ETV Bharat / state

'ಟಿಪ್ಪು- ಹೈದರಾಲಿ ಹೆಸರು ತೆಗೆಯುವುದಾಗಿ ನಂಬಿಸಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ವಿಚಾರ ಕೈಬಿಟ್ಟ ಸರ್ಕಾರ'

ಈಗಿನ ಪಠ್ಯ ಪರಿಷ್ಕರಣೆ ವಿಷಯವು ಶಿಕ್ಷಕರಲ್ಲೂ ಗೊಂದಲು ಮೂಡಿಸುವಂತೆ ಇದೆ. ಬಸಣ್ಣನವರ ಬಗ್ಗೆ ಪಠ್ಯದಲ್ಲಿರುವ ವಿಚಾರವನ್ನು ಶಿಕ್ಷಕರು ಮಕ್ಕಳಿಗೆ ಹೇಳಬೇಕೆ? ಅಥವಾ ಬಸಣ್ಣನವರ ನಿಜವಾದ ವಿಚಾರಗಳನ್ನು ಹೇಳಬೇಕೆ?. ಪಠ್ಯದ ವಿಚಾರಗಳ ಬಿಟ್ಟು, ಶಿಕ್ಷಕರು ಬಸವಣ್ಣನವರ ನಿಜವಾದ ವಿಚಾರವನ್ನು ಹೇಳಿದರೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಡಾ.ಎಲ್.ಹನುಮಂತಯ್ಯ ಕಳವಳ ವ್ಯಕ್ತಪಡಿಸಿದರು.

bjp-government-dropped-buddha-basava-ambedkar-gandhi-and-kuvempu-matter-in-syllabus-says-l-hanumanthaiah
'ಟಿಪ್ಪು-ಹೈದರಾಲಿ ಹೆಸರು ತೆಗೆಯುವುದಾಗಿ ನಂಬಿಸಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ವಿಚಾರ ಕೈಬಿಟ್ಟ ಸರ್ಕಾರ'
author img

By

Published : Jul 12, 2022, 7:45 PM IST

ಬೆಂಗಳೂರು: ಬಿಜೆಪಿ ಸರ್ಕಾರ ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಹಾಗೂ ಹೈದರಾಲಿ ಅವರ ಪಠ್ಯ ತೆಗೆಯುತ್ತೇವೆ ಎಂದು ಜನರಿಗೆ ನಂಬಿಸಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ಅವರ ವಿಚಾರ ತಿರುಚುವ ಪ್ರಯತ್ನ ಮಾಡಿದೆ ಎಂದು ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಡಾ.ಎಲ್.ಹನುಮಂತಯ್ಯ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹೇಗೆ ನಮ್ಮ ದಾರಿ ತಪ್ಪಿಸುತ್ತಿದೆ ಎಂಬುದನ್ನು ಅರಿಯಬೇಕು. ಹಿಂದೂ ಮೂಲವಾದ ಪಠ್ಯವನ್ನು ತಯಾರು ಮಾಡುವ ನಿರೀಕ್ಷೆ ಇತ್ತು. ಆದರೆ, ಸತ್ಯದ ತಿರುಚುವಿಕೆ ಪ್ರಯತ್ನ ಮಾಡಿದ್ದಾರೆ. ನಮ್ಮ ಮಕ್ಕಳಲ್ಲಿ ಕಂದಾಚಾರಗಳನ್ನು ವಿರೋಧಿಸುವ ದೃಷ್ಟಿಕೋನಗಳು ಬರಬೇಕು. ಈಗಿನ ಪಠ್ಯದಲ್ಲಿ ಯಜ್ಞಯಾಗಾದಿಗಳ ಪುನರ್ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗಿದೆ ಎಂದು ದೂರಿದರು.

6ನೇ ತರಗತಿ ಸಮಾಜ ವಿಜ್ಞಾನ ಭಾಗ 1ರ ಹಳೆ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಎಂಬ ವಿಷಯವನ್ನು ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೊಸ ಪಠ್ಯದಲ್ಲಿ ಕಂದಾಚಾರಗಳ ಬಗ್ಗೆ ಸಕಾರಾತ್ಮಕವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.

ಅಲ್ಲದೇ, ಸ್ತ್ರೀ ವಿರೋಧಿಯಾಗಿದೆ. ಗಂಡು ಹಾಗೂ ಹೆಣ್ಣು ಸಮಾನರು ಎಂದು ಲಿಂಗ ಸಮಾನತೆ ಬಗ್ಗೆ ನಾವು ಮಕ್ಕಳಿಗೆ ಬೋಧನೆ ಮಾಡಬೇಕು. ಆದರೆ, 10ನೇ ತರಗತಿ ಪಠ್ಯದಲ್ಲಿ ಮಹಿಳಾ ನಿಂದನೆ ಅಂಶಗಳಿವೆ. ಎಲ್ಲರೂ ಹೆಣ್ಣಿಂದ ಮೋಸ ಹೋಗುವವರೇ. ಹೆಣ್ಣು ಚಂಚಲೆ, ಮೋಸ ಮಾಡುವವರು, ಅವರು ಅನೇಕರನ್ನು ಪ್ರೀತಿಸುತ್ತಾರೆ ಎಂದು ಅಪಮಾನಿಸಲಾಗಿದೆ. ಸ್ತ್ರೀ ವಿರೋಧಿಯ ಮೂಲ ಮನುಸ್ಮೃತಿಯಲ್ಲಿದೆ ಎಂದು ಕಿಡಿಕಾರಿದರು.

'ಟಿಪ್ಪು-ಹೈದರಾಲಿ ಹೆಸರು ತೆಗೆಯುವುದಾಗಿ ನಂಬಿಸಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ವಿಚಾರ ಕೈಬಿಟ್ಟ ಸರ್ಕಾರ'

ಬಸವಣ್ಣನವರು ವೈದಿಕ ಮೌಢ್ಯಾಚರಣೆಗಳನ್ನು ವಿರೋಧಿಸಿ, ದೇಹವೇ ದೇಗುಲ ಎಂಬ ವಿಚಾರಗಳು, ವಚನಕಾರರ ಅಂಶಗಳನ್ನು ಕೈಬಿಡಲಾಗಿದೆ. ಬದಲಿಗೆ ಬಸವಣ್ಣನವರನ್ನು ವಿರಶೈವ ಧರ್ಮ ಸ್ಥಾಪಿಸಿದವರು ಎಂದು ಹೇಳದೇ, ವೀರಶೈವ ಧರ್ಮ ಅಭಿವೃದ್ಧಿಪಡಿಸಿದವರು ಎಂದು ಹೇಳಲಾಗಿದೆ. ಆದರೆ, ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದವರೇ ಹೊರತು, ವೀರಶೈವ ಧರ್ಮವನ್ನು ಅಭಿವೃದ್ಧಿ ಪಡೆಸಲಿಲ್ಲ. ಹೊಸ ಪಂಥಗಳ ಮೂಲತತ್ವಗಳನ್ನು ಕೈಬಿಡಲಾಗಿದೆ. ಈ ಮೂಲಕ ಬಸವಣ್ಣನವರನ್ನು ವೈದಿಕೀಕರಣ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಆಕ್ಷೇಪ ಪಡಿಸಿದರು.

ಶಿಕ್ಷಕರು ಜೈಲಿಗೆ ಹೋದರೂ ಅಚ್ಚರಿ ಇಲ್ಲ: ಸರ್ಕಾರ ಬಸವಣ್ಣನವರ ವಿಚಾರ ಪರಿಷ್ಕರಿಸುತ್ತೇವೆ ಎಂದು ಹೇಳಿದೆಯೇ ಹೊರತು ಯಾವ ವಿಚಾರವನ್ನು ಎಂದು ಹೇಳಿಲ್ಲ. ಪಠ್ಯದಲ್ಲಿರುವ ವಿಚಾರವನ್ನು ಶಿಕ್ಷಕರು ಮಕ್ಕಳಿಗೆ ಹೇಳಬೇಕೆ? ಅಥವಾ ಬಸಣ್ಣನವರ ನಿಜವಾದ ವಿಚಾರಗಳನ್ನು ಹೇಳಬೇಕೆ?.

ಒಂದು ವೇಳೆ ಶಿಕ್ಷಕರು ಬಸವಣ್ಣನವರ ನಿಜವಾದ ವಿಚಾರವನ್ನು ಹೇಳಿದರೆ, ನಾಳೆ ಶಿಕ್ಷಕರ ವಿರುದ್ಧ ಪುಸ್ತಕದಲ್ಲಿ ಇರದ ವಿಚಾರ ಬೋಧನೆ ಮಾಡಿರುವುದಾಗಿ ದೂರು ಕೊಟ್ಟರೆ, ಆ ಶಿಕ್ಷಕರ ವಿರುದ್ಧ ಕೇಸು ದಾಖಲಾಗಬಹುದು. ಅಲ್ಲದೇ, ದೇಶದ್ರೋಹ ಅಥವಾ ಧರ್ಮದ್ರೋಹ ಆರೋಪದಲ್ಲಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ ಎಂದು ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.

ನಾರಾಯಣಗುರುಗಳ ವಿಚಾರದಲ್ಲೂ ವೈದಿಕ ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ, ನಾರಾಯಣಗುರುಗಳು ಒಂದು ದೈವ, ಒಂದು ಜಾತಿ, ಒಂದು ಧರ್ಮ ಎಂದು ಹೋರಾಟ ಮಾಡಿದವರು. ಅಸ್ಪೃಶ್ಯತೆ ವಿರುದ್ಧ ಬಹಳ ದೊಡ್ಡ ಹೋರಾಟ ಮಾಡಿದವರು. ಅವರ ಹೋರಾಟದಲ್ಲಿ ಗಾಂಧೀಜಿ, ಪೆರಿಯಾರ್ ಭಾಗವಹಿಸಿದ್ದರು.

ಅಂತಹ ವಿಚಾರ ಬಿಟ್ಟು, ಅವರು ಪ್ರತಿಪಾದನೆ ಮಾಡದ ವಿಚಾರವನ್ನು ಇದರಲ್ಲಿ ತಿಳಿಸಲಾಗಿದೆ. ಹೀಗಾಗಿ ನಾರಾಯಣ ಗುರುಗಳ ಕುರಿತ ಹಳೆಯ ಪಾಠವನ್ನೇ ಮುಂದುವರಿಸಿ ಎಂಬ ಒತ್ತಡ ಸಾರ್ವಜನಿಕರಿಂದಲೇ ಕೇಳಿಬಂದಿದೆ. ಆದರೂ, ಇಂತಹ ಪಠ್ಯವನ್ನೇ ಮುಂದುವರಿಸುವ ದುಸ್ಸಾಹಸಕ್ಕೆ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಕೆ.ಚಂದ್ರಶೇಖರ್ ಮಾತನಾಡಿ, ಸರ್ಕಾರ ಯಾಕೆ ಕುವೆಂಪು, ಅಂಬೇಡ್ಕರ್, ನೆಹರೂ ಹಾಗೂ ಗಾಂಧಿ ಅವರನ್ನು ಈ ರೀತಿ ಅಪಮಾನ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ರಾಜಸ್ಥಾನದಲ್ಲಿ 2015ರಲ್ಲಿ ಮಾಡಿದ ಪಠ್ಯ ಪರಿಷ್ಕರಣೆಯನ್ನೇ ಇಟ್ಟುಕೊಂಡು ಇಲ್ಲೂ ಮಾಡಲಾಗಿದೆ. ಗಾಂಧೀಜಿ ಅವರ ಹತ್ಯೆ ವಿಚಾರವನ್ನೇ ಪಠ್ಯದಿಂದ ಕೈಬಿಟ್ಟು, ಗೋಡ್ಸೆ ಕುರಿತು ಸ್ವಲ್ಪವೂ ಮಾಹಿತಿ ನೀಡಿಲ್ಲ. ಈ ವಿಚಾರವನ್ನು ಪಠ್ಯದಲ್ಲಿ ಯಾಕೆ ತೆಗೆಯಲಾಗಿದೆ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವರು ಮಕ್ಕಳಿಗೆ ಆರೋಗ್ಯಕರ ಚಿಂತನೆ ಬರುವ ಅಂಶವನ್ನು ಮಾತ್ರ ಹೇಳಬೇಕು ಎಂದು ಹೇಳಿದ್ದಾರೆ. ಆದರೆ, ಇವರ ಅಂಶಗಳು ಯಾವ ರೀತಿಯ ಆರೋಗ್ಯಕರ ಚಿಂತನೆ ಬರುತ್ತದೆ?. ಹಿಂದೂಗಳ ಹತ್ಯಾಕಾಂಡವನ್ನು ಪಠ್ಯದಲ್ಲಿ ಸೇರಿಸುವುದು ಮಕ್ಕಳಲ್ಲಿ ಆರೋಗ್ಯಕರ ಚಿಂತನೆ ರೂಪಿಸುತ್ತದೆಯೇ? ಎಂದು ಪ್ರಶ್ನಿಸಿದರು.

ಕುವೆಂಪು ಅವರಂತಹ ಮಹಾನ್ ವ್ಯಕ್ತಿಯನ್ನು ಒಂದು ಜಾತಿಯ ವ್ಯಕ್ತಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಶಿಕ್ಷಣ ಸಚಿವರು ನಿರ್ಮಲಾನಂದ ಸ್ವಾಮಿಜಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ನೀಡುತ್ತಾರೆ. ಒಕ್ಕಲಿಗ ಸಮುದಾಯದ ನಾಯಕರ ಮೂಲಕ ಸಮರ್ಥನೆಗೆ ಮುಂದಾಗುತ್ತಾರೆ. ಆರ್​.ಅಶೋಕ್ ಅವರಿಂದ ಪಠ್ಯ ಅತ್ಯುತ್ತಮವಾಗಿದೆ ಎಂದು ಹೇಳಿಸಿದರು. ಆ ಮೂಲಕ ಈ ವಿಚಾರವನ್ನು ಒಂದು ಜಾತಿ ವ್ಯಾಪ್ತಿಗೆ ಸೀಮಿತಗೊಳಿಸಲಾಯಿತು. ಅಂತಹ ವ್ಯಕ್ತಿಯನ್ನು ಈ ಮಟ್ಟಕ್ಕೆ ಇಳಿಸಿದರೆ ಮಕ್ಕಳು ಏನು ಯೋಚಿಸಬೇಕು. ಯಾಕಿಷ್ಟು ದ್ವೇಷ ಎಂದು ಚಂದ್ರಶೇಖರ್​ ಕಿಡಿಕಾರಿದರು.

ಕುವೆಂಪು ಅವರನ್ನು ದೂರ ಇಟ್ಟು, ಕುವೆಂಪು ಅವರು ಇತರರ ಸಹಾಯದೊಂದಿಗೆ ಮುಂದೆ ದೊಡ್ಡ ಕವಿ ಎನಿಸಿಕೊಂಡರು ಎಂದು ಹೇಳಿದರೆ ಇದು ಮುಟ್ಟಾಳತನವಲ್ಲವೇ?. ಇದನ್ನು ಕ್ಷಮಿಸಲು ಸಾಧ್ಯವೇ?. ಕುವೆಂಪು ಮೌಢ್ಯ, ಅಜ್ಞಾನವನ್ನು ನೇರವಾಗಿ ವಿರೋಧಿಸಿದ್ದರು. ವೈಜ್ಞಾನಿಕ ದೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಹೀಗಾಗಿ ಇದು ಆರ್​ಎಸ್ಎಸ್, ಬಿಜೆಪಿಯ ಗೈಡ್ ಪುಸ್ತಕವಾಗಿದೆ. ಇದರ ವಿರುದ್ಧ ಶಾಂತಿಯುತ ಹೋರಾಟವನ್ನು ಮುಂದುವರಿಸಲೇಬೇಕೆಂದು ಹೇಳಿದರು.

ಇದನ್ನೂ ಓದಿ: ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ದಲಿತರನ್ನ ಅನಾಥ ಶಿಶುಗಳನ್ನಾಗಿಸಿದೆ: ಧ್ರುವ ನಾರಾಯಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.