ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯದ ಸಂರಕ್ಷಣೆಗಾಗಿ ದುಡಿವ ಕಾವಲುಗಾರರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಸಂಬಳ ಸಿಗದಿರುವ ಸಂಗತಿ ನಮ್ಮ ರಾಜ್ಯದ ಆಡಳಿತ ಎತ್ತ ಸಾಗುತ್ತಿದೆ ಎಂಬುದರ ಸಂಕೇತ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಸಂಬಳ ಕೊಡದೇ ಏಕೆ ಸತಾಯಿಸುತ್ತಿದ್ದೀರಿ? ಎಂದು ಜೆಡಿಎಸ್ ಪ್ರಶ್ನಿಸಿದೆ.
-
ತೋಟಗಾರಿಕಾ ಬೆಳೆಗಾರರಿಗೆ ಮಾರುಕಟ್ಟೆಯ ಬಲ ನೀಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣು-ತರಕಾರಿ ಪೂರೈಸುವ ಉದ್ದೇಶದಿಂದ ಆರಂಭವಾದ ಹಾಪ್ ಕಾಮ್ಸ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ನಷ್ಟದ ಹಾದಿಯಲ್ಲಿ ಮುಂದುವರಿದಿರುವ ಬಗ್ಗೆ ಮಾಧ್ಯಮದಲ್ಲಿ ವಿವರವಾಗಿ ವರದಿಯಾಗಿದೆ.
— Janata Dal Secular (@JanataDal_S) February 13, 2023 " class="align-text-top noRightClick twitterSection" data="
1/7 pic.twitter.com/qHg41aPmfF
">ತೋಟಗಾರಿಕಾ ಬೆಳೆಗಾರರಿಗೆ ಮಾರುಕಟ್ಟೆಯ ಬಲ ನೀಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣು-ತರಕಾರಿ ಪೂರೈಸುವ ಉದ್ದೇಶದಿಂದ ಆರಂಭವಾದ ಹಾಪ್ ಕಾಮ್ಸ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ನಷ್ಟದ ಹಾದಿಯಲ್ಲಿ ಮುಂದುವರಿದಿರುವ ಬಗ್ಗೆ ಮಾಧ್ಯಮದಲ್ಲಿ ವಿವರವಾಗಿ ವರದಿಯಾಗಿದೆ.
— Janata Dal Secular (@JanataDal_S) February 13, 2023
1/7 pic.twitter.com/qHg41aPmfFತೋಟಗಾರಿಕಾ ಬೆಳೆಗಾರರಿಗೆ ಮಾರುಕಟ್ಟೆಯ ಬಲ ನೀಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣು-ತರಕಾರಿ ಪೂರೈಸುವ ಉದ್ದೇಶದಿಂದ ಆರಂಭವಾದ ಹಾಪ್ ಕಾಮ್ಸ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ನಷ್ಟದ ಹಾದಿಯಲ್ಲಿ ಮುಂದುವರಿದಿರುವ ಬಗ್ಗೆ ಮಾಧ್ಯಮದಲ್ಲಿ ವಿವರವಾಗಿ ವರದಿಯಾಗಿದೆ.
— Janata Dal Secular (@JanataDal_S) February 13, 2023
1/7 pic.twitter.com/qHg41aPmfF
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕಳ್ಳಬೇಟೆ, ಅಗ್ನಿದುರಂತ ತಡೆ ಸೇರಿದಂತೆ ಕಾಡಿನ ರಕ್ಷಣೆಗೆ ಬೆವರು ಹರಿಸುವ ಹೊರಗುತ್ತಿಗೆ ನೌಕರರನ್ನು ರಾಜ್ಯ ಬಿಜೆಪಿ ಸರ್ಕಾರ ನಡೆಸಿಕೊಳ್ಳುತ್ತಿರುವ ಪರಿ ಇದು. ಕಡಿಮೆ ಸಂಬಳ ಪಡೆಯುವ ಇವರಿಗೆ ಮೂರ್ನಾಲ್ಕು ತಿಂಗಳಿಂದ ವೇತನವೇ ಸಿಕ್ಕಿಲ್ಲವೆಂದರೆ ಹೇಗೆ? ಹಣದುಬ್ಬರದ ಈ ದಿನಗಳಲ್ಲಿ ಕಾವಲುಗಾರರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ ಎಂದು ಹೇಳಿದೆ.
ನಿರ್ಲಕ್ಷ ತೋರಿರುವುದು ಖಂಡನೀಯ:ರಾಜ್ಯದ ಕೆಲವು ಸಂರಕ್ಷಿತ ಅರಣ್ಯ, ಅಭಯಾರಣ್ಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವವರಿಗೂ ನಿಯಮಿತವಾಗಿ ಸಂಬಳವಾಗದ ಮಾಹಿತಿ ವರದಿಯಾಗಿದೆ. ಆಡಳಿತಕ್ಕೆ ಮಾನವಿಯತೆ ಇಲ್ಲದಿದ್ದರೆ ಹೀಗಾಗುತ್ತದೆ. ಇಲಾಖೆಯ ಅಧಿಕಾರಿಗಳು ಈ ಮಟ್ಟದ ನಿರ್ಲಕ್ಷ ತೋರಿರುವುದು ಖಂಡನೀಯ. ನಿಜ ಅರ್ಥದಲ್ಲಿ ಅರಣ್ಯದ ಕಾವಲು ಮಾಡುವವರ ಆರ್ಥಿಕ ಭದ್ರತೆ, ರಕ್ಷಣೆಯ ವಿಷಯವನ್ನು ಇಷ್ಟು ಲಘುವಾಗಿ ತೆಗೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಿಡಿಯುವ ಹೃದಯ ಇಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ. ಇದೇ ಕಾರಣಕ್ಕೆ ಕಾವಲುಗಾರರು ಸಂಬಳ ನೀಡುವವರೆಗೂ ಕೆಲಸಕ್ಕೆ ಹಾಜರಾಗಲು ಒಪ್ಪುತ್ತಿಲ್ಲ ಎಂದು ಹೇಳಿದೆ.
ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರದಿಂದ ಕೆಲ ಅನುದಾನಗಳು ಬಾರದ ಕಾರಣ ಸಂಬಳ ಪಾವತಿಯಾಗಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನು ಬೇಜವಾಬ್ದಾರಿ ಸಮರ್ಥನೆ ಎಂದೇ ಕರೆಯಬೇಕಾಗುತ್ತದೆ. ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಇಷ್ಟು ದಿನಗಳು ಬೇಕಾದವೆ? ಎಂದು ಪ್ರಶ್ನಿಸಿದೆ. ಬೇಸಿಗೆ ಕಾಲ ಆರಂಭವಾಗುತ್ತಿದೆ. ತಾಪಮಾನ ಹೆಚ್ಚುವುದರಿಂದ ಕಾಡ್ಗಿಚ್ಚಿನ ಸಮಸ್ಯೆ ಎಲ್ಲೆಡೆ ಸಂಭವಿಸುತ್ತದೆ. ಈ ಸಮಯದಲ್ಲಿ ಕಾವಲುಗಾರರು ಕೆಲಸದಿಂದ ವಿಮುಖರಾಗದಂತೆ ಅರಣ್ಯ ಇಲಾಖೆ ಅವರ ಮನವೊಲಿಸಬೇಕು. ಅವರಿಗೆ ನೀಡಬೇಕಿರುವ ಸಂಬಳ ಪಾವತಿಯಾಗಲೇಬೇಕು. ಅವರೇ ಅಲಭ್ಯರಾದರೆ, ಕಾಳ್ಗಿಚ್ಚು ನಿಭಾಯಿಸುವುದು ಅಸಾಧ್ಯ ಎಂದಿದೆ.
ಹಾಪ್ ಕಾಮ್ಸ್ ಗಳು ಹೊಸ ತಂತ್ರಜ್ಞಾನಗಳ ಅಳವಡಿಸುವಲ್ಲಿ ಸೋತಿವೆ :ಇನ್ನು ತೋಟಗಾರಿಕಾ ಬೆಳೆಗಾರರಿಗೆ ಮಾರುಕಟ್ಟೆಯ ಬಲ ನೀಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣು-ತರಕಾರಿ ಪೂರೈಸುವ ಉದ್ದೇಶದಿಂದ ಆರಂಭವಾದ ಹಾಪ್ ಕಾಮ್ಸ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ನಷ್ಟದ ಹಾದಿಯಲ್ಲಿ ಮುಂದುವರಿದಿವೆ ಎಂದು ಜೆಡಿಎಸ್ ಹೇಳಿದೆ. ಮುಕ್ತ ಮಾರುಕಟ್ಟೆಯ ಕಾರಣದಿಂದ ತೀವ್ರವಾದ ಸ್ಪರ್ಧೆ ಎದುರಿಸಬೇಕಿರುವ ಹಾಪ್ ಕಾಮ್ಸ್ ಗಳು ಹೊಸ ತಂತ್ರಜ್ಞಾನಗಳ ಅಳವಡಿಸುವಲ್ಲಿ ಸೋತಿವೆ. ವಿಸ್ತರಣೆಯಾಗದ ವ್ಯಾಪಾರ ಚಟುವಟಿಕೆಗಳು, ಮಾರುಕಟ್ಟೆಯ ಏರಿಳಿತಗಳ ಅಸಮರ್ಪಕ ನಿರ್ವಹಣೆ, ಪೂರೈಕೆ ಜಾಲ ವ್ಯವಸ್ಥಿತವಾಗದೇ ಇರುವುದು ಹೀಗೆ ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದೆ.
ಹಾಪ್ ಕಾಮ್ಸ್ ಮಾರಾಟ ಮಳಿಗೆಗಳು ಮುಚ್ಚುವ ದಿನಗಳು ದೂರವಿಲ್ಲ: ಈ ರೀತಿಯ ದೂರದೃಷ್ಟಿತ್ವ ಇರುವ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದಷ್ಟೇ ಗೊತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹಾಪ್ ಕಾಮ್ಸ್ ಗಳನ್ನು ಉದ್ಧರಿಸುವ ಆಸಕ್ತಿ, ಬದ್ಧತೆ ಇಲ್ಲ. ಬೆಳೆಗಾರರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತೆ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಗಬೇಕಿದೆ ಎಂದು ಹೇಳಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಾಪ್ ಕಾಮ್ಸ್ ಮಾರಾಟ ಮಳಿಗೆಗಳು ಮುಚ್ಚುವ ದಿನಗಳು ದೂರವಿಲ್ಲ. ರೈತರು ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಿಲ್ಲದೆ ಸೃಷ್ಟಿಯಾಗಿದ್ದ ಕೊಂಡಿಯೊಂದು ಕಳಚುವ ಆತಂಕ ನಿಜವಾಗುತ್ತಿದೆ. ಹಾಗಾಗದಿರಲು, ಹಾಪ್ ಕಾಮ್ಸ್ ಗಳ ಸಮಗ್ರ ಅಭಿವೃದ್ಧಿ ಅತ್ಯಗತ್ಯ ಎಂದು ಹೇಳಿದೆ.
ಇದನ್ನೂ ಓದಿ:ಲಭ್ಯತೆ ಆಧಾರದ ಮೇಲೆ ದೇವಸ್ಥಾನಗಳಿಗೆ ಜಮೀನು ಮಂಜೂರು: ಸಚಿವ ಆರ್. ಅಶೋಕ್