ಬೆಂಗಳೂರು: ಡಿ.ಕೆ. ಶಿವಕುಮಾರ್ ಮನೆಗೆ ಮಾಜಿ ಸಂಸದ ಶಿವರಾಮೇಗೌಡ ಭೇಟಿ ನೀಡಿ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ.
ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿ ಅವರು ದೊಡ್ಡ ಷಡ್ಯಂತ್ರ ಮಾಡ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ನಮ್ಮ ನಾಯಕರು, ನಮ್ಮ ಬಂಧು ನಾವು ಅವರ ಜೊತೆ ಇರುತ್ತೇವೆ ಎಂದಿದ್ದಾರೆ.
ಇಡಿ ನೋಟಿಸ್ ವಿಚಾರ ಪ್ರತಿಕ್ರಿಯೆ ನೀಡಿದ ಅವರು ಇದು ಹೊಸದೇನಲ್ಲ ನಡೆಯುತ್ತಾನೇ ಇರುತ್ತದೆ. ಬಿಜೆಪಿ ಅವರು ಕಿರುಕುಳ ಕೊಡ್ತಾನೆ ಇದ್ದಾರೆ. ಆದರೆ, ಡಿಕೆಶಿ ಅವರು ಯಾವುದೇ ಆತಂಕದಲ್ಲಿ ಇಲ್ಲ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ. ನಾನು ಅವರ ಜೊತೆ ದೆಹಲಿಗೆ ತೆರಳಿ ಇಡಿ ಕಚೇರಿಗೆ ಹೋಗ್ತಿವಿ ಎಂದರು.