ETV Bharat / state

ಸಂಚಾಲಕ ಹುದ್ದೆ ಸಿಗ್ತಿದ್ದಂತೆ ಅಖಾಡಕ್ಕಿಳಿದ ವಿಜಯೇಂದ್ರ: ಮೊದಲ ದಿನ ಪೂರ್ವಭಾವಿ ಸಭೆ - ಹೈಕಮಾಂಡ್ ಅಣತಿಯಂತೆ ಜಿಲ್ಲಾ ಸಮಾವೇಶ

ಬಿಜೆಪಿ ಕೋರ್ ಕಮಿಟಿ ನಿರ್ಣಯದಂತೆ ವಿಜಯೇಂದ್ರ ಅವರಿಗೆ ಯುವ ಮೋರ್ಚಾಗಳ ಜಿಲ್ಲಾ ಸಮಾವೇಶಗಳ ಆಯೋಜನೆಯ ಜವಾಬ್ದಾರಿ ನೀಡಿ ಸಂಚಾಲಕರನ್ನಾಗಿ ಮಾಡಲಾಗಿದೆ.

Vijayendra started working as soon as he got the co-ordinator post
ಸಂಚಾಲಕ ಹುದ್ದೆ ಸಿಗುತ್ತಿದ್ದಂತೆ ಕಾರ್ಯ ಆರಂಭಿಸಿದ ಬಿ.ವೈ ವಿಜಯೇಂದ್ರ
author img

By

Published : Feb 8, 2023, 4:38 PM IST

ಬೆಂಗಳೂರು: ರಾಜ್ಯದಲ್ಲಿ ಭರ್ಜರಿ ಚುನಾವಣಾ ಪ್ರಚಾರಕ್ಕೆ ನಿರ್ಧರಿಸಿರುವ ಬಿಜೆಪಿ, ರಥಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಸಮಾವೇಶಗಳ ಆಯೋಜನೆಗೆ ಸಂಚಾಲಕ, ಸಹ ಸಂಚಾಲಕರನ್ನು ನೇಮಿಸಿದೆ. ಈ ಬೆನ್ನಲ್ಲೇ ಜವಾಬ್ದಾರಿ ಹೊತ್ತ ನಾಯಕರು ಬಿಜೆಪಿ ಕಚೇರಿಗೆ ಆಗಮಿಸಿ ತಮ್ಮ ತಮ್ಮ ಹೊಣೆ ನಿರ್ವಹಣೆ ಆರಂಭಿಸಿ, ಪಕ್ಷ ವಹಿಸಿರುವ ಕೆಲಸವನ್ನು ಅನುಷ್ಠಾನಕ್ಕೆ ತರುವಲ್ಲಿ ಸಿದ್ದತೆ ನಡೆಸುತ್ತಿದ್ದಾರೆ.

ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಮೋರ್ಚಾಗಳ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಅದರಂತೆ ಪಕ್ಷದ ಕೋರ್ ಕಮಿಟಿ ಸಭೆಯ ನಿರ್ಣಯದಂತೆ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಮೋರ್ಚಾಗಳ ಜಿಲ್ಲಾ ಸಮಾವೇಶಗಳ ಆಯೋಜನೆಯ ಜವಾಬ್ದಾರಿ ನೀಡಿ ಸಂಚಾಲಕರನ್ನಾಗಿ ನೇಮಕಗೊಳಿಸಲಾಗಿದೆ. ಈ ನಿರ್ಧಾರ ಹೊರಬೀಳುತ್ತಿದ್ದಂತೆ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದ ವಿಜಯೇಂದ್ರ, ಮೋರ್ಚಾಗಳ ಸಮಾವೇಶದ ಸಂಚಾಲಕದ ಅಧಿಕಾರ ಸ್ವೀಕರಿಸಿ ಮೊದಲ ಸಭೆ ನಡೆಸಿದರು. ವಿಜಯೇಂದ್ರ ತಂಡಕ್ಕೆ ಆಪ್ತರಾಗಿರುವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರನ್ನೂ ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಎಲ್ಲಾ ಮೋರ್ಚಾಗಳ ಅಧ್ಯಕ್ಷರನ್ನು ಸದಸ್ಯರನ್ನಾಗಿ ನೇಮಿಸಿದ್ದು, ಈ ತಂಡದ ಜೊತೆ ವಿಜಯೇಂದ್ರ ಮೊದಲ ಸಭೆ ನಡೆಸಿದ್ದಾರೆ.

ಹೈಕಮಾಂಡ್ ಅಣತಿಯಂತೆ ಜಿಲ್ಲಾ ಸಮಾವೇಶಗಳನ್ನು ಮಾಡಬೇಕಿದ್ದು, ಜಿಲ್ಲೆಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಆಯೋಜಿಸುವ ಕುರಿತು ಮತ್ತು ಸಮಾವೇಶಗಳ ಸಿದ್ದತೆಗಳ ಬಗ್ಗೆ ಚರ್ಚೆ ನಡೆಸಿ ತಂಡದ ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡಿದರು. ಮೋರ್ಚಾಗಳ ಸಮಾವೇಶಕ್ಕೆ ಮೋರ್ಚಾಗಳ ಅಧ್ಯಕ್ಷರ ಅಭಿಪ್ರಾಯ ಬಹಳ ಮುಖ್ಯವಾಗಿದ್ದು, ಅವರ ಅಭಿಪ್ರಾಯ ಆಲಿಸಿ ಸಮಾವೇಶಗಳ ಆಯೋಜನೆ ಕುರಿತು ಸಮಾಲೋಚನೆ ನಡೆಸಿದರು. ವಿವಿಧ ಮೋರ್ಚಾಗಳ ಜಿಲ್ಲಾ ಸಮಾವೇಶ ಯಶಸ್ವಿಗೊಳಿಸುವ ಮೂಲಕ ಪಕ್ಷದಲ್ಲಿ ತಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ವಿಜಯೇಂದ್ರ ಮುಂದಾಗಿದ್ದು, ಉಪ ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ರೀತಿಯಲ್ಲಿಯೂ ಸಮಾವೇಶಗಳನ್ನು ಯಶಸ್ವಿಗೊಳಿಸುವ ಲೆಕ್ಕಾಚಾರದಲ್ಲಿ ಜವಾಬ್ದಾರಿ ಸಿಕ್ಕ ದಿನದಿಂದ ಕಾರ್ಯಾಚರಣೆಗೆ ಇಳಿದಿದ್ದಾರೆ.

ಪೂರ್ವಭಾವಿ ಸಭೆಗಳನ್ನು ನಡೆಸುವ ಅಧಿಕೃತವಾಗಿ ತಮ್ಮ ಸಂಚಾಲಕ ಜವಾಬ್ದಾರಿ ನಿರ್ವಹಣೆಗೆ ಮುಂದಾಗಿದ್ದು, ಸಂಘಟನಾತ್ಮಕ ಚಟುವಟಿಕೆಯಲ್ಲಿ ತಮಗಿರುವ ಉತ್ಸಾಹವನ್ನು ಹೈಕಮಾಂಡ್ ಗಮನಕ್ಕೆ ತರಲು ಮುಂದಾಗಿದ್ದಾರೆ. ಒಂದೆಡೆ ಬಿ.ವೈ ವಿಜಯೇಂದ್ರ ವಿವಿಧ ಮೋರ್ಚಾಗಳ ಜಿಲ್ಲಾ ಸಮಾವೇಶದ ಪೂರ್ವಭಾವಿ ಸಭೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಕೂಡ ರಥಯಾತ್ರೆಯ ಸಿದ್ದತಾ ಪೂರ್ವಭಾವಿ ಸಭೆ ನಡೆಸಿದರು.

ರಥಯಾತ್ರೆಯ ಸಂಚಾಲಕರಾಗಿ ಸಿ.ಸಿ.ಪಾಟೀಲ್, ಸಹ ಸಂಚಾಲಕರಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಗೀತಾ ವಿವೇಕಾನಂದ ಅವರಿದ್ದು, ನಾಲ್ಕು ತಂಡಗಳ ರಥಯಾತ್ರೆಯ ರೂಪುರೇಷೆ ಹಾಗೂ ಯಾತ್ರೆಯ ಪೂರ್ವಸಿದ್ಧತೆ ಬಗ್ಗೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.

ಇದನ್ನೂಓದಿ: ಮಾಜಿ ಸಚಿವ ಎಂ ಬಿ‌ ಪಾಟೀಲ್​ ಪರ ಪ್ರಚಾರಕ್ಕೆ ಪುತ್ರನ ಸಿದ್ಧತೆ: ಎಲ್​ಇಡಿ ಪರದೆಯಲ್ಲಿ ವಿಡಿಯೋ ಡಾಕ್ಯುಮೆಂಟರಿ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.