ETV Bharat / state

ಕೊರೊನಾ ಸಂಕಷ್ಟದಲ್ಲೂ ಕೀಳು ರಾಜಕಾರಣ ಆರೋಪ - ಕೊರೊನಾ ಸಂಕಷ್ಟದಲ್ಲೂ ಕೀಳು ರಾಜಕಾರಣ

ಕೊರೊನಾ ಹಿನ್ನೆಲೆಯಲ್ಲಿ ಬಡವರಿಗಾಗಿ ಉಚಿತವಾಗಿ ದಿನಸಿ ಕಿಟ್​ಗಳನ್ನು ವಿತರಣೆ ಮಾಡುತ್ತಿದ್ದು, ಇದರಲ್ಲಿ ಕೆಲ ರಾಜಕೀಯ ಮುಖಂಡರು ತಮ್ಮ ತಮ್ಮ ವೋಟ್ ಬ್ಯಾಂಕ್​ಗಾಗಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ.

BJP govt using corona facilities: alligation by non party members
ಬಿಜೆಪಿಯೇತರ ಪಕ್ಷದ ಸದಸ್ಯರಿಂದ ಆರೋಪ
author img

By

Published : Apr 18, 2020, 5:48 PM IST

Updated : Apr 18, 2020, 6:04 PM IST

ಬೆಂಗಳೂರು: ರಾಜ್ಯ ಸರ್ಕಾರ ಉಚಿತವಾಗಿ ಬಡವರಿಗೆ ನೀಡುತ್ತಿರುವ ಹಾಲು, ದಿನಸಿ ಕಿಟ್​​ಗಳು ಬಡವರಿಗೆ ತಲುಪುತ್ತಿಲ್ಲ. ಬದಲಾಗಿ ರಾಜಕೀಯ ಮುಖಂಡರು ತಮ್ಮ ತಮ್ಮ ವೋಟ್​ ಬ್ಯಾಂಕ್​ಗಾಗಿ ಬಳಸಿಕೊಂಡು ಅನುಕೂಲಸ್ಥರಿಗೂ ಹಂಚುತ್ತಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ.

ಗಾಯತ್ರಿ ನಗರ ವಾರ್ಡ್​ ಕಾರ್ಪೋರೇಟರ್, ಚಂದ್ರಕಲಾ ಗಿರೀಶ್ ಲಕ್ಕಣ

ಈ ಸಂಬಂಧ ಗಾಯತ್ರಿ ನಗರ ವಾರ್ಡ್​ ಕಾರ್ಪೋರೇಟರ್ ಚಂದ್ರಕಲಾ ಗಿರೀಶ್ ಲಕ್ಕಣ್ಣ ಮಾತನಾಡಿದ್ದು, ನಮ್ಮ ವಾರ್ಡ್​ಗೆ ಉಚಿತ ಹಾಲು ಪೂರೈಕೆ ಆಗುತ್ತಿರಲಿಲ್ಲ. ಅಧಿಕಾರಿಗಳ ಬಳಿ ಕೇಳಿದಾಗ ಕೊಡಲು ಆರಂಭಿಸುತ್ತೇವೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕರು ಹಾಗೂ ಡಿಸಿಎಂಗಳು ತಮ್ಮ ಕಾರ್ಯಕರ್ತರೇ ಹಾಲು ಹಂಚುತ್ತಾರೆ ಎಂದು ಹೇಳಿದ್ದಾರೆ.

ಆದರೆ ಸರ್ಕಾರದಿಂದ ಕೊಡುತ್ತಿರುವ ಸೌಲಭ್ಯಗಳು ತಲುಪಬೇಕಾದ ಜನಕ್ಕೆ ತಲುಪುತ್ತಿಲ್ಲ. ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳತ್ತಿದ್ದಾರೆ. ಈ ಕುರಿತು ಆಯುಕ್ತರು, ಜಂಟಿ ಆಯುಕ್ತರಿಗೂ ದೂರು ಕೊಡಲಾಗಿದೆ. ಆದರೆ ಅವರೂ ಸರಿಯಾಗಿ ಸ್ಪಂದಿಸಿಲ್ಲ. ಬಡವರಿಗೆ, ನಿರ್ಗತಿಕರಿಗೆ ಹಾಲು, ಪಡಿತರ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

Last Updated : Apr 18, 2020, 6:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.