ETV Bharat / state

ಕಾಂಗ್ರೆಸ್​​ನ ಭಾರತ್ ಜೋಡೋ ಶತಮಾನದ ದೊಡ್ಡ ವ್ಯಂಗ್ಯ: ಬಿಜೆಪಿ ಟೀಕೆ

ಸ್ವಾತಂತ್ರ್ಯ ನಂತರದ ಭಾರತವನ್ನು ಅಖಂಡವಾಗಿಸಿದವರಲ್ಲಿ ರಾಷ್ಟ್ರಸೇವಕ ಸರ್ದಾರ್ ವಲ್ಲಭಬಾಯ್​ ಪಟೇಲ್ ಅವರೂ ಒಬ್ಬರು. ಸರ್ದಾರ್ ಅವರನ್ನೇ ಮರೆತ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಅಭಿಯಾನ ಮಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಬಿಜೆಪಿಯು ಕಾಂಗ್ರೆಸ್​ ಬಗ್ಗೆ ಕಿಡಿಕಾರಿದೆ.

BJP and JDS  spark against congress
BJP and JDS spark against congress
author img

By

Published : May 16, 2022, 3:43 PM IST

ಬೆಂಗಳೂರು: ದೇಶವನ್ನು ಭೌಗೋಳಿಕವಾಗಿ ವಿಭಜನೆ ಮಾಡಿದ್ದು ಮಾತ್ರವಲ್ಲ, ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಆಧಾರದ ಮೇಲೆ ವಿಭಜನೆ ಮಾಡಿದ ಕಾಂಗ್ರೆಸ್ ಈಗ ಹೊಸ ನಾಟಕ ಮಾಡುತ್ತಿದೆ. ಸೋತು ನೆಲೆ ಕಳೆದುಕೊಂಡು, ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆಗೆ ಹೊರಟಿರುವುದು ಈ ಶತಮಾನದ ದೊಡ್ಡ ವ್ಯಂಗ್ಯ ಎಂದು ಬಿಜೆಪಿ ಟೀಕಿಸಿದೆ.

ಅಧಿಕಾರವಿಲ್ಲದ ಹತಾಶೆ: ಕಾಂಗ್ರೆಸ್ ಅಧಿಕಾರದಲ್ಲಿರುವಾಗ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶವನ್ನು ಧರ್ಮ, ಜಾತಿ, ಭಾಷೆ ಎಂದು ವಿಭಜಿಸಿತ್ತು. ಅದರ ಪರಿಣಾಮವಾಗಿ ದೇಶದ ಜನತೆ ಅಧಿಕಾರದಿಂದ ಕೆಳಗಿಳಿಸಿದರು. ಈಗ ಅಧಿಕಾರವಿಲ್ಲದ ಹತಾಶೆ ಕಾಂಗ್ರೆಸಿಗರನ್ನು ಕಾಡುತ್ತಿದೆ. ಅದಕ್ಕಾಗಿ ಭಾರತ್ ಜೋಡೋ ಎಂದು ಹೊರಟಿದೆ. ಎಷ್ಟೊಂದು ನಾಟಕ ಮಾಡುವಿರಿ? ಎಂದು ಬಿಜೆಪಿ ಸರಣಿ ಟ್ವಿಟ್ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.

ಗೆದ್ದಾಗ ಇವಿಎಂ ಬಗ್ಗೆ ಮೌನ : ಭಾರತ್ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಚುನಾವಣಾ ವ್ಯವಸ್ಥೆಯನ್ನು ಗತಕಾಲಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಗೆದ್ದಾಗ ಇವಿಎಂ ಬಗ್ಗೆ ಮೌನ ವಹಿಸುವ ಕಾಂಗ್ರೆಸ್ ಪಕ್ಷ, ಸೋತಾಗ ಮಾತ್ರ ತನ್ನ ಕಳಪೆ ಪ್ರದರ್ಶನವನ್ನು ಇವಿಎಂ ಯಂತ್ರದ ಮೇಲೆ ಕಟ್ಟುತ್ತದೆ. ಮತಯಂತ್ರವನ್ನು ದೂಷಿಸಿ ಪಕ್ಷ ಪುನಶ್ವೇತನಗೊಳಿಸಲು ಸಾಧ್ಯವೇ? ಪಕ್ಷ ಸಂಕಟದಲ್ಲಿ ಇದ್ದಾಗಲೆಲ್ಲ ವಿದೇಶ ಪ್ರವಾಸ ಮಾಡುತ್ತಿದ್ದ ರಾಹುಲ್ ಗಾಂಧಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಎಂಬ ಪಾದಯಾತ್ರೆಗೆ ಹೊರಟಿದ್ದಾರೆ. ವಯನಾಡು ತಲುಪುವವರೆಗೆಯಾದರೂ ಈ ಜೋಡಣೆ ಕಾರ್ಯ ನಿರಾತಂಕವಾಗಿ ನಡೆಯುವುದೋ ಅಥವಾ ಮಧ್ಯದಲ್ಲಿ ಇನ್ನೊಂದು ವಿದೇಶ ಪ್ರವಾಸದ ಸಾಧ್ಯತೆ ಇರಬಹುದೋ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಆಂಧ್ರಪ್ರದೇಶದ ವ್ಯಾಪಾರಿಯಿಂದ ಅಪರೂಪದ ಫೌಂಟೇನ್​ ಪೆನ್ನುಗಳ ಸಂಗ್ರಹ

ಸರ್ದಾರ್ ಅವರನ್ನೇ ಮರೆತ ಕಾಂಗ್ರೆಸ್ : ಸ್ವಾತಂತ್ರ್ಯ ನಂತರದ ಭಾರತವನ್ನು ಅಖಂಡವಾಗಿಸಿದವರಲ್ಲಿ ರಾಷ್ಟ್ರಸೇವಕ ಸರ್ದಾರ್ ವಲ್ಲಭಬಾಯ್​ ಪಟೇಲ್ ಅವರೂ ಒಬ್ಬರು. ಸರ್ದಾರ್ ಅವರನ್ನೇ ಮರೆತ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಅಭಿಯಾನ ಮಾಡುವುದು ಹಾಸ್ಯಾಸ್ಪದವಲ್ಲವೇ? ಅಧಿಕಾರದ ಅಮಲಿನಲ್ಲಿ, ಕುಟುಂಬವಾದದ ಭದ್ರ ಕೋಟೆಯಲ್ಲಿ ಕುಳಿತ ಕಾಂಗ್ರೆಸ್ ನಾಯಕರು ಜನರಿಂದ ಬಹುದೂರ ಸಾಗಿದ್ದರು. ಕಾಂಗ್ರೆಸ್ ಜನಸಾಮಾನ್ಯರಿಂದ ದೂರವಾಗಿದೆ ಎಂಬ ಸತ್ಯ ಒಪ್ಪಿಕೊಳ್ಳುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಾಂಗ್ರೆಸ್ ಹಾಗೂ ಜನಸಾಮಾನ್ಯರ ನಡುವೆ ದೊಡ್ಡ ಕಂದಕವಿದೆ ಎಂದು ಕಾಂಗ್ರೆಸ್‌ಜೋಡೋ ಹ್ಯಾಷ್ ಟ್ಯಾಗ್ ನೊಂದಿಗೆ ಬಿಜೆಪಿ ಸರಣಿ ಟ್ವಿಟ್ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಕೊನೆಗಾಲದಲ್ಲಿದೆ:ಹೆಚ್​​ಡಿಕೆ.. ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗಾಲದಲ್ಲಿದೆ. ಇದನ್ನು ರಾಹುಲ್‌ಗಾಂಧಿ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ ಎಂದು @INCIndia ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ವ್ಯಾಖ್ಯಾನ ಮಾಡಿದ್ದಾರೆ. ಹಾಗಾದರೆ, ಸೈದ್ಧಾಂತಿಕ ಬದ್ಧತೆ ಎಂದರೆ ಏನು?. ರಾಹುಲ್‌ ಗಾಂಧಿ ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು. ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಹಿನ್ನೆಲೆಯ ನೆಪ ನೀಡಿ, ಡಿಎಂಕೆ-ಎಲ್‌ಟಿಟಿಇ ಸಂಬಂಧವನ್ನು ಮುನ್ನೆಲೆಗೆ ತಂದು ಆ ಪಕ್ಷವನ್ನು ಸಂಪುಟದಿಂದ ಹೊರಗಿಡಬೇಕು ಎಂದ್ಹೇಳಿ ಐ.ಕೆ.ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರ್ಕಾರವನ್ನು ಉರುಳಿಸಿದ ಕಾಂಗ್ರೆಸ್‌ ಪಕ್ಷವು ಆಮೇಲೆ ಅದೇ ಪಕ್ಷದ ಹೆಗಲ ಮೇಲೆ ಕೈ ಹಾಕಿದ್ದಾ!? ಎಂದು ಪ್ರಶ್ನಿಸಿದ್ದಾರೆ.

ಮೈತ್ರಿ ಸರ್ಕಾರ ಮಾಡೋಣ ಎಂದು ಮನೆ ಬಾಗಿಲಿಗೆ ಬಂದು, ಸರ್ಕಾರವನ್ನೂ ಮಾಡಿ ಹಿಂಬಾಗಿಲಿನಿಂದ ಆಪರೇಷನ್‌ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ಕೈ ಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ? ಮಿತ್ರಪಕ್ಷಗಳನ್ನೇ ನುಂಗಿಹಾಕುವುದೂ ಸೈದ್ಧಾಂತಿಕ ರಾಜಕಾರಣವಾ?. ಪ್ರಾದೇಶಿಕ ಪಕ್ಷಗಳ ಭೀತಿ ಎದುರಿಸುತ್ತಿರುವ ಫೋಬಿಯಾದಲ್ಲಿರುವ ಕಾಂಗ್ರೆಸ್ ಆಂಧ್ರ, ತೆಲಂಗಾಣ‌, ಒಡಿಶಾ ಸೇರಿದಂತೆ ಯಾವ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.