ETV Bharat / state

ವಿಧಾನಸಭೆ ಅಧಿವೇಶನದ ಕೊನೆ ದಿನ: ಕಾಂಗ್ರೆಸ್-ಬಿಜೆಪಿ 40% ಕಮಿಷನ್ ವಾರ್?​

ಕಮಿಷನ್ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಈ ವಿದ್ಯಮಾನವನ್ನು ಆಡಳಿತ ಪಕ್ಷ ಬಿಜೆಪಿ ನಿರೀಕ್ಷಿಸಿದ್ದು, ಕೌಂಟರ್​ ಆಗಿ ಕಾಂಗ್ರೆಸ್ ಕಾಲದ ಆಡಳಿತದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಲಿಸ್ಟ್​ನ್ನು ಪ್ರತಿದಾಳವನ್ನಾಗಿ ಉರುಳಿಸಲಿದೆ.

bjp-govt-commission-war-in-assembly-session
ವಿಧಾನಸಭೆ ಅಧಿವೇಶನದ ಅಂತಿಮ ದಿನ: ಕಾಂಗ್ರೆಸ್ - ಬಿಜೆಪಿ 40% ಕಮಿಷನ್ ವಾರ್​ ಸಾಧ್ಯತೆ
author img

By

Published : Sep 23, 2022, 10:57 AM IST

ಬೆಂಗಳೂರು: ರಾಜ್ಯದ ಮಳೆಗಾಲದ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ರಾಜಕೀಯ ಹೈಡ್ರಾಮಾ ನಡೆಯಲು ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷ ಬಿಜೆಪಿ ನಡುವೆ ಶೇ.40 ಕಮಿಷನ್ ಭ್ರಷ್ಟಾಚಾರ ಆರೋಪಗಳ ಬಗ್ಗೆ ವಾಕ್ಸಮರ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಬಿಎಂಎಸ್ ಟ್ರಸ್ಟ್​ ಅಕ್ರಮಗಳ ತನಿಖೆಗೆ ಜೆಡಿಎಸ್​ ಧರಣಿಯು ಸಹ ಕಲಾಪವನ್ನು ಮತ್ತಷ್ಟು ಕಾವೇರಿಸಲಿದೆ.

ಆಡಳಿತ ಪಕ್ಷವನ್ನ ಇಕ್ಕಿಟ್ಟಿಗೆ ಸಿಲುಕಿಸುವ ಯತ್ನ: ಕಮಿಷನ್ ಭ್ರಷ್ಟಾಚಾರ ಪ್ರಸ್ತಾಪಿಸಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಇದಕ್ಕೆ ಪ್ರತಿಯಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಗಳಲ್ಲಿನ ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಹಗರಣಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರುಗಳು ಸಿದ್ಧಪಡಿಸಿಕೊಂಡಿದ್ದಾರೆ.

ಕಮಿಷನ್ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಅದರ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಈ ವಿದ್ಯಮಾನವನ್ನು ಆಡಳಿತ ಪಕ್ಷ ಬಿಜೆಪಿಯು ನಿರೀಕ್ಷಿಸಿದ್ದು, ಕೌಂಟರ್​ ಆಗಿ ಕಾಂಗ್ರೆಸ್ ಕಾಲದ ಆಡಳಿತದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಲಿಸ್ಟ್​ನ್ನು ದಾಳಕ್ಕೆ ಪ್ರತಿದಾಳವನ್ನಾಗಿ ಉರುಳಿಸಲಿದೆ.

ಇದನ್ನೂ ಓದಿ: ಪೇ ಸಿಎಂ ಪೋಸ್ಟರ್ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಗಲಾಟೆ... ವಿಡಿಯೋ ನೋಡಿ

ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ 'ಪೇ ಸಿಎಂ' ಅಭಿಯಾನ ನಡೆಸಿ ಗಮನಸೆಳೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡಿರುವ ಕಾಂಗ್ರೆಸ್, ಶೇ. 40ರಷ್ಟು ಕಮಿಷನ್ ಆರೋಪಗಳನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಮತ್ತು ಅಧಿಕಾರಿಗಳ ವರ್ಗಾವಣೆಗೆ ಲಂಚದ ಹಣ ನಿಗದಿಪಡಿಸಿದ ಆರೋಪದ ಬಗ್ಗೆ 'ರೇಟ್ ಕಾರ್ಡ್​​​ ಮಂಡಿಸಿ ಬಿಜೆಪಿ ಸರ್ಕಾರವನ್ನು ಕೆಣಕಲಿದೆ.

ಕಾಂಗ್ರೆಸ್ ಶಾಸಕರು ಇವತ್ತಿನ ಅಧಿವೇಶನದಲ್ಲಿ ಕಮಿಷನ್ ಆರೋಪವನ್ನೆತ್ತಿ ಗಲಾಟೆ, ಧರಣಿ ನಡೆಸುವ ಸಾಧ್ಯತೆಗಳ ಅರಿವಿರುವ ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರು ಕಾಂಗ್ರೆಸ್ ಹಗರಣಗಳು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದಾಯ ತೆರಿಗೆ ದಾಳಿ ಮತ್ತು ಇಡಿ ತನಿಖೆಗೆ ಸಿಲುಕಿರುವ ಸಂಗತಿಯನ್ನ ದೊಡ್ಡಮಟ್ಟದಲ್ಲಿ ಪ್ರಸ್ಥಾಪಿಸಿ ಕಾಂಗ್ರೆಸ್ ಸದಸ್ಯರ ಬಾಯಿ ಮುಚ್ಚಿಸುವ ಯತ್ನ ನಡೆಸಲಿದೆ‌.

ಇದನ್ನೂ ಓದಿ: 40% ಬರಹವುಳ್ಳ ಮಾಸ್ಕ್ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು: ಪರಿಷತ್​​ನಲ್ಲಿ ಗದ್ದಲ

ಜೆಡಿಎಸ್ ಧರಣಿ ನಡೆಸಲು ನಿರ್ಧಾರ: ವಿಧಾನಸಭೆ ಅಧಿವೇಶನದ ಆರಂಭದಲ್ಲಿಯೇ ಇಂದು ಜೆಡಿಎಸ್​​ನ ಶಾಸಕರು ಬಿಎಂಎಸ್ ಶಿಕ್ಷಣ ದತ್ತಿ ಟ್ರಸ್ಟ್ ಅಕ್ರಮಗಳ ತನಿಖೆಗೆ ಆಗ್ರಹಿಸಿ ಧರಣಿ ನಡೆಸಲಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಮುಗಿಬೀಳಲಿದ್ದಾರೆ. ಸಚಿವರ ತಲೆದಂಡಕ್ಕೂ ಪಟ್ಟು ಹಿಡಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಜೆಡಿಎಸ್ ಶಾಸಕರ ಧರಣಿಯು ಕಾಂಗ್ರೆಸ್​​ನ ಕಮಿಷನ್ ಆರೋಪಗಳ ವಾಗ್ದಾಳಿಯ ದಿಕ್ಕನ್ನು ಬದಲಿಸುವ ಸಂಭವವೂ ಹೆಚ್ಚಾಗಿದೆ. ಬಿಎಂಎಸ್ ಅಕ್ರಮಗಳ ಬಗ್ಗೆ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದು ಕಲಾಪದ ಆರಂಭದಿಂದಲೇ ಬಾವಿಗಿಳಿದು ಧರಣಿ ನಡೆಸಲು ನಿರ್ಧರಿಸಿದೆ. ಇದರಿಂದ ಕಲಾಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ.

ಕಾಂಗ್ರೆಸ್​​ನ ಕಮಿಷನ್ ಆರೋಪ, ಜೆಡಿಎಸ್​ ಧರಣಿಗೆ ಪ್ರತ್ಯುತ್ತರವಾಗಿ ಬಿಜೆಪಿ ಶಾಸಕರು ಪ್ರಸ್ಥಾಪಿಸುವ ಸಂಗತಿಗಳಿಂದ ಕಲಾಪದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಲಿದೆ. ಇಂದಿನ ಸದನವನ್ನು ಸಮರ್ಥವಾಗಿ ನಡೆಸುವುದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಹ ಸವಾಲಾಗಿ ಪರಿಣಮಿಸಲಿದೆ.

ಇದನ್ನೂ ಓದಿ: ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.