ETV Bharat / state

ಕಗ್ಗಂಟಾದ ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಬಂಡಾಯದ ಬಿಪಿ ಶುಗರ್ ಕಂಟ್ರೋಲ್ ಮಾಡಿ ಪಟ್ಟಿ ಸಿದ್ಧವೆಂದ ಸಿ ಟಿ ರವಿ - ಈಟಿವಿ ಭಾರತ ಕನ್ನಡ

ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಬಳಿಕ ಈ ಪಟ್ಟಿಯನ್ನು ಹೈಕಮಾಂಡ್​​ಗೆ ಕಳುಹಿಸಲಾಗುತ್ತದೆ.

bjp-election-committee-meeting-at-bengaluru
ಕಗ್ಗಂಟಾದ ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಬಂಡಾಯದ ಬಿಪಿ ಶುಗರ್ ಕಂಟ್ರೋಲ್ ಮಾಡಿ ಪಟ್ಟಿ ಸಿದ್ದವೆಂದ ಸಿಟಿ ರವಿ..!
author img

By

Published : Apr 4, 2023, 4:27 PM IST

ಬೆಂಗಳೂರು : ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಬೆಳಗಾವಿ ಜಿಲ್ಲೆಯಿಂದ ಚರ್ಚೆಯನ್ನು ಕೈಗೆತ್ತಿಕೊಂಡಿದೆ. ಎರಡು ದಿನಗಳ ಕಾಲ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಸಮಿತಿಯ ಅಂತಿಮ ಸುತ್ತಿನ ಚರ್ಚೆ ನಡೆಯುತ್ತಿದ್ದು, ಯಾವುದೇ ಗೊಂದಲವಿಲ್ಲದೆ ಒಮ್ಮತದಿಂದ ಹೈಕಮಾಂಡ್ ಗೆ ಪಟ್ಟಿಯನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿರುವ ಗೋಲ್ಡನ್ ಪಾಮ್ಸ್ ರೆಸಾರ್ಟ್‌ ನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಮೊದಲು ರಾಜ್ಯ ಚುನಾವಣೆ ನಿರ್ವಹಣಾ ಸಮಿತಿ ಸದಸ್ಯರ ಸಭೆ ನಡೆಸಲಾಯಿತು. ನಂತರ ಚುನಾವಣಾ ಸಮಿತಿ ಸಭೆ ಆರಂಭಿಸಲಾಯಿತು. ಇಂದಿನ ಸಭೆಗೆ ಚುನಾವಣಾ ಸಮಿತಿಯ ಸಭೆಗೆ 22 ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಪ್ರಭಾರಿ ಅಣ್ಣಾಮಲೈ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ ಕೆ ಅರುಣಾ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಬಿ ಶ್ರೀರಾಮುಲು, ಅಶ್ವಥ್ ನಾರಾಯಣ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಲಕ್ಷ್ಮಣ ಸವದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

bjp-election-committee-meeting-at-bengaluru
ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ

ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದ್ದು, ಮೊದಲು ಬೆಳಗಾವಿ ಜಿಲ್ಲೆಯಿಂದಲೇ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲು ಮುಂದಾಗಿದ್ದಾರೆ. ಕ್ರಮ ಸಂಖ್ಯೆಯಾಧಾರಿತವಾಗಿ ಬೆಳಗಾವಿ ಮೊದಲು ಬರಲಿದೆ. ಅಲ್ಲದೆ ಬಿಜೆಪಿ ಟಿಕೆಟ್ ಗಾಗಿ ಬಾರಿ ಪೈಪೋಟಿ ಇರುವ ಜಿಲ್ಲೆಯೂ ಬೆಳಗಾವಿಯಾಗಿದೆ. ಹಾಗಾಗಿ ಬೆಳಗಾವಿ ಜಿಲ್ಲೆಯಿಂದಲೇ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಲಾಗಿದೆ. ನಿನ್ನೆ ಬೆಳಗಾವಿಯಲ್ಲಿ ಸಭೆ ಮಾಡಿ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯವನ್ನೂ ಆಲಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಬೆಳಗಾವಿ ನಂತರ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳ ಕುರಿತು ಇಂದು ಶಾರ್ಟ್ ಲಿಸ್ಟ್ ನಡೆಸಲಿದ್ದು, ನಾಳೆ ದಕ್ಷಿಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.

ಸಭೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರಾಜ್ಯದ ಒಂದನೇ ಕ್ಷೇತ್ರದಿಂದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಶುರು ಮಾಡಿದ್ದೇವೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಚರ್ಚೆ ಮಾಡಲಿದ್ದೇವೆ ಎಂದರು.

ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತೋ ಸಿಗಲ್ವೋ ಎಂಬುದನ್ನು ಕಾದು ನೋಡಬೇಕು. ಕೆಲವು ಕಡೆ ಬಂಡಾಯ ಇದೆ. ಆಕಾಂಕ್ಷಿಗಳು ಹೆಚ್ಚಿದ್ದಾಗ ಪ್ರತಿಭಟನೆ ಆಗುತ್ತದೆ. ಅಲ್ಲೆಲ್ಲಾ ಬಿಪಿ, ಶುಗರ್ ಕಂಟ್ರೋಲ್ ಮಾಡಿ ರನ್ನಿಂಗ್ ರೇಸ್ ನಲ್ಲಿ ಫಸ್ಟ್ ಬರೋಕೆ ಪ್ರಯತ್ನ ಮಾಡುತ್ತೇವೆ. ಬಿಪಿ, ಶುಗರ್ ಎಲ್ಲ ಕಂಟ್ರೋಲ್ ಮಾಡಿ, ಅಭ್ಯರ್ಥಿಗಳ ಹೆಸರು ಫೈನಲ್ ಮಾಡುತ್ತೇವೆ. ಇದೇ 20ರೊಳಗೆ ಎಲ್ಲ ಪಟ್ಟಿಯೂ ಪೂರ್ತಿ ಆಗುತ್ತದೆ ಎಂದರು.

ನಕಲಿ ಪಟ್ಟಿ ವಿರುದ್ಧ ದೂರು : ನಮ್ಮಲ್ಲಿ ಯಾವುದೇ ಗೊಂದಲ‌ ಇಲ್ಲ ಎಲ್ಲವೂ ಸರಿಯಾಗಿದೆ. ಗೊಂದಲ ಮೂಡಿಸುವ ದುರುದ್ದೇಶದಿಂದ ನಕಲಿ ಪಟ್ಟಿ ಬಿಡಲಾಗಿದೆ. ಅರುಣ್ ಸಿಂಗ್ ಹೆಸರಿನಲ್ಲಿ ನಕಲಿ ಪಟ್ಟಿ ಹರಿಬಿಡಲಾಗಿದೆ. ನಂಬುವ ರೀತಿಯಲ್ಲಿ‌ ನಕಲಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದು ನಕಲಿ ಪಟ್ಟಿ ಯಾರೋ ಗೊಂದಲಕ್ಕೆ ಒಳಗಾಗುವುದು ಬೇಡ. ಬಿಜೆಪಿ ಆಂತರಿಕ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಟ್ಟಿದೆ. ಅಭ್ಯರ್ಥಿ, ಆಕಾಂಕ್ಷಿ ಯಾರಿದ್ದಾರೆ ಎಂದು ಸೀಕ್ರೆಟ್ ಆಗಿ ಮೊದಲ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಎರಡನೇ ಹಂತ ಜಿಲ್ಲಾ ಕೋರ್ ಕಮಿಟಿ ಆಹ್ವಾನಿಸಿ ಸಂಭವನೀಯ ಅಭ್ಯರ್ಥಿ ಅಭಿಪ್ರಾಯ ಸಂಗ್ರಹ ಆಗಿದೆ. ವ್ಯಕ್ತಿಗತ ಅಭಿಪ್ರಾಯ ಸಂಹ್ರಹಿಸಿದ್ದೇವೆ. ಇನ್ನು ಚರ್ಚೆಯೇ ಮುಗಿದಿಲ್ಲ. ಈ ಹಂತದಲ್ಲಿ ಅರುಣ್ ಸಿಂಗ್ ಹೆಸರಲ್ಲಿ ನಕಲಿ ಪಟ್ಟಿ ಬಿಡುಗಡೆ ಆಗಿದೆ. ಇಂದು ಮತ್ತು ನಾಳೆ ಸಭೆ ನಡೆಸಿ ನಂತರ ಕೇಂದ್ರೀಯ ಬೋರ್ಡ್ ಕಳಿಸಲಿದ್ದೇವೆ. ನಂತರ ಕೇಂದ್ರೀಯ ಬೋರ್ಡ್ ಅಭ್ಯರ್ಥಿ ಯಾರು ಎಂದು ನಿರ್ಧರಿಸಲಿದೆ. ಆದರೂ ರಾಜ್ಯ ಸಮಿತಿ ಚರ್ಚೆ ಮುಗಿಯುವ ಮೊದಲೇ ನಂಬುವ ರೀತಿಯಲ್ಲಿ ನಕಲಿ ಪಟ್ಟಿ ಡಿಸೈನ್ ಮಾಡಿದ್ದಾರೆ. ಈ ಬಗ್ಗೆ ದೂರು ನೀಡುತ್ತೇವೆ ಎಂದರು.

ಈ ಹಿಂದೆ ನನ್ನ ಬಗ್ಗೆ ಕೂಡ ನಕಲಿ ಸುದ್ದಿ ಪ್ರಸಾರ ಆಗಿತ್ತು. ವೀರಶೈವ ಲಿಂಗಾಯತರ ಮತವೇ ಬೇಡ ಅಂತ ಹೇಳಿದ್ದೇನೆ ಎಂದು ಸುದ್ದಿ ಪ್ರಸಾರವಾದಂತೆ ಸುಳ್ಳು ಮಾಹಿತಿ ಹರಿಬಿಡಲಾಗಿತ್ತು. ಈ ಬಗ್ಗೆ ದೂರು ನೀಡಲಾಗಿದೆ. ನನ್ನ ಹೆಸರಲ್ಲಿ ಪತ್ರಿಕೆಗಳಲ್ಲಿ ಬಂದಂತೆ ಚಿತ್ರಿಸಿದ್ದರ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಬೇಕು. ನನಗೂ ವೀರಶೈವ ಲಿಂಗಾಯತರಿಗೂ ಅಪ್ಪ, ಮಕ್ಕಳ ಸಂಬಂಧ. ನಾನು ಬೆಳೆಯಲು ಅವರೇ ಕಾರಣ ಎಂದರು.

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕ್ರಮ: ಅರುಣ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.