ETV Bharat / state

ಬಿಜೆಪಿಯಿಂದ ರಾಜ್ಯಕ್ಕೆ ಬಂದ ಕೆಟ್ಟ ಹೆಸರನ್ನು ತೊಳೆಯುವ ಕೆಲಸ ಕಾಂಗ್ರೆಸ್ ಮಾಡಲಿದೆ: ಡಿಕೆಶಿ ಭರವಸೆ - ETV bharat political news

ಮಾರ್ಚ್ 9ರಂದು ಕಾಂಗ್ರೆಸ್​ ಪಕ್ಷವು ಕರ್ನಾಟಕ ಬಂದ್​ಗೆ ಕರೆ ನೀಡಿದ್ದು, ಶಾಂತಿಯುತವಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲದೇ ಕೇವಲ ಎರಡು ಗಂಟೆ ಪ್ರತಿಭಟನೆ ಮಾಡುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿದರು.

bjp-has-brought-bad-name-to-the-state-dk-shivakumar
ಬಿಜೆಪಿ ರಾಜ್ಯಕ್ಕೆ ತಂದ ಕೆಟ್ಟ ಹೆಸರನ್ನು ತೊಳೆಯುವ ಕೆಲಸ ಕಾಂಗ್ರೆಸ್ ಮಾಡಲಿದೆ: ಡಿಕೆಶಿ
author img

By

Published : Mar 6, 2023, 6:09 PM IST

ಬೆಂಗಳೂರು: ಬಿಜೆಪಿ ಪಕ್ಷ ರಾಜ್ಯಕ್ಕೆ ತಂದಿರುವ ಕೆಟ್ಟ ಹೆಸರನ್ನು ತೊಳೆಯುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸ ಬಳಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದೆ. ಬಿಜೆಪಿ ರಾಜ್ಯಕ್ಕೆ ಕೆಟ್ಟ ಹೆಸರನ್ನು ತಂದಿದೆ. ಅದನ್ನು ತೊಳೆಯುವ ಕೆಲಸಕ್ಕೆ ಕಾಂಗ್ರೆಸ್ ‌ಮುಂದಾಗಿದೆ ಎಂದು ಹೇಳಿದರು.

ಬೆಳಗಾವಿಯಿಂದ ಕಾಂಗ್ರೆಸ್ ಹೋರಾಟವನ್ನು ಆರಂಭಿಸುತ್ತಿದೆ. ಗಾಂಧೀಜಿ ಬ್ರಿಟಿಷರೇ ತೊಲಗಿ ಎಂದು ಆಂಗ್ಲರ ವಿರುದ್ಧ ಹೋರಾಟವನ್ನು ಆರಂಭಿಸಿದ್ದರು. ಅದೇ ರೀತಿ ಕಾಂಗ್ರೆಸ್ ಸಹ ಹೋರಾಟ ಮಾಡುತ್ತಿದೆ. ಮಾ.9 ರಂದು ಬಂದ್​ ಗೆ ಕರೆ ನೀಡಿದ್ದೇವೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಇವತ್ತು ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಾ ಇದ್ರು? ಚುನಾವಣೆ ಹತ್ತಿರವಾಗುತ್ತಿದೆ ಎಂದು ಆರೋಪ ‌ಮಾಡುತ್ತಿದ್ದಾರೆ. ನನ್ನ ಬಗ್ಗೆ ಕೂಡ ಟೀಕೆ ‌ಮಾಡಿದರು. ಯಾವುದಕ್ಕೆ ದಾಖಲೆ ಕೊಟ್ಟಿದ್ದಾರೆ. ದಾಖಲೆ ತೆಗೆದು ಕೇಸ್ ಮಾಡಲಿ ನೋಡೋಣ. ಈಗ ಸುಮ್ಮನೆ ಆರೋಪ ‌ಮಾಡುವುದು ಬೇಡ ಎಂದು ಬಿಜೆಪಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ: ಬಂದ್ ದಿನ ಪಿಯುಸಿ ಪರೀಕ್ಷೆ ಇರುವ ವಿಚಾರ ಮಾತನಾಡಿ, 9ರಂದು ಪಿಯುಸಿ ಪರೀಕ್ಷೆ ಇದೆ. ನಾವು ಯಾರಿಗೂ ತೊಂದರೆ ಕೊಡಲ್ಲ. ವಾಹನ ಬಂದ್ ಮಾಡಲ್ಲ, ಆಸ್ಪತ್ರೆ, ಸ್ಕೂಲ್​ಗೆ ನಾವು ತೊಂದರೆ ಕೊಡಲ್ಲ. ಕೇವಲ ಎರಡು ಗಂಟೆ ‌ಮಾತ್ರ ಪ್ರತಿಭಟನೆ ‌ಮಾಡುತ್ತೇವೆ. ವರ್ತಕರು, ವ್ಯಾಪಾರಸ್ಥರಿಗೆ ನಾವು ಮನವಿ ಮಾಡಿದ್ದೇವೆ. ಎರಡು ಗಂಟೆ ಮಾತ್ರ ನಮಗೆ ಸಮಯ ಕೋಡಿ. ಕಾರ್ಯಕರ್ತರು ಕೂಡ ಶಾಂತಿಯುತ ಪ್ರತಿಭಟನೆ ಮಾಡ್ತಾರೆ. ಕಾಂಗ್ರೆಸ್ಸಿನಿಂದ ಯಾವುದೇ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು ಹೆದ್ದಾರಿ ರಸ್ತೆಯಲ್ಲಿ ಗುಣಮಟ್ಟ ಇಲ್ಲ: ತರಾತುರಿಯಲ್ಲಿ ಪ್ರಧಾ‌ನಿ ಮೋದಿಯನ್ನ ಕರೆಸಿ ಮೈಸೂರು ಹೆದ್ದಾರಿ ರಸ್ತೆ ಉದ್ಘಾಟಿಸಲು ಬಿಜೆಪಿಯವರು ಹೊರಟಿದ್ದಾರೆ. ಮೊದಲು ಸರ್ವೀಸ್ ರಸ್ತೆಯನ್ನ ನಿರ್ಮಿಸಲಿ. ಆ ಬಳಿಕ ಟೋಲ್ ಸಂಗ್ರಹಕ್ಕೆ ಮುಂದಾಗಲಿ. ಅದು ಬಿಟ್ಟು ಜನರಿಗೆ ತೊಂದರೆ ಕೊಡೋದು ಬೇಡ. ನಮ್ಮ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿರೋದು. ಆಸ್ಕರ್‌ ಫರ್ನಾಂಡೀಸ್ ಇದಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ನಮ್ಮ ಕಾರುಗಳೇ ರಸ್ತೆಯಲ್ಲಿ ಸಂಚರಿಸುವಾಗ ಅಲುಗಾಡುತ್ತೆ. ಅಷ್ಟರಮಟ್ಟಿಗೆ ಗುಣಮಟ್ಟ ಇಲ್ಲದಂತೆ ಮಾಡಿದ್ದಾರೆ. ಹೈವೆ ಉದ್ದಕ್ಕೂ ಶೌಚಾಲಯವನ್ನ ನಿರ್ಮಿಸಿಲ್ಲ ಎಂದು ಹೇಳಿದರು.

ಸಚಿವ ನಾರಾಯಣ್ ಗೌಡ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸ್ಥಳೀಯ ನಾಯಕರ ವಿರೋಧ ವಿಚಾರ ಮಾತನಾಡಿ, ಸಚಿವ ಕೆ.ಸಿ.ನಾರಾಯಣ ಗೌಡರು ನಮ್ಮ ಜೊತೆ ಮಾತಾಡಿಲ್ಲ. ಬೇರೆಯವರು ಮಾತಾಡಿಲ್ಲ, ಯಾರಿಗೆ ಏನು ತೊಂದರೆ ಆಗಿದೆ ಎಂದು ಗೊತ್ತಿಲ್ಲ. ಅವೆಲ್ಲವೂ ನಾವು ನೋಡಿಕೊಳ್ಳುತ್ತೇವೆ. ವಿ.ಸೋಮಣ್ಣ ಸಹ ಯಾವತ್ತೂ ನನ್ನ ಜೊತೆ ಚರ್ಚೆ ಮಾಡಿಲ್ಲ. ನಿನ್ನೆ ನನಗೆ ಕಾಗದ ಬರೆದಿದ್ದರು. ಕನಕಪುರದಲ್ಲಿ ಹೌಸಿಂಗ್ ಬೋರ್ಡ್​ ಕಾರ್ಯಕ್ರಮ ಇದೆ ಬನ್ನಿ ಎಂದು ಕಾಗದ ಬರೆದಿದ್ದಾರೆ. ಯಾರಾದರೂ ಬರ್ತಾರೆ ಎಂದರೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಪಂಚಮಸಾಲಿ ನಿಯೋಗ ಭೇಟಿ : ಮಾಜಿ ಸಚಿವ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದವರ ನಿಯೋಗ ಇಂದು ಡಿ.ಕೆ.ಶಿವಕುಮಾರ್ ಭೇಟಿ ಮಾಡಿ, ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಲಾಯಿತು. ಈ ಬಾರಿ ಯುವಕರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಕಾಂಗ್ರೆಸ್, ಕೆಆರ್​ಎಸ್​ ಕಾರ್ಯಕರ್ತರಿಂದ ಮುತ್ತಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.