ್ಕೆ ಕಾರಣವಾಗಿದೆ.

ಮೈಸೂರು, ಚಾಮರಾಜನಗರ, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ರಾಮನಗರ, ಕೊಡಗು, ದಾವಣಗೆರೆ, ಕೋಲಾರ, ಯಾದಗಿರಿ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಕೂಗು ಎದ್ದಿದೆ.

ಸಮಾನ ಆದ್ಯತೆ : ಸಂಪುಟ ರಚಿಸಲು ಎಂಟು ದಿನಗಳ ಕಸರತ್ತು ನಡೆದರೂ, ಅಂತಿಮವಾಗಿ ಮಾಜಿ ಸಿಎಂ ಯಡಿಯೂರಪ್ಪ, ಸಂಘ ಪರಿವಾರದ ನಾಯಕ ಬಿ ಎಲ್‌ ಸಂತೋಷ್‌ ಇಬ್ಬರ ಮಾತಿಗೂ ವರಿಷ್ಠರು ಸಮಾನ ಆದ್ಯತೆ ನೀಡಿರುವುದು ಇದರಿಂದ ಸ್ಪಷ್ಟವಾಗಿದೆ.

ಇಚ್ಛೆಗೆ ವಿರುದ್ಧವಾಗಿ ಹೋಗಲು ತಯಾರಿಲ್ಲ : ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಂಡಾಯ ನಾಯಕರಾಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ಸಿ ಪಿ ಯೋಗೇಶ್ವರ್‌ ಹಾಗೂ ಅರವಿಂದ ಬೆಲ್ಲದ್‌ ಅವರಿಗೆ ಮಂತ್ರಿಗಿರಿ ನೀಡದೇ ಇರುವುದು ಯಡಿಯೂರಪ್ಪ ಅವರ ಇಚ್ಛೆಗೆ ವಿರುದ್ಧವಾಗಿ ಹೋಗಲು ಹೈಕಮಾಂಡ್‌ ತಯಾರಿಲ್ಲ ಎಂಬುದನ್ನು ಹೇಳಿದಂತಾಗಿದೆ.

ಈ ಮಧ್ಯೆ ಮಂತ್ರಿಗಿರಿ ಸಿಗದ ಕಾರಣಕ್ಕಾಗಿ ಶಾಸಕ ನೆಹರೂ ಓಲೇಕಾರ್‌ ಸೇರಿದಂತೆ ಹಲವು ಶಾಸಕರು ಮತ್ತು ನಾಯಕರು ಅಸಮಾಧಾನಗೊಂಡಿದ್ದಾರಾದರೂ ಭಿನ್ನಮತ ಸ್ಫೋಟಗೊಳ್ಳುವ ಲಕ್ಷಣ ಕಂಡು ಬಂದಿಲ್ಲ. ಯಡಿಯೂರಪ್ಪ ಅವರ ಪದಚ್ಯುತಿಯ ಹಿನ್ನೆಲೆ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು ವ್ಯಕ್ತಪಡಿಸಿದರೂ ವರಿಷ್ಠರು ಅದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ.

ಬೊಮ್ಮಾಯಿ ಸುಮ್ಮನಾಗಬೇಕಾಯಿತು : ಒಂದು ಬಾರಿ ಶಾಸಕರೂ ಆಗದ ವಿಜಯೇಂದ್ರ ಅವರನ್ನು ಏಕಾಏಕಿ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಮುಂದೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ವರಿಷ್ಠರು ಹೇಳಿದ್ದರಿಂದ ಸಿಎಂ ಬೊಮ್ಮಾಯಿ ಸುಮ್ಮನಾಗಬೇಕಾಯಿತು.

ನೂತನ ಸಚಿವ ಸಂಪುಟದಲ್ಲಿ ಸುನಿಲ್ ಕುಮಾರ್‌, ಬಿ.ಸಿ ನಾಗೇಶ್‌, ಶಂಕರ ಪಾಟೀಲ್‌ ಮುನೇನಕೊಪ್ಪ, ಹಾಲಪ್ಪ ಆಚಾರ್‌, ಆರಗ ಜ್ಞಾನೇಂದ್ರ ಅವರಿಗೆ ಅವಕಾಶ ನೀಡಲಾಗಿದೆ. ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಆ ಸಮುದಾಯದ ಎಂಟು ಮಂದಿ ಅವಕಾಶ ಪಡೆದಿದ್ದಾರೆ.

ಒಕ್ಕಲಿಗರ ಕೋಟಾದಡಿ ಏಳು ಮಂದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಹಿಂದುಳಿದವರಿಗೆ ಏಳು ಮತ್ತು ಪರಿಶಿಷ್ಟರಿಗೆ ನಾಲ್ಕು, ಬ್ರಾಹ್ಮಣ ಕೋಟಾದಡಿ ಇಬ್ಬರಿಗೆ, ಒಬ್ಬ ಮಹಿಳೆ ಸೇರಿ 29 ಮಂದಿಗೆ ಅವಕಾಶ ನೀಡಲಾಗಿದೆ.

ಮಂತ್ರಿಮಂಡಲಕ್ಕೆ 29 ಮಂದಿ ಸೇರ್ಪಡೆಯಾಗಿರುವುದರಿಂದ ಈಗ ಬೊಮ್ಮಾಯಿ ಸರ್ಕಾರದ ಕ್ಯಾಬಿನೆಟ್‌ ಗಾತ್ರ 30ಕ್ಕೇರಿದೆ. ಉಳಿದಂತೆ ನಾಲ್ಕು ಸ್ಥಾನಗಳನ್ನು ಸೂಕ್ತ ಕಾಲದಲ್ಲಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ.

ಓದಿ: 29 ಸಚಿವರ ಪ್ರಮಾಣ : ಬೊಮ್ಮಾಯಿ ಸಂಪುಟ ಬಹುತೇಕ ಭರ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.