ಬೆಂಗಳೂರು : ರಾಜ್ಯದಲ್ಲಿ ಸಂಭವಿಸುತ್ತಿರುವ ಹತ್ಯೆಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಮಾಡುತ್ತಿರುವ ಒತ್ತಡಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
-
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 13, 2023 " class="align-text-top noRightClick twitterSection" data="
ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಹಾಗೂ ತಿ.ನರಸೀಪುರದ ವೇಣುಗೋಪಾಲ್ ಹತ್ಯೆ ಸಂಬಂಧ ಈಗಾಗಲೇ ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೆ ಕಾರಣವಾದ ಅಂಶವನ್ನು ಭೇದಿಸಿದ್ದಾರೆ. ಹೀಗಿರುವಾಗ CBIಗೆ ವಹಿಸುವಂತೆ BJPಯವರ ಒತ್ತಾಯವೇಕೆ?
BJPಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? https://t.co/aCAS4NaV2p
">1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 13, 2023

BJPಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? https://t.co/aCAS4NaV2p1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 13, 2023
ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಹಾಗೂ ತಿ.ನರಸೀಪುರದ ವೇಣುಗೋಪಾಲ್ ಹತ್ಯೆ ಸಂಬಂಧ ಈಗಾಗಲೇ ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೆ ಕಾರಣವಾದ ಅಂಶವನ್ನು ಭೇದಿಸಿದ್ದಾರೆ. ಹೀಗಿರುವಾಗ CBIಗೆ ವಹಿಸುವಂತೆ BJPಯವರ ಒತ್ತಾಯವೇಕೆ?
BJPಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? https://t.co/aCAS4NaV2p
ಬೆಳಗಾವಿ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಹಾಗೂ ತಿ.ನರಸೀಪುರದ ಯುವ ಬಿಗ್ರೇಡ್ ಸಂಚಾಲಕ ವೇಣುಗೋಪಾಲ್ ನಾಯಕ ಹತ್ಯೆ ಸಂಬಂಧ ಈಗಾಗಲೇ ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣವಾದ ಅಂಶವನ್ನು ಭೇದಿಸಿದ್ದಾರೆ. ಹೀಗಿರುವಾಗ ಸಿಬಿಐಗೆ ವಹಿಸುವಂತೆ ಬಿಜೆಪಿಯವರ ಒತ್ತಾಯವೇಕೆ? ಬಿಜೆಪಿಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದಡೆ ಕಾಂಗ್ರೆಸ್ ಪಕ್ಷ ಸಹ ಟ್ವೀಟ್ ಮಾಡಿ ಬಿಜೆಪಿಯ ನಿಲುವನ್ನು ಖಂಡಿಸಿದ್ದು, ಜೈನಮುನಿ ಹತ್ಯೆಯ ಪ್ರಕರಣ - 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ - ಹಣದ ವ್ಯವಹಾರ. ವೇಣುಗೋಪಾಲ್ ಹತ್ಯೆಯ ಪ್ರಕರಣ - 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ - ವೈಯುಕ್ತಿಕ ದ್ವೇಷ. ಬೆಂಗಳೂರಿನ ಜೋಡಿ ಕೊಲೆ ಪ್ರಕರಣ - 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ - ವೈಯುಕ್ತಿಕ ದ್ವೇಷ. ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿದ ನಮ್ಮ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಹೆಣ ಕಂಡೊಡನೆ ಹಾರಿ ಬರುವ ಬಿಜೆಪಿಗರಿಗೆ ತಮ್ಮ ಆಡಳಿತದಲ್ಲಿ ನಡೆದ ಹತ್ಯೆಗಳೆಷ್ಟು? ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ನೀಡಿದ್ದೇಕೆ ಎಂದು ಹೇಳುವರೇ? ಎಂದು ಪ್ರಶ್ನಿಸಿದೆ.
ಮಾಜಿ ಸಿಎಂ ಬೊಮ್ಮಾಯಿ ಒತ್ತಡ : ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಜೈನ ಮುನಿ ಹತ್ಯೆ ಹಾಗೂ ಬಿಜೆಪಿ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯನ್ನು ಖಂಡಿಸಿ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ವಿಧಾನಸಭೆಯ ಒಳಗೆ ಪ್ರತಿಭಟನೆ ನಡೆಸಿ ಬಾವಿಗಿಳಿದು ಧರಣಿ ನಡೆಸಿರುವ ಬಿಜೆಪಿ ನಾಯಕರು ಇದಾದ ಬಳಿಕ ನಿನ್ನೆ ವಿಧಾನಸೌಧ ಹಾಗೂ ವಿಕಾಸ ಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಸಿ ನಂತರ ಪಾದಯಾತ್ರೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಕಾರ್ಯ ಮಾಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ತಾವು ಮಧ್ಯ ಪ್ರವೇಶ ಮಾಡುವಂತೆ ಬಿಜೆಪಿ ರಾಜ್ಯಪಾಲರಿಗೆ ಒತ್ತಡ ಹೇರಿದೆ. ಅಲ್ಲದೇ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆಯೂ ಆಗ್ರಹ ಮಾಡುತ್ತಿದೆ. ಬಿಜೆಪಿಯ ಈ ಒತ್ತಡವನ್ನು ತಳ್ಳಿ ಹಾಕುತ್ತಿರುವ ಕಾಂಗ್ರೆಸ್ ನಾಯಕರು ರಾಜ್ಯ ಪೊಲೀಸರು ಈಗಾಗಲೇ ತಮ್ಮ ಕೆಲಸವನ್ನು ಮಾಡಿದ್ದು, ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಈ ವಿಚಾರವನ್ನು ಸಿಬಿಐಗೆ ವಹಿಸುವ ಅನಿವಾರ್ಯತೆ ಇಲ್ಲ. ನಮ್ಮ ಪೊಲೀಸರೇ ಇಂತಹ ತನಿಖೆಗಳನ್ನ ನಡೆಸಲು ಸಮರ್ಥರಿದ್ದಾರೆ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲ ಘಟನೆಗಳು ಜರುಗಿದ್ದು, ಇದನ್ನು ಮುಂದಿಟ್ಟು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ : ವೇಣುಗೋಪಾಲ್ ಕೊಲೆ ಪ್ರಕರಣ ಧರ್ಮ, ರಾಜಕೀಯದ ವ್ಯಾಪ್ತಿಗೆ ಬರುವುದಿಲ್ಲ: ಡಾ. ಎಚ್ ಸಿ ಮಹಾದೇವಪ್ಪ