ETV Bharat / state

'ವೈಟ್ ಟ್ಯಾಪಿಂಗ್​ಗಿಂತ ಬಿಜೆಪಿ ಬ್ಲ್ಯಾಕ್ ಟ್ಯಾಪಿಂಗ್​ಗೆ 5 ಕೋಟಿಗೂ ಹೆಚ್ಚು ವೆಚ್ಚ..' - ಸ್ಮಾರ್ಟ್ ಸಿಟಿ ಯೋಜನೆ

ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಲಿಕೆ ವಿಪಕ್ಷ ನಾಯಕ ವಾಜಿದ್ ಅವರು, ಬಿಜೆಪಿ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳಿಗೆ ಬ್ಲ್ಯಾಕ್ ಟ್ಯಾಪಿಂಗ್ ಮಾಡಲು ಬಿಜೆಪಿ ಮುಂದಾಗಿದೆ. ಇದು ಹೆಚ್ಚು ವೆಚ್ಚದಾಯಕವಾಗಿದೆ. ರಸ್ತೆ ನಿರ್ಮಾಣಕ್ಕೆ ಮೊದಲನೇ ಹಂತದಲ್ಲಿ 243 ಕೋಟಿ, 2ನೇ ಹಂತದಲ್ಲಿ 191 ಕೋಟಿ ರೂ.ವೆಚ್ಚ ಮಾಡಲು ಅಂದಾಜು ಮಾಡಲಾಗಿದೆ. ಪ್ರತಿ ಕಿ.ಮೀಟರ್​ಗೆ 14 ರಿಂದ 15 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ವೈಟ್ ಟ್ಯಾಪಿಂಗ್ ಕೆಲಸಕ್ಕಿಂತ ಬ್ಲ್ಯಾಕ್ ಟ್ಯಾಪಿಂಗ್​ಗೆ ನಾಲ್ಕು ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರ ಅಗತ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ವಾಜಿದ್, Vagid
author img

By

Published : Nov 18, 2019, 5:00 PM IST

ಬೆಂಗಳೂರು : ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಗಳ ಬಗ್ಗೆ ತನಿಖೆ ನಡೆಸಿದ ಬಿಜೆಪಿ ಸರ್ಕಾರ ಕ್ಯಾಪ್ಟನ್ ದೊಡ್ಡಿಹಾಳ್ ಸಮಿತಿಗೆ ಕ್ಲೀನ್‌ಚಿಟ್ ನೀಡಿದೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ವಾಜಿದ್, ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳಿಗೆ ಬ್ಲ್ಯಾಕ್ ಟ್ಯಾಪಿಂಗ್ ಮಾಡಲು ಬಿಜೆಪಿ ಮುಂದಾಗಿದೆ. ಇದು ವೈಟ್ ಟ್ಯಾಪಿಂಗ್ ರಸ್ತೆಗಿಂತಲೂ ಹೆಚ್ಚು ವೆಚ್ಚದ ರಸ್ತೆಯಾಗಿದೆ. ಇದರ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಪಾಲಿಕೆ ವಿಪಕ್ಷ ನಾಯಕ ವಾಜಿದ್..

ರಸ್ತೆ ನಿರ್ಮಾಣಕ್ಕೆ ಮೊದಲನೇ ಹಂತದಲ್ಲಿ 243 ಕೋಟಿ, ಎರಡನೇ ಹಂತದಲ್ಲಿ 191 ಕೋಟಿ ರೂ. ವೆಚ್ಚ ಮಾಡಲು ಅಂದಾಜು ಮಾಡಲಾಗಿದೆ. ಪ್ರತಿ ಕಿ.ಮೀಟರ್​ಗೆ 14 ರಿಂದ 15 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ವೈಟ್ ಟ್ಯಾಪಿಂಗ್ ಕೆಲಸಕ್ಕಿಂತ ಬ್ಲ್ಯಾಕ್ ಟ್ಯಾಪಿಂಗ್​ಗೆ ನಾಲ್ಕು ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಆಸ್ಫಾಲ್ಟ್ ಮಾಡಿದರೆ, ಡಾಂಬರು ಹಾಕಿದರೆ ಗುಂಡಿ ಬೀಳೋದು ಸಹಜ. ಹೀಗಾಗಿ ಇಷ್ಟೊಂದು ಮೊತ್ತದ ಯೋಜನೆಯಲ್ಲಿ ಅವ್ಯವಹಾರ ಆಗಿದಿಯಾ, ಕಿಕ್ ಬ್ಯಾಕ್ ತಗೊಂಡಿದ್ದಾರಾ, ಕಿ.ಮೀಟರ್ ರಸ್ತೆಗೆ 15 ಕೋಟಿ ಬೇಕಾ ಎಂದು ವಾಜಿದ್ ಪ್ರಶ್ನಿಸಿದರು.

ಉಪಮೇಯರ್ ವಿರುದ್ಧ ವಿಪಕ್ಷ ನಾಯಕ ಗರಂ:
ಉಪಮೇಯರ್ ರಾಮ್ ಮೋಹನ್ ರಾಜು ಇಂದಿರಾ ಕ್ಯಾಂಟೀನ್​ಗೆ ಕೆಂಪೇಗೌಡ ಹೆಸರಿಡುತ್ತೇವೆ ಎಂದು ಹೇಳಿಕೆ ಕೊಡುತ್ತಾರೆ. ಮೇಯರ್ ಇವರೋ, ಗೌತಮ್ ಕುಮಾರೋ ಎಂಬ ಪ್ರಶ್ನೆ ಎದ್ದಿದೆ. ಆದರೆ, ಈವರೆಗೆ ಮೇಯರ್ ಆಗಲಿ, ಮುಖ್ಯಮಂತ್ರಿಗಳಾಗಲೇ ಈ ಬಗ್ಗೆ ಹೇಳಿಲ್ಲ. ಉಪಮೇಯರ್ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯಿಸಲು ಉಪಮೇಯರ್ ರಾಮ್ ಮೋಹನ್ ರಾಜು ನಿರಾಕರಿಸಿದ್ದು, ಚುನಾವಣೆ ಮುಗಿದ ಮೇಲೆ ಉತ್ತರಿಸುತ್ತೇನೆ ಎಂದರು.

ಪ್ರತ್ಯೇಕ ಬಸ್ ಪಥ ನಿರ್ಮಾಣಕ್ಕೆ 24 ಕೋಟಿ ರೂ. ಕೆಲಸವನ್ನು ಮೂವರು ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. 21 ಕಿ.ಲೋ ಮೀಟರ್‌ಗೆ 24 ಕೋಟಿ ರೂ. ಖರ್ಚುಮಾಡುತ್ತಿದ್ದಾರೆ. ಆದರೆ, ಇದಕ್ಕೆ ಮೊದಲು ಟಿಇಸಿ ವಿಭಾಗದಿಂದ 30 ಕೋಟಿ ರೂ. ವೆಚ್ಚದ ಹೈಡೆನ್ಸಿಟಿ ಕಾರಿಡಾರ್ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಇವರಿಗೆ ಮತ್ತೆ ಪ್ರತ್ಯೇಕ ಬಸ್ ಪಥ ನಿರ್ಮಾಣ ಕೊಟ್ಟಿದ್ದಾರೆ. ಟೆಂಡರ್ ಕರೆಯದೆ, ಪೂರ್ವ ಸಿದ್ಧತೆ ಯಾವುದೂ ಮಾಡಿಕೊಳ್ಳದೆ, ಗುತ್ತಿಗೆ ನೀಡಿರುವುದು ಎಷ್ಟು ಸರಿ. ಅಲ್ಲದೆ ಹೇಳಿರುವ ಡೆಡ್‌ಲೈನ್​ಗೆ ಕೆಲಸ ಮುಗಿಸುತ್ತಿಲ್ಲ. ವೆಂಕಟಾಚಲಪತಿ ಎಂಬ ಗುತ್ತಿಗೆದಾರ ಈಗಾಗಲೇ ಕೆಲಸ ಮುಗಿಸಿ ಪಾಲಿಕೆಯಿಂದ ದುಡ್ಡು ತಗೊಂಡ ಬಳಿಕ ಮತ್ತೆ ಅವನಿಗೆ ಕೆಲಸ ಕೊಡಲಾಗಿದೆ. ಇದೆಲ್ಲಾ ಅವ್ಯವಹಾರಕ್ಕೆ ಎಡೆಮಾಡಿದೆ ಎಂದರು ಆರೋಪಿಸಿದರು.

Intro:ವೈಟ್ ಟಾಪಿಂಗ್ ಗಿಂತ ಬಿಜೆಪಿಯ ಬ್ಲಾಕ್ ಟಾಪಿಂಗ್ ಗೆ ಐದು ಕೋಟಿ ಹೆಚ್ಚು ವೆಚ್ಚ- ಕಿಕ್ ಬ್ಯಾಕ್ ಆರೋಪ

ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ವೈಟ್ ಟಾಪಿಂಗ್ ರಸ್ತೆಗಳ ಬಗ್ಗೆ ಅನುಮಾನ ಪಟ್ಟು ಬಿಜೆಪಿ ಸರ್ಕಾರ ತನಿಖೆ ಮಾಡಿಸಿತು. ಆದರೆ ಕ್ಯಾಪ್ಟನ್ ದೊಡ್ಡಿಹಾಳ್ ಸಮಿತಿ ಕ್ಲೀನ್ ಚಿಟ್ ನೀಡಿದೆ.
ಆದ್ರೀಗ ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳಿಗೆ ಬ್ಲಾಕ್ ಟಾಪಿಂಗ್ ಮಾಡಲು ಬಿಜೆಪಿ ಮುಂದಾಗಿದೆ. ಇದು ವೈಟ್ ಟಾಪಿಂಗ್ ರಸ್ತೆಗಿಂತಲೂ ಹೆಚ್ಚು ವೆಚ್ಚದ ರಸ್ತೆ, ಇದರ ಅಗತ್ಯವೇನಿದೆ ಎಂದು ಪಾಲಿಕೆ ವಿಪಕ್ಷ ನಾಯಕ ವಾಜಿದ್ ಸುದ್ದಿಗೋಷ್ಟಿ ನಡೆಸಿ, ಆರೋಪಿಸಿದರು.
ರಸ್ತೆ ನಿರ್ಮಾಣಕ್ಕೆ ಮೊದಲನೇ ಹಂತದಲ್ಲಿ 243 ಕೋಟಿ, ಎರಡನೇ ಹಂತದಲ್ಲಿ 191 ಕೋಟಿ ರೂ ವೆಚ್ಚ ಮಾಡಲು ಅಂದಾಜು ಮಾಡಲಾಗಿದ್ದು, ಪ್ರತೀ ಕಿ.ಮೀಟರ್ ಗೆ 14 ರಿಂದ 15 ಕೋಟಿ ಖರ್ಚು ಮಾಡುತ್ತಿದ್ದಾರೆ. ವೈಟ್ ಟಾಪಿಂಗ್ ಕೆಲಸಕ್ಕಿಂತ ಬ್ಲಾಕ್ ಟಾಪಿಂಗ್ ಗೆ ನಾಲ್ಕು ಕೋಟಿ ಹೆಚ್ಚು ಖರ್ಚು ಮಾಡ್ತಿದಾರೆ. ಆಸ್ಫಾಲ್ಟ್ ಮಾಡಿದರೆ, ಡಾಂಬಾರು ಹಾಕಿದರೆ ಗುಂಡಿ ಬೀಳೋದು ಸಹಜ.. ಹೀಗಾಗಿ ಇಷ್ಟೊಂದು ಮೊತ್ತದ ಯೋಜನೆಯಲ್ಲಿ ಅವ್ಯವಹಾರ ಆಗಿದ್ಯಾ, ಕಿಕ್ ಬ್ಯಾಕ್ ತಗೊಂಡಿದಾರಾ, ಕಿ.ಮೀಟರ್ ರಸ್ತೆಗೆ ಹದಿನೈದು ಕೋಟಿ ಬೇಕಾ ಎಂದು ವಾಜಿದ್ ಪ್ರಶ್ನಿಸಿದರು.

ಉಪಮೇಯರ್ ವಿರುದ್ಧ ವಿಪಕ್ಷ ನಾಯಕ ಗರಂ

ಉಪಮೇಯರ್ ರಾಮ್ ಮೋಹನ್ ರಾಜು, ಇಂದಿರಾ ಕ್ಯಾಂಟೀನ್ ಗೆ ಕೆಂಪೇಗೌಡ ಹೆಸರಿಡುತ್ತೇವೆ ಅಂತ ಹೇಳಿಕೆ ಕೊಡ್ತಾರೆ. ಬಿ ಖಾತಾ ದಿಂದ ಎ ಖಾತಾ ಕೊಡುತ್ತೇವೆ ಅಂತಾರೆ. ಮೇಯರ್ ಇವರೋ, ಗೌತಮ್ ಕುಮಾರೋ ಎಂಬ ಪ್ರಶ್ನೆ ಎದ್ದಿದೆ ಎಂದರು. ಆದ್ರೆ ಈ ವರೆಗೇ ಮೇಯರ್ ಆಗ್ಲಿ ಮುಖ್ಯಮಂತ್ರಿ ಗಳಾಗಲೇ ಈ ಬಗ್ಗೆ ಹೇಳಿಲ್ಲ, ಉಪಮೇಯರ್ ದಾರಿತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು. ಆದ್ರೆ ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯಿಸಲು ಉಪಮೇಯರ್ ರಾಮ್ ಮೋಹನ್ ರಾಜು ನಿರಾಕರಿಸಿದರು. ಚುನಾವಣೆ ಮುಗಿದ ಮೇಲೆ ಉತ್ತರಿಸುತ್ತೇನೆ ಎಂದರು.

ಬಸ್ ಲೇನ್ ನಿರ್ವಹಣೆ ನೋಡಿಕೊಳ್ಳಲು ನಾಲ್ನೂರು ಮಾರ್ಷಲ್ಸ್ ತಗೋಬೇಕು ಅಂದಿದಾರೆ. ಬಸ್ ಲೇನ್ ಮಾಡಲು, ಟ್ರಾಫಿಕ್ ,ಬಿಎಮ್ ಟಿಸಿ ಗೆ ಆಗುವುದಿಲ್ಲ ಎಂದ್ರೆ ಕೂಡಲೇ ಬಿಬಿಎಂಪಿ ಯಾಕೆ ಫಂಡ್ ಕೊಡಬೇಕು. ಯಾಕೆ ಮಾರ್ಷಲ್ ಗಳನ್ನ ನೇಮಿಸಬೇಕು ಎಂದರು..

ಪ್ರತ್ಯೇಕ ಬಸ್ ಪಥ ನಿರ್ಮಾಣಕ್ಕೆ 24 ಕೋಟಿ ರೂ ಕೆಲಸವನ್ನು ಮೂವರು ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. 21 ಕಿ.ಲೋ ಮೀಟರ್ ಗೆ 24 ಕೋಟಿ ರೂ ಖರ್ಚುಮಾಡುತ್ತಿದ್ದಾರೆ. ಆದರೆ ಇದಕ್ಕೆ ಮೊದಲು ಟಿಇಸಿ ವಿಭಾಗದಿಂದ 30 ಕೋಟೊ ರೂ ವೆಚ್ಚದ ಹೈ ಡೆನ್ಸಿಟಿ ಕಾರಿಡಾರ್ ನಿರ್ಮಾಣಕ್ಕೆಂದು ಗುತ್ತಿಗೆ ನೀಡಲಾಗಿತ್ತು. ಇವರಿಗೇ ಮತ್ತೆ ಪ್ರತ್ಯೇಕ ಬಸ್ ಪಥ ನಿರ್ಮಾಣ ಕೊಟ್ಟಿದ್ದಾರೆ. ಟೆಂಡರ್ ಕರೆಯದೆ, ಪೂರ್ವ ಸಿದ್ಧತೆ ಯಾವುದೂ ಮಾಡಿಕೊಳ್ಳದೆ, ಗುತ್ತಿಗೆ ನೀಡಿರುವುದು ಎಷ್ಟು ಸರಿ. ಅಲ್ಲದೆ ಹೇಳಿರುವ ಡೆಡ್ ಲೈನ್ ಗೆ ಕೆಲವೂ ಮುಗಿಸುತ್ತಿಲ್ಲ. ವೆಂಕಟಾಚಲಪತಿ ಎಂಬ ಗುತ್ತಿಗೆದಾರ ಈಗಾಗಲೇ ಕೆಲಸ ಮುಗಿಸಿ, ಪಾಲಿಕೆಯಿಂದ ದುಡ್ಡು ತಗೊಂಡ ಬಳಿಕ ಮತ್ತೆ ಅವನಿಗೇ ಕೆಲಸ ಕೊಡಲಾಗಿದೆ. ಇದೆಲ್ಲಾ ಅವ್ಯವಹಾರಕ್ಕೆ ಎಡೆಮಾಡಿದೆ ಎಂದರು ಆರೋಪಿಸಿದರು.

ಸೌಮ್ಯಶ್ರೀ
Kn_bng_01_congress_PC_bbmp_7202707

Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.