ETV Bharat / state

ಬಿಜೆಪಿ ಮೊದಲ ಪಟ್ಟಿ: 8 ಮಹಿಳೆಯರಿಗೆ ಟಿಕೆಟ್​ ಘೋಷಣೆ

author img

By

Published : Apr 11, 2023, 11:07 PM IST

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್​ ಪ್ರಕಟಿಸಿದ್ದು, ಅದರಲ್ಲಿ 8 ಮಹಿಳಾ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

Etv Bharat
Etv Bharat

ನವದೆಹಲಿ: ಬಿಜೆಪಿ ಪ್ರಕಟಿಸಿದ 189 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 8 ಜನ ಮಹಿಳೆಯರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಅದರಲ್ಲಿ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಕಾರವಾರ ಕ್ಷೇತ್ರದ ರೂಪಾಲಿ ಸಂತೋಷ್ ನಾಯ್ಕ್ ಅವರಿಗೆ ಕೊಡಲಾಗಿದೆ. ನಾಗಮಂಗಲದಲ್ಲಿ ಸುಧಾ ಶಿವರಾಮೇಗೌಡ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.

ದೆಹಲಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದು, ಮೊದಲ ಪಟ್ಟಿ ಬಿಡುಗಡೆ ಮಾಡಿದರು.

ಟಿಕೆಟ್​ ಪಡೆದ ಮಹಿಳೆಯರು:

  1. ಸಂಡೂರು- ಶಿಲ್ಪಾ ರಾಘವೇಂದ್ರ
  2. ನಾಗಮಂಗಲ- ಸುಧಾ ಶಿವರಾಮೇಗೌಡ
  3. ಪುತ್ತೂರು- ಆಶಾ ತಿಮ್ಮಪ್ಪ
  4. ಹಿರಿಯೂರು - ಪೂರ್ಣಿಮಾ ಶ್ರೀನಿವಾಸ್
  5. ಕಾರವಾರ - ರೂಪಾಲಿ ಸಂತೋಷ್ ನಾಯ್ಕ್
  6. ಸುಳ್ಯ - ಭಗೀರಥಿ ಮರುಳ್ಯ
  7. ಸೌಂದತ್ತಿ - ಯಲ್ಲಮ್ಮ ರತ್ನಾ ವಿಶ್ವನಾಥ್ ಮಾಮನಿ
  8. ನಿಪ್ಪಾಣಿ - ಶಶಿಕಲಾ ಜೊಲ್ಲೆ

ಇದನ್ನೂ ಓದಿ: ಆನಂದ್​ ಸಿಂಗ್​, ಯಡಿಯೂರಪ್ಪ ಪುತ್ರರಿಗೆ ಬಿಜೆಪಿ ಟಿಕೆಟ್ ಘೋಷಣೆ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.