ETV Bharat / state

ಸೋಮಶೇಖರ್‌ಗೆ ಪ್ರಶ್ನೆ ಕೇಳಲ್ಲ ಎಂದ ರಮೇಶ್.. ಪರಿಷತ್ ಕಲಾಪದಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ಮಾತಿನ ಕದನ.. - ಉಪಸಭಾಪತಿ ಪ್ರಾಣೇಶ್

ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಪ್ರತಿಭಟನಾತ್ಮಕವಾಗಿ ನಾವು ಬಹಿಷ್ಕಾರ ಮಾಡಿದ್ದೇವೆ. ವಿಶೇಷ ಸಂದರ್ಭದಲ್ಲಿ ಸಭಾಪತಿ ಅವಕಾಶ ಕೊಡಬಹುದು. ಆದರೆ, ಇಲ್ಲಿ ಸನ್ನಿವೇಶ ಬೇರೆ ಇದೆ ಎಂದರು. ಇದಕ್ಕೆ ಕಾಂಗ್ರೆಸ್​ನ ಸಿ ಎಂ ಇಬ್ರಾಹಿಂ ಸಾಥ್​ ನೀಡಿದರು..

council-session
ಪರಿಷತ್ ಕಲಾಪ
author img

By

Published : Mar 16, 2021, 12:25 PM IST

ಬೆಂಗಳೂರು : ಕೋರ್ಟ್​ಗೆ ಹೋಗಿರುವ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎನ್ನುವ ವಿಷಯ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ, ಕೋಲಾಹಲ‌ ಸೃಷ್ಟಿಸಿತು. ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ‌ ಚಕಮಕಿಗೆ ಕಾರಣವಾಯಿತು. ‌ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಹಿನ್ನೆಲೆ ಪ್ರಶ್ನೋತ್ತರ ಕಲಾಪದ ವೇಳೆಯಲ್ಲೇ ಕಲಾಪವನ್ನು ಹತ್ತು ನಿಮಿಷ ಮುಂದೂಡಿಕೆ ಮಾಡಲಾಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್, ಈ ಸಚಿವರ ಉತ್ತರ ಬಹಿಷ್ಕಾರ ಮಾಡುವ ಹೇಳಿಕೆ ನೀಡಿದರು. ಇದಕ್ಕೆ‌ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು. ಕಾಂಗ್ರೆಸ್‌ ಸದಸ್ಯ ಹರಿಪ್ರಸಾದ್, ಸೋಮಶೇಖರ್ ನಡುವೆ ನೇರ ವಾಗ್ವಾದ ನಡೆಯಿತು.

ಈ ವೇಳೆ ಮಧ್ಯಪ್ರವೇಶ ಮಾಡಿದ ಉಪಸಭಾಪತಿ ಪ್ರಾಣೇಶ್, ಸೋಶಿಯಲ್ ಮೀಡಿಯಾದಲ್ಲಿ ತೇಜೋವಧೆ ಮಾಡಬಹುದು ಎನ್ನುವ ಕಾರಣಕ್ಕೆ ಕೋರ್ಟ್​ಗೆ ಹೋಗಿದ್ದಾರೆ. ನಾಳೆ ನೀವೂ ಹೋಗುವ ಸ್ಥಿತಿ ಬರಬಹುದು ಎನ್ನುವುದನ್ನು ಉಲ್ಲೇಖಿಸಿದರು. ಅಲ್ಲದೇ ಸದನಕ್ಕೆ ಬಂದ ನಂತರ ಅದು ಸದನದ ಆಸ್ತಿ, ಉತ್ತರ ನೀಡಿ ಎಂದು ರೂಲಿಂಗ್ ನೀಡಿದರು.

ಇದನ್ನು ಓದಿ: "ಲಾಭ ಖಾಸಗೀಕರಣ - ನಷ್ಟ ರಾಷ್ಟ್ರೀಕರಣ": ಕೇಂದ್ರದ ವಿರುದ್ಧ ರಾಹುಲ್​ ಆಕ್ರೋಶ

ಕಾಂಗ್ರೆಸ್ ಸದಸ್ಯರ ಗದ್ದಲ ಮುಂದುವರೆಸಿದ್ದರಿಂದ ಪ್ರಶ್ನೆ ಕೇಳಿ ನಂತರ ಬಹಿಷ್ಕಾರ ಮಾಡುವುದು ಯಾವ ನಿಯಮದಲ್ಲಿದೆ ಹೇಳಿ ಎಂದು ಸದಸ್ಯರಿಗೆ ಪ್ರಶ್ನಿಸಿದರು. ನಿಯಮ 49ರಲ್ಲಿ ಸ್ಪಷ್ಟವಾಗಿದೆ. ಪ್ರಶ್ನೆ ಹಿಂಪಡೆಯುವುದು, ಮುಂದೂಡುವುದು, ಸಭೆ ನಡೆಯುವ ಮೊದಲು ನೋಟಿಸ್ ನೀಡಿ ಮಾಡಬಹುದು ಎಂದರು.

ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಪ್ರತಿಭಟನಾತ್ಮಕವಾಗಿ ನಾವು ಬಹಿಷ್ಕಾರ ಮಾಡಿದ್ದೇವೆ. ವಿಶೇಷ ಸಂದರ್ಭದಲ್ಲಿ ಸಭಾಪತಿ ಅವಕಾಶ ಕೊಡಬಹುದು. ಆದರೆ, ಇಲ್ಲಿ ಸನ್ನಿವೇಶ ಬೇರೆ ಇದೆ ಎಂದರು. ಇದಕ್ಕೆ ಕಾಂಗ್ರೆಸ್​ನ ಸಿ ಎಂ ಇಬ್ರಾಹಿಂ ಸಾಥ್​ ನೀಡಿದರು.

ಈ ವೇಳೆ ಇಬ್ರಾಹಿಂ-ಬೈರತಿ ಬಸವರಾಜ್ ನಡುವೆ ನೇರ ವಾಗ್ವಾದ ನಡೆಯಿತು. ಈ ವೇಳೆ ಸಚಿವ ಬೈರತಿ ಅವರ ನೆರವಿಗೆ ಧಾವಿಸಿದ ಕೈಗಾರಿಕಾ ಸಚಿವ ಶೆಟ್ಟರ್, ನೋಟಿಸ್ ನೀಡಿ ಪ್ರಶ್ನೆ ವಾಪಸ್ ಪಡೆಯಬೇಕು, ಇವರ ನಡೆ ಸರಿಯಿಲ್ಲ ಎಂದರು.

ಈ ವೇಳೆ ಮತ್ತೆ ಮಧ್ಯಪ್ರವೇಶ ಮಾಡಿದ ಉಪಸಭಾಪತಿ ಪ್ರಾಣೇಶ್, ನಿಯಮ 50ರ ಅಡಿ ಸಭಾಪತಿ ಸದಸ್ಯರನ್ನು ಕರೆದಾಗ ಸದಸ್ಯರು ಎದ್ದು ನಿಲ್ಲತಕ್ಕದ್ದು. ಪ್ರಶ್ನೆ ಕೇಳಲು ಅವಕಾಶ ನೀಡಿದಾಗ ಕೇಳದೇ ಇದ್ದರೆ‌ ಅಥವಾ ಗೈರಾಗಿದ್ದರೆ ಬೇರೆಯವರು ಕೇಳಲು ಬಯಸಿದರೆ ಅವಕಾಶ ನೀಡಬಹುದು ಎಂದರು.

ಬಸವರಾಜ ಹೊರಟ್ಟಿ ಸಭಾಪತಿ ಪೀಠದಲ್ಲಿದ್ದಾಗ ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂದು ಕಾಂಗ್ರೆಸ್​ನ ಸಿ ಎಂ ಇಬ್ರಾಹಿಂ ಪ್ರಶ್ನಿಸಿದರು. ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಉಪನಸಭಾಪತಿ ಪ್ರಾಣೇಶ್, ನಾನು ನಿಯಮದ ಮೇಲೆ ಕರ್ತವ್ಯ ನಿರ್ವಹಿಸುತ್ತೇನೆ. ಸದನ ನಡೆಸುತ್ತೇನೆ ಎಂದರು.

ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ, ಪ್ರಶ್ನೆ ಬಂದಾಗ ಕೇಳದೇ ಇದ್ದಲ್ಲಿ ಏನಾದರೂ ರೂಲ್ ಇದೆಯಾ ಎಂದರು. ಇದಕ್ಕೆ ಸಾಥ್​ ನೀಡಿದ ಹರಿಪ್ರಸಾದ್, ನೈತಿಕತೆಯ ಪ್ರಶ್ನೆ ಮಾಡಿದ್ದೇವೆ. ಪ್ರತಿಭಟನೆ ಮಾಡುವುದು ನಮ್ಮ‌ ಹಕ್ಕು. ಆಡಳಿತ ಪಕ್ಷದವರು ನಮ್ಮನ್ನು ಇವರೇನು ಹರಿಶ್ಚಂದ್ರರಲ್ಲ ಎನ್ನುತ್ತಾರೆ. ಹರಿಶ್ಚಂದ್ರರಾದರೆ ಸ್ಮಶಾನದಲ್ಲಿರಬೇಕು. ಯಾವ ಕಾರಣಕ್ಕೂ ಸಚಿವರ ಉತ್ತರ ನಮಗೆ ಬೇಡ ಎಂದರು.

ನಂತರ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ಪ್ರಶ್ನೆ ಕೇಳದಿದ್ದರೆ ಬೇಸರವಿಲ್ಲ. ಆದರೆ, ತೇಜೋವಧೆ ಮಾಡುತ್ತಿರುವುದಕ್ಕೆ ಬೇಸರವಿದೆ. ಕಾಂಗ್ರೆಸ್​ನಲ್ಲಿದ್ದಾಗ ಮೇಟಿ ವಿರುದ್ಧ ಆರೋಪ ಬಂತು. ಅವರು ರಾಜೀನಾಮೆ ಕೊಟ್ಟರು. ನಂತರ ಏನಾಯಿತು? ಮೂರು ತಿಂಗಳ ನಂತರ ಕ್ಲೀನ್ ಚಿಟ್ ಕೊಟ್ಟರು. ಆದರೆ, ಮೇಟಿ ಅವರ ಮನಸ್ಸು ಚೂರಾಯಿತು.

ಅವರ ಮಾನ ವಾಪಾಸ್ ಬಂತಾ? ನಮ್ಮ ಸಿಡಿ ಇದೆ ಎಂದು ಸ್ಟೇ ತಂದಿಲ್ಲ. ಸರ್ಕಾರ‌ ಬರಲು ಕಾರಣ ಎಂದು ನಮ್ಮ ವಿರುದ್ಧ ಷಡ್ಯಂತ್ರ ರೂಪಿಸುತ್ತಾರೆ ಎಂದು ನಾವು ಕೋರ್ಟ್‌ಗೆ ಹೋಗಿದ್ದೇವೆ. ನಾವು ನೈತಿಕತೆಯಲ್ಲೇ ಇದ್ದೇವೆ. ಸಿಡಿ ದೂರು ಕೊಟ್ಟವರು ಈಗ ವಾಪಸ್ ಪಡೆದಿದ್ದಾರೆ. ಈಗ ಹೋದ ಮಾನ ಮರ್ಯಾದೆ ವಾಪಸ್ ಬರುತ್ತಾ ಎಂದರು.

ಈ ವೇಳೆ ಕಾಂಗ್ರೆಸ್​ನ ಸಿ ಎಂ ಇಬ್ರಾಹಿಂ, ಒಂದು ಗಂಟೆ ಚರ್ಚೆಗೆ ಅವಕಾಶ ಕೇಳಿ, ಲೀಡರ್ ಆಫ್ ಅಪೋಸಿಷನ್ ಕೇಳ್ರೀ ಎಂದು ಪ್ರತಿಪಕ್ಷ ನಾಯಕ ಎಸ್.ಆರ್‌‌ ಪಾಟೀಲ್​ರನ್ನು ಕೇಳಿದರು. ಈ ವೇಳೆ ಜೆಡಿಎಸ್‌ನ ಬೋಜೇಗೌಡ, ನಿಮಗೆ‌ ಉತ್ತರ ಬೇಡವೇ ಇರಬಹುದು. ಆದರೆ, ಸಮಾಜಕ್ಕಾಗಿ ಸಚಿವರು ಉತ್ತರ ಕೊಡಬೇಕು ಎಂದು ಸಚಿವರ ಉತ್ತರಕ್ಕೆ ಆಗ್ರಹಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್,‌ ಎರಡು ದಿನದಿಂದ ಇಂತಹ ಪ್ರಶ್ನೆ ಬಂದಾಗ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದ್ದಾರೆ. ಪ್ರಶ್ನೆ ಕೇಳದಿದ್ದರೆ ಮುಂದಿನ ಪ್ರಶ್ನೆಗೆ ಹೋಗುತ್ತಿದ್ದರು. ಈಗ ನೀವೇಕೆ ಸಭಾಪತಿ ನೀಡಿದ್ದ ರೂಲಿಂಗ್ ವಿರುದ್ಧ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ರೂಲಿಂಗ್ ಬದಲಿಸುವ ಅಧಿಕಾರದ ಉಲ್ಲೇಖ ಮಾಡಿದ ಉಪ ಸಭಾಪತಿ ಪ್ರಾಣೇಶ್, ಉಪ ಪ್ರಶ್ನೆ ಕೇಳಲು ಅನುಮತಿ ನೀಡಿದರು. ಇದನ್ನು ಖಂಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.