ETV Bharat / state

ಬಿಜೆಪಿ ಸರ್ಕಾರದಿಂದ ಯಾವ ರೀತಿಯ ಭ್ರಷ್ಟಾಚಾರ ನಿಯಂತ್ರಣ ನಿರೀಕ್ಷಿಸಲು ಸಾಧ್ಯ? ಕೃಷ್ಣಬೈರೇಗೌಡ - ಬಿಜೆಪಿ ಪಕ್ಷದಲ್ಲಿ ಭ್ರಷ್ಟಾಚಾರ

ಸಿಎಂ ಯಡಿಯೂರಪ್ಪ ವಿರುದ್ಧ ದೇವನಹಳ್ಳಿ ತಾಲೂಕು ಕೆಐಎಡಿಬಿ ಲ್ಯಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನೀಡಿದೆ. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಓಡಾಡಿಕೊಂಡಿದ್ದಾರೆ. ಇಂತವರಿಂದ ಯಾವ ರೀತಿಯ ಭ್ರಷ್ಟಾಚಾರ ನಿಯಂತ್ರಣ ನಿರೀಕ್ಷಿಸಲು ಸಾಧ್ಯ ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು.

bjp government is Corrupted government : krishna byregowda
ಬಿಜೆಪಿ ಸರ್ಕಾರದಿಂದ ಯಾವ ರೀತಿಯ ಭ್ರಷ್ಟಾಚಾರ ನಿಯಂತ್ರಣ ನಿರೀಕ್ಷಿಸಲು ಸಾಧ್ಯ? ಕೃಷ್ಣಬೈರೇಗೌಡ
author img

By

Published : Mar 21, 2021, 10:49 PM IST

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಹಿಂದೆ ಲೋಕಪಾಲ್ ಬಿಲ್ ಜಾರಿಗೆ ತರುವಂತೆ ಒತ್ತಾಯಿಸಿದ್ದ ಅವರು ಇಂದು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಮತ್ತು ಬ್ರಿಜೇಶ್ ಕಾಳಪ್ಪ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಆದೇಶದಂತೆ ಇಂದು ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಲೋಕಪಾಲ್​ ಕಾಯ್ದೆ ಜಾರಿ ಬರಬೇಕು ಅಂತ ಹೋರಾಟ ಮಾಡಿದ್ದವರು ಇದೇ ಬಿಜೆಪಿವರು. ಆದ್ರೆ ಇಂದು ಆ ಬಗ್ಗೆ ಬಿಜೆಪಿಯ ಯಾವ ನಾಯಕರು ಮಾತನಾಡುತ್ತಿಲ್ಲ. ಕಪ್ಪು ಹಣ ದೇಶಕ್ಕೆ ವಾಪಸ್ ಬರುತ್ತೆ ಅಂತ ಹೇಳಿದ್ರು. ಆದ್ರೆ ಆ ಹಣ ವಾಸಪ್ ಬಂದಿಲ್ಲ. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇದ್ಯಾ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಕೃಷ್ಣಬೈರೇಗೌಡ

ಸಿಎಂ ಯಡಿಯೂರಪ್ಪ ವಿರುದ್ಧ ದೇವನಹಳ್ಳಿ ತಾಲೂಕು ಕೆಐಎಡಿಬಿ ಲ್ಯಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನೀಡಿದೆ. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಓಡಾಡಿಕೊಂಡಿದ್ದಾರೆ. ಇಂತವರಿಂದ ಯಾವ ರೀತಿಯ ಭ್ರಷ್ಟಾಚಾರ ನಿಯಂತ್ರಣ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರು. ತಮ್ಮ ವೈಯಕ್ತಿಕ ಲಾಭಕ್ಕಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಸ್ಪೆಷಲ್ ಕೋರ್ಟ್ ತಪ್ಪು ಮಾಡಿದೆ ಅಂತ ಹೈಕೋರ್ಟ್ ನ್ಯಾಯಮೂರ್ತಿ ಹೇಳಿದ್ದಾರೆ. ಯಡಿಯೂರಪ್ಪ ವಿರುದ್ಧ ಈ ಹಿಂದೆಯೇ ಚಾರ್ಜ್​ಶೀಟ್ ಸಲ್ಲಿಕೆಯಾಗಿರುವುದರಿಂದ ತನಿಖೆಗೆ ಒಳಪಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ಓದಿ: ರಮೇಶ್ ಜಾರಕಿಹೊಳಿ ಹೋದರೆ ಯಡಿಯೂರಪ್ಪ ಸರ್ಕಾರ ಜಾರಿ ಹೋಗುತ್ತೆ : ವಾಟಾಳ್ ನಾಗರಾಜ್

ವಿಚಾರಣೆ ನಡೆಯುವಾಗ ಯಡಿಯೂರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯಡಿಯೂರಪ್ಪ ತಮ್ಮ ಸ್ಥಾನದಲ್ಲಿ ಇರದೆ ರಾಜೀನಾಮೆ ಕೊಡಬೇಕು. ಆರ್​ಟಿಜಿಎಸ್​ನಲ್ಲೇ ಭ್ರಷ್ಟಾಚಾರ ನಡೆಸಿರುವ ದಾಖಲೆಯೂ ಇದೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತ ಬಿಜೆಪಿ ನಾಯಕರು ಹೇಳ್ತಿದ್ರು. ಈಗ ಯಡಿಯೂರಪ್ಪಗೆ ತಿನ್ಲಿಕ್ಕೆ ಬಿಟ್ಟಿದ್ದೀರಾ ಅಂದ್ರೆ ಇದರಲ್ಲಿ ನಿಮಗೂ ಪಾಲಿದೆಯಾ? ಎಂದು ಕೇಳಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಹಗರಣ, ಭ್ರಷ್ಟಾಚಾರ ಕಣ್ಣಿಗೆ ಕಂಡ್ರೂ ಏಕೆ ಮೋದಿ ಮತ್ತು ಬಿಜೆಪಿ ವರಿಷ್ಠರು ಮೌನವಾಗಿದ್ದಾರೆ? ತಕ್ಷಣವೇ ಯಡಿಯೂರಪ್ಪನವ್ರು ರಾಜೀನಾಮೆ ಕೊಡಬೇಕು. ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯಬಾರದು ಎಂದು ಕೃಷ್ಣಬೈರೇಗೌಡ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.