ETV Bharat / state

ಐಟಿ ದಾಳಿಯಲ್ಲಿ ಕೋಟಿಗಟ್ಟಲೇ ಹಣ ಪತ್ತೆ: ಕೃಷ್ಣ ಭೈರೇಗೌಡ ರಾಜೀನಾಮೆಗೆ ಬಿಜೆಪಿ ಆಗ್ರಹ - ಕೃಷ್ಣಭೈರೇಗೌಡ

ಎರಡು ಕೋಟಿ ರೂ.ಗಿಂತ ಹೆಚ್ಚು ಹಣ ಸಿಕ್ಕಿರುವ ಕಾರಣ ಕೃಷ್ಣ ಭೈರೇಗೌಡರ ಮೇಲೆ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗವನ್ನೂ ಒತ್ತಾಯಿಸುತ್ತೇವೆ. ಇಂದು ಸಂಜೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಹೇಳಿದ್ದಾರೆ.

ಬಿಜೆಪಿ ನಾಯಕರು
author img

By

Published : Mar 16, 2019, 1:02 PM IST

ಬೆಂಗಳೂರು: ರಾಜಮಹಲ್ ಹೊಟೇಲ್​ನಲ್ಲಿ ಐಟಿ ದಾಳಿ ವೇಳೆ 1.75 ಕೋಟಿ ಸಿಕ್ಕಿದೆ. ಈ ಹಣವನ್ನು ಸಚಿವ ಕೃಷ್ಣಭೈರೇಗೌಡರಿಗೆ ತಲುಪಿಸಲು ಸಂಗ್ರಹಿಸಿದ್ದಾಗಿತ್ತು ಎಂದು ತಿಳಿದು ಬಂದಿದ್ದು, ಹಾಗಾಗಿ ಕೃಷ್ಣಭೈರೇಗೌಡರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಮೈತ್ರಿ ಸರ್ಕಾರ ಶೇ.10ರ ಸರ್ಕಾರ ಅಲ್ಲ ಶೇ.20ರ ಸರ್ಕಾರ. ಈ ರೀತಿ ಕಮೀಷನ್ ದಂಧೆಯಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಲಾ ಶೇ.10ರಷ್ಟು ಪಡೆಯುತ್ತಿರುವ ಆರೋಪವಿದೆ, 50,000 ರೂಗಳಿಗಿಂತ ಹೆಚ್ಚು ಹಣ ಸಾಗಣೆ ಮಾಡಿದರೆ ಕ್ರಮ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು. ಈಗ ಎರಡು ಕೋಟಿ ರೂ.ಗಿಂತ ಹೆಚ್ಚು ಹಣ ಸಿಕ್ಕಿರುವ ಕಾರಣ ಕೃಷ್ಣ ಭೈರೇಗೌಡರ ಮೇಲೆ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗವನ್ನೂ ಒತ್ತಾಯಿಸುತ್ತೇವೆ. ಇಂದು ಸಂಜೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದರು.

ಮುಂದಿನ ತಿಂಗಳು ಮಾನ್ಯತಾ ಟೆಕ್ ಪಾರ್ಕ್ ಬಳಿಯ ಬರ್ಡ್ಸ್ ಪಾರ್ಕ್​ನಲ್ಲಿ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಕ್ಷಿಗಳ ನೆಮ್ಮದಿಯ ಜೀವನಕ್ಕೂ ಅಡ್ಡಿ ಮಾಡಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ‌. ಇದಕ್ಕೆ ಚುನಾವಣಾ ಆಯೋಗ ಹೇಗೆ ಅನುಮತಿ ನೀಡಿತು ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಮಾತನಾಡಿ, ನಿನ್ನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ ಕೈಪಿಡಿ ಬಗ್ಗೆ ಆಕ್ಷೇಪವಿದೆ. ಕೆಪಿಸಿಸಿ ಅಧ್ಯಕ್ಷರು ಬಿಡುಗಡೆ ಮಾಡಿದ ಕೈ ಪಿಡಿಯ ಕೆಳಭಾಗದಲ್ಲಿ ಕಾಂಗ್ರೆಸ್ ಸಂಶೋಧನಾ ವಿಭಾಗ. ಇದು ಕಾಂಗ್ರೆಸ್​ನ ಭಾಗವಲ್ಲ ಎಂದು ಚಿಕ್ಕದಾಗಿ ನಮೂದಿಸಿದ್ದಾರೆ. ಮೊದಲು ಈ ಕೈಪಿಡಿ ಕಾಂಗ್ರೆಸ್​​ನದ್ದು ಹೌದೋ ಅಲ್ಲವೋ ಎಂಬುದನ್ನು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

Intro:Body:

ಐಟಿ ದಾಳಿಯಲ್ಲಿ ಕೋಟಿಗಟ್ಟಲೇ ಹಣ ಪತ್ತೆ:ಕೃಷ್ಣ ಬೈರೇಗೌಡ ರಾಜೀನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು: ರಾಜಮಹಲ್ ಹೊಟೇಲ್ ನಲ್ಲಿ ಐಟಿ ರೈಡ್ ವೇಳೆ 1.75 ಕೋಟಿ ಸಿಕ್ಕಿದೆ.ಈ ಹಣವನ್ಮು ಸಚಿವ ಕೃಷ್ಣಬೈರೇಗೌಡರಿಗೆ ತಲುಪಿಸಲು ಸಂಗ್ರಹಿಸಿದ್ದಾಗಿ ಹೇಳಿದ್ದಾರೆ.ಹಾಗಾಗಿ ಕೃಷ್ಣಬೈರೇಗೌಡರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯ ಮೈತ್ರಿ ಸರ್ಕಾರ  ಶೇ.10ರ ಸರ್ಕಾರ ಅಲ್ಲ ಶೇ.20ರ ಸರ್ಕಾರ.ಈ ರೀತಿ ಕಮೀಷನ್ ದಂಧೆಯಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಲಾ ಶೇ.10ರಷ್ಟು ಪಡೆಯುತ್ತಿರುವ ಆರೋಪವಿದೆ, 50,000 ರೂಗಳಿಗಿಂತ ಹೆಚ್ಚು ಹಣ ಸಾಗಣೆ ಮಾಡಿದರೆ ಕ್ರಮ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು.ಈಗ ಎರಡು ಕೋಟಿ ರೂ.ಗಿಂತ ಹೆಚ್ಚು ಹಣ ಸಿಕ್ಕಿರುವ ಕಾರಣ ಕೃಷ್ಣಬೈರೇಗೌಡರ ಮೇಲೆ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗವನ್ನೂ ಒತ್ತಾಯಿಸುತ್ತೇವೆ.ಇಂದು ಸಂಜೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದರು.

ಮುಂದಿನ ತಿಂಗಳು ಮಾನ್ಯತಾಟೆಕ್ ಪಾರ್ಕ್ ಬಳಿಯ ಬರ್ಡ್ಸ್ ಪಾರ್ಕನಲ್ಲಿ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ.ಪಕ್ಷಿಗಳ ನೆಮ್ಮದಿಯ ಜೀವನಕ್ಕೂ ಅಡ್ಡಿ ಮಾಡಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ‌.ಇದಕ್ಕೆ ಚುನಾವಣಾ ಆಯೋಗ ಹೇಗೆ ಅನುಮತಿ ನೀಡಿತು ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಶ್ರೀರಮೇಶ್ ಮಾತನಾಡಿ,ನಿನ್ನೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ ಕೈಪಿಡಿ ಬಗ್ಗೆ ಆಕ್ಷೇಪವಿದೆ.ಕೆಪಿಸಿಸಿ ಅಧ್ಯಕ್ಷರು ಬಿಡುಗಡೆ ಮಾಡಿದ ಕೈ ಪಿಡಿಯಲ್ಲಿ ಕೆಳಭಾಗದಲ್ಲಿ ಕಾಂಗ್ರೆಸ್ ಸಂಶೋಧನಾ ವಿಭಾಗ.ಇದು ಕಾಂಗ್ರೆಸ್ ನ ಭಾಗವಲ್ಲ ಎಂದು ಚಿಕ್ಕದಾಗಿ ನಮೂದಿಸಿದ್ದಾರೆ.ಮೊದಲು ಈ ಕೈಪಿಡಿ ಕಾಂಗ್ರೆಸ್ ನದ್ದು ಹೌದೋ ಅಲ್ಲವೋ ಎಂಬುದನ್ನು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಈ ಕೈಪಿಡಿಯಲ್ಲಿ ಕಾಂಗ್ರೆಸ್ ಹೇಳಿರುವ ಹಸಿಸುಳ್ಳುಗಳನ್ನು ಜನ ನಂಬುವುದಿಲ್ಲ.ಇಂತಹಾ ಸುಳ್ಳುಗಳ ಕಾರಣಕ್ಜೆ ಇಂದಿರಾಗಾಂಧಿ ಕಾಲದಲ್ಲಿ 400 ಸ್ಥಾನಗಳನ್ನು ಗಳಿಸುತ್ತಿದ್ದ ಕಾಂಗ್ರೆಸ್ ಈಗ 40ಸ್ಥಾನಗಳಿಗೆ ಇಳಿದಿರೋದು ಎಂದು ಟೀಕಿಸಿದರು.

ಇಂದು ಐಟಿ ರೈಡ್ ವೇಳೆ ಸಿಕ್ಕಿಬಿದ್ದ ಅಧಿಕಾರಿ ಓಡಿ ಹೋಗಿದ್ದಾನೆ ಎನ್ನುತ್ತಿದ್ದಾರೆ.ಆತನನ್ನು ಇದುವರಗೆ ಏಕೆ ಬಂಧಿಸಿಲ್ಲ ಎಂದು ತೇಜಸ್ವಿನಿ ಪ್ರಶ್ನಿಸಿದ್ದಾರೆ.
 
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.