ETV Bharat / state

ಬಿಜೆಪಿ ಸರ್ಕಾರದ ಆಯಸ್ಸು ಕೇವಲ ಎರಡು ತಿಂಗಳು ಮಾತ್ರ: ಮಾಜಿ ಸಿಎಂ ಭವಿಷ್ಯ - ಬಿಜೆಪಿ ಸರ್ಕಾರದ ಆಯಸ್ಸು ಕೇವಲ ಎರಡು ತಿಂಗಳು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮೈತ್ರಿ ಸರ್ಕಾರ ನೀಡಿದ್ದ ಅನುದಾನ ಕಡಿತ ಮಾಡಿದ ಕ್ರಮವನ್ನು ಖಂಡಿಸಿ ಸಿಎಂ ಬಿಎಸ್​ವೈ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಆಯಸ್ಸು ಕೇವಲ ಎರಡು ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
author img

By

Published : Oct 1, 2019, 6:27 PM IST

ಬೆಂಗಳೂರು: ಬಿಜೆಪಿ ಸರ್ಕಾರದ ಆಯಸ್ಸು ಕೇವಲ ಎರಡು ತಿಂಗಳು ಮಾತ್ರ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮೈತ್ರಿ ಸರ್ಕಾರ ನೀಡಿದ್ದ ಅನುದಾನ ಕಡಿತ ಮಾಡಿದ ಕ್ರಮವನ್ನು ಖಂಡಿಸಿ ಸಿಎಂ ಬಿಎಸ್​ವೈ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಇಂದು ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಗೊತ್ತಿದೆ, ಎರಡು ತಿಂಗಳ ಒಳಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಕಾದು ನೋಡಿ. ಯಡಿಯೂರಪ್ಪ ಎಷ್ಟು ದಿನ ಸರ್ಕಾರ ನಡೆಸುತ್ತಾರೆ? ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ನಾನು ನೀಡಿದ ಅನುದಾನ ಹಿಂಪಡೆಯುವುದೇ ಯಡಿಯೂರಪ್ಪನವರು ಎರಡು ತಿಂಗಳಲ್ಲಿ ಮಾಡಿದ ಸಾಧನೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಅಭಿವೃದ್ಧಿ ಅಂತು ಮಾಡುತ್ತಿಲ್ಲ. ಅಭಿವೃದ್ಧಿಗೆ ಕೊಟ್ಟ ಅನುದಾನ ಹಿಂಪಡೆದು ದ್ವೇಷದ ರಾಜಕಾರಣ ಮುಂದುವರೆಸಿದ್ದಾರೆ. ಮುಖ್ಯಮಂತ್ರಿಯವರ ಈ ಧೋರಣೆ ಬದಲಾಗಬೇಕು ಎಂದರು. ಕುತಂತ್ರ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ವರ್ಗಾವಣೆ ಮೂಲಕ ಸಾವಿರಾರು ಕೋಟಿ ಲೂಟಿ ಹೊಡೆದಿದೆ ಎಂದು ದೂರಿದರು.

ಬಿಜೆಪಿ ಸರ್ಕಾರದ ಕುರಿತು ಭವಿಷ್ಯ ನುಡಿದ ಮಾಜಿ ಸಿಎಂ

ಯಾವುದೇ ಕುತಂತ್ರದ ರಾಜಕಾರಣಕ್ಕೆ ನಾನು ತಲೆ ಬಗ್ಗಿಸುವುದಿಲ್ಲ. ನಾನು ನಾನು ತಲೆ ಬಗ್ಗಿಸುವುದು ನನ್ನನ್ನು ನಂಬಿದ ಜನರ ಅಭಿವೃದ್ಧಿಗಾಗಿ ಮಾತ್ರ. ಯಾರ ಮುಂದೆಯೂ ತಲೆ ಬಗ್ಗಿಸಿ ನಿಲ್ಲುವ ವ್ಯಕ್ತಿ ನಾನಲ್ಲ ಎಂದರು. ಇಂದು ಕೇವಲ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ದಾಸರಹಳ್ಳಿಯ ಜನ ಅತ್ಯಂತ ಮುಗ್ಧರು. ಆ ಜನರಿಗಾಗಿ ನಾನು ಯಾವುದೇ ಕೆಲಸ ಮಾಡಿ ಕೋಡುತ್ತೇನೆಂದು ಮುಖ್ಯಮಂತ್ರಿಯಾಗಿದ್ದಾಗ ಶಾಸಕ ಮಂಜುನಾಥ್​​ಗೆ ಹೇಳಿದ್ದೆ. ಆ ಸಂದರ್ಭದಲ್ಲಿ ಅವರು ಮಾಡಿದ ಮನವಿಗೆ ತಕ್ಷಣ ಸುಮಾರು 600 ಕೋಟಿ ರೂ. ಅನುದಾನ ನೀಡಿದ್ದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಎರಡು ಲಕ್ಷ ಕೋಟಿ ವೆಚ್ಚ ಮಾಡಿ ಅಮೆರಿಕಗೆ ಹೋಗಿ ಭಾಷಣ ಬಿಗಿಯುತ್ತಿದ್ದಾರೆ ಎಂದು ಕಿಡಿಕಾರಿದರು.

ಫೋನ್ ಕದ್ದಾಲಿಕೆ ಪ್ರಕರಣದ ವಿಚಾರವಾಗಿ ಕುಮಾರಸ್ವಾಮಿಗೆ ಸಂಕಷ್ಟ ಎಂದು ಸುದ್ದಿ ಮಾಡುತ್ತಿದ್ದೀರಾ. ಸಿಬಿಐ ಅಲ್ಲ ಅವರ ಅಪ್ಪ ಬಂದರು ನನಗೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಯಾವ ಸ್ವಾಮೀಜಿಯ ಆದೇಶದ ಮೇರೆಗೆ ನಾನು ಅಮೆರಿಕಗೆ ಹೊಗಿದ್ದೆನೋ ಅದೇ ಸ್ವಾಮೀಜಿಯ ಫೋನ್​ ಟ್ಯಾಪಿಂಗ್ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನನ್ನ ಮತ್ತು ಸ್ವಾಮೀಜಿ ಅವರ ನಡುವಿನ ಸಂಬಂಧ ಹಾಳು ಮಾಡಲು ಕುತಂತ್ರ ಮಾಡಲಾಗುತ್ತಿದೆ ಎಂದು ದೂರಿದರು.

Intro:ಬೆಂಗಳೂರು : ಬಿಜೆಪಿ ಸರ್ಕಾರದ ಆಯಸ್ಸು ಕೇವಲ ಎರಡು ತಿಂಗಳು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.Body:ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮೈತ್ರಿ ಸರ್ಕಾರ ನೀಡಿದ್ದ ಅನುದಾನ ಕಡಿತ ಮಾಡಿದ ಕ್ರಮವನ್ನು ಖಂಡಿಸಿ, ಬಿಎಸ್ ವೈ ಮಾಡುತ್ತಿರುವ ದ್ವೇಶದ ರಾಜಕಾರಣದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಇಂದು ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಗೊತ್ತಿದೆ. ಎರಡು ತಿಂಗಳ ಒಳಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಕಾದು ನೋಡಿ, ಯಡಿಯೂರಪ್ಪ ಎಷ್ಟು ದಿನ ಸರ್ಕಾರ ನಡೆಸುತ್ತಾರೆ ? ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ನಾನು ನೀಡಿದ ಅನುದಾನ ಹಿಂಪಡೆಯುವುದೇ ಯಡಿಯೂರಪ್ಪನವರ ಎರಡು ತಿಂಗಳಲ್ಲಿ ಮಾಡಿದ ಸಾಧನೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಅಭಿವೃದ್ಧಿ ಅಂತು ಮಾಡುತ್ತಿಲ್ಲ. ಅಭಿವೃದ್ದಿಗೆ ಕೊಟ್ಟ ಅನುದಾನ ಹಿಂಪಡೆದು ದ್ವೇಶದ ರಾಜಕಾರಣ ಮುಂದುವರೆಸಿದ್ದಾರೆ. ಮುಖ್ಯಮಂತ್ರಿಯವರ ಈ ಧೋರಣೆ ಬದಲಾಗಬೇಕು ಎಂದರು.
ಕುತಂತ್ರ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ವರ್ಗಾವಣೆ ಮೂಲಕ ಸಾವಿರಾರು ಕೋಟಿ ಲೂಟಿಹೊಡೆದಿದ್ದೆ, ಬಿಜೆಪಿಯ ಎರಡು ತಿಂಗಳ ಅಧಿಕಾರದಲ್ಲಿ ಮಾಡಿದ ಸಾಧನೆ.
ಇಂತಹ ನಾಚಿಕೆ ಗೇಡಿ‌ ಸರ್ಕಾರ ರಾಜ್ಯದಲ್ಲಿದೆ ಎಂದು ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ಕುತಂತ್ರದ ರಾಜಕಾರಣಕ್ಕೆ ನಾನು ತಲೆ ಬಗ್ಗಿಸುವುದಿಲ್ಲ. ನಾನು ನಾನು ತಲೆ ಬಗ್ಗಿಸುವುದು ನನ್ನನ್ನು ನಂಬಿದ ಜನರ ಅಭಿವೃದ್ಧಿಗಾಗಿ ಮಾತ್ರ. ಯಾರ ಮುಂದೆಯೂ ತಲೆ ಬಗ್ಗಿಸಿ ನಿಲ್ಲುವ ವ್ಯಕ್ತಿ ನಾನಲ್ಲ ಎಂದರು.
ಇಂದು ಕೇವಲ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ರೆ
ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ದಾಸರಹಳ್ಳಿಯ ಜನ ಅತ್ಯಂತ ಮುಗ್ಧರು. ಆ ಜನರಿಗಾಗಿ ನಾನು ಯಾವುದೇ ಕೆಲಸ ಮಾಡಿ ಕೋಡುತ್ತೇನೆಂದು ಮುಖ್ಯಮಂತ್ರಿಯಾಗಿದ್ದಾಗ ಶಾಸಕ ಮಂಜುನಾಥ್ ಗೆ ಹೇಳಿದ್ದೆ. ಆ ಸಂದರ್ಭದಲ್ಲಿ ಅವರು ಮಾಡಿದ ಮನವಿಗೆ ತಕ್ಷಣ ಸುಮಾರು 600 ಕೋಟಿ ರೂ. ಅನುದಾನ ನೀಡಿದ್ದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಎರಡು ಲಕ್ಷ ಕೋಟಿ ವೆಚ್ಚ ಮಾಡಿ. ಅಮೆರಿಕಾಗೆ ಹೋಗಿ ಭಾಷಣ ಬಿಗಿಯುತ್ತಿದ್ದಾರೆ. ಈ ದೇಶದ ಮಹಿಳೆಯರು ದೇವತೆಯರಂತೆ. ಕೇವಲ ಭಾಷಣ ಮಾಡುತ್ತಾ ಸುತ್ತುತ್ತಿರುವ ಮೋದಿಯವರೆ ನಾಚಿಕೆ ಆಗಲ್ವೆ ಎಂದು ಕಿಡಿಕಾರಿದರು.
ಫೋನ್ ಕದ್ದಾಲಿಕೆ ಪ್ರಕರಣದ ವಿಚಾರವಾಗಿ ಕುಮಾರಸ್ವಾಮಿ ಗೆ ಸಂಕಷ್ಟ ಎಂದು ಸುದ್ದಿ ಮಾಡುತ್ತಿದ್ದೀರಾ, ಸಿಬಿಐ ಅಲ್ಲ ಅವರ ಅಪ್ಪ ಬಂದರು ನನಗೆ ಏನು ಮಾಡುವುದಕ್ಕೆ ಸಾಧ್ಯವಿಲ್ಲ.
ಯಾವ ಸ್ವಾಮಿಜಿಯ ಆದೇಶದ ಮೇರೆಗೆ ನಾನು ಅಮೆರಿಕಾಗೆ ಹೊಗಿದ್ದೆನೋ, ಅದೇ ಸ್ವಾಮೀಜಿಯ ಟ್ಯಾಪಿಂಗ್ ಮಾಡಲು ನಾನು ಸಾಧ್ಯವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ನನ್ನ ಮತ್ತು ಸ್ವಾಮೀಜಿ ಅವರ ನಡುವಿನ ಸಂಬಂಧ ಹಾಳು ಮಾಡಲು ಕುತಂತ್ರ ಮಾಡಲಾಗುತ್ತಿದೆ ಎಂದು ದೂರಿದರು.
ಯಡಿಯೂರಪ್ಪ ನವರು ಶಿಕಾರಿಪುರ ಕ್ಷೇತ್ರದ ಒಂದೇ ಯೋಜನೆಗೆ 800 ಕೋಟಿ ರೂ. ನೀಡುತ್ತಿದ್ದಾರೆ. ಆದರೆ, ನಾನು ಬೇರೆ ಕ್ಷೇತ್ರಗಳಿಗೆ ನೀಡಿದ ಅನುದಾನ ಹಿಂಪಡೆಯುತ್ತಿದ್ದಾರೆ. ಅಂದು ಮಂಡ್ಯ ಹಾಗೂ ಹಾಸನ ಜಿಲ್ಲೆಯ ಮುಖ್ಯಮಂತ್ರಿ ಅಂತಾ ನನಗೆ ಟೀಕೆ ಮಾಡಿದ್ರು. ಇಂದು ಯಡಿಯೂರಪ್ಪನವರೇನು ಶಿಕಾರಿಪುರ ಕ್ಷೇತ್ರದ ಮುಖ್ಯಮಂತ್ರಿಗಳಾ ? ಎಂದು ವ್ಯಂಗ್ಯವಾಡಿದರು.
ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಮಾತನಾಡಿ, ಕುಮಾರಣ್ಣನವರು ಮುಖ್ಯಮಂತ್ರಿ ಇದ್ದಾಗ ದಾಸರಹಳ್ಳಿ ಅಭಿವೃದ್ಧಿಗೆ ನಾನು ಕೇಳಿದಷ್ಟು ಅನುದಾನ ಕೊಟ್ಟು ಹಾಯ ಮಾಡಿದ್ರು. ನನ್ನ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ನೀಡಿದ್ರು. ಆದರೆ ಅಡ್ಡ ದಾರಿಯ ಮೂಲಕ ಸರ್ಕಾರ ರಚನೆ ಮಾಡಿ ದ್ವೇಶದ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪನವರು, ನಮ್ಮ ಕ್ಷೇತ್ರಕ್ಕೆ ನೀಡಿದ 600 ಕೋಟಿ ರೂ. ಹಿಂಪಡೆದು ಕೇವಲ 20 ಕೋಟಿ ರೂ. ನೀಡಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿವೇನು ಗುಟಾ ಹೊಡೆದು ಕುಳಿತುಕೊಳ್ಳಲು ಸಾಧ್ಯವಿಲ್ಲ.
ನಿವಾದ ಮೇಲೆ ಇನ್ನೊಬ್ಬರು ಸಿಎಂ ಆಗೆ ಆಗ್ತಾರೆ. ಆದರೆ, ಇರುವಷ್ಟು ದಿನ ರಾಜ್ಯದ ಅಭಿವೃದ್ಧಿ ಮಾಡಿ. ಅದನ್ನು ಬಿಟ್ಟು ದ್ವೇಶದ ರಾಜಕಾರಣ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ನಾನು ಆಸೆ ಆಮಿಷಗಳಿಗೆ ಒಳಪಡುವ ವ್ಯಕ್ತಿ ಅಲ್ಲ. ನನಗೆ ಆಸೆ ಆಮಿಷ ಇದ್ದಿದ್ರೆ ಯಾವತ್ತೋ ಆಪರೆಷನ್ ಕಮಲಕ್ಕೆ ಒಳಗಾಗುತ್ತಿದ್ದೆ. ನನ್ನನ್ನು ಬೆಳೆಸಿದ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದರು.
ದಾಸರಹಳ್ಳಿ ಎಂಇಎಸ್ ಆಟದ ಮೈದಾನದಿಂದ ಜಾಲಹಳ್ಳಿ ಕ್ರಾಸ್ ವರೆಗೂ ಪ್ರತಿಭಟನಾ ರ್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಪ್ರಚಾರದ ವಾಹನ ಇಳಿದು ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಜಾಲಹಳ್ಳಿ ಕ್ರಾಸ್ ವರೆಗೂ ಆಗಮಿಸಿದರು. ಈ ವೇಳೆ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.