ETV Bharat / state

ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಅಡ್ಡಿ: ಮತ್ತೆ ಕೇಳಿದ ಮೋದಿ ಘೋಷಣೆ - ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಮತ್ತೆ ಕೇಳಿದ ಮೋದಿ ಮೋದಿ ಘೋಷಣೆ

ಯಶವಂತಪುರ ಬಿಕೆ ನಗರದಲ್ಲಿ ಪ್ರಚಾರಕ್ಕೆ ತೆರಳಿದ್ದ ಸಂದರ್ಭ ಎದುರಾದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿ ಸಿದ್ದರಾಮಯ್ಯ ಪ್ರಚಾರಕ್ಕೆ ಅಡ್ಡಿಪಡಿಸಿದರು.

BJP activists disrupted Siddaramaiah program
ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ
author img

By

Published : Oct 27, 2020, 10:09 PM IST

Updated : Oct 27, 2020, 10:42 PM IST

ಬೆಂಗಳೂರು: ಯಶವಂತಪುರ ಬಿ.ಕೆ. ನಗರದಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದ ಸಿದ್ದರಾಮಯ್ಯಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿದ ಘಟನೆ ನಡೆಯಿತು.

ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಪ್ರಚಾರ ಭಾಷಣದಲ್ಲಿ ಇಂದು ದಿನವಿಡಿ ಪ್ರಚಾರದಲ್ಲಿ ತೊಡಗಿದ್ದ ಸಿದ್ದರಾಮಯ್ಯ ಸಂಜೆ 4 ಗಂಟೆ ಹೊತ್ತಿಗೆ ಯಶವಂತಪುರ ಬಿಕೆ ನಗರದಲ್ಲಿ ಪ್ರಚಾರಕ್ಕೆ ತೆರಳಿದ್ದ ಸಂದರ್ಭ ಎದುರಾದ ಬಿಜೆಪಿ ಕಾರ್ಯಕರ್ತರು, ಮೋದಿ... ಮೋದಿ.... ಎಂದು ಘೋಷಣೆ ಕೂಗಿ ಸಿದ್ದರಾಮಯ್ಯ ಪ್ರಚಾರಕ್ಕೆ ಅಡ್ಡಿಪಡಿಸಿದರು. ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ‌ ಬಿಜೆಪಿಯವರ ದಾಂಧಲೆಗೆ ಸಿಟ್ಟಾದ ಸಿದ್ದರಾಮಯ್ಯ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಎಚ್ಚರಿಸಿದರು. ಸಿದ್ದರಾಮಯ್ಯ ತೆರಳುತ್ತಿದ್ದ ವಾಹನಗಳಿಗೆ ತಡೆಯೊಡ್ಡಿದ ಬಿಜೆಪಿ ಕಾರ್ಯಕರ್ತರು. ವಾಪಸ್ ಹೋಗಲು ಒತ್ತಡ ಹಾಕಿದರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ನಿಮ್ಮ ಮನೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿ ಸಿದ್ದರಾಮಯ್ಯ ಕಾರ್ಯಕ್ರಮ ಮುಂದುವರಿಸಲು ಅನುವು ಮಾಡಿಕೊಟ್ಟರು. ಕಳೆದ ಲೋಕಸಭೆ ಚುನಾವಣೆ ವೇಳೆ ಸಾಕಷ್ಟು ಸುದ್ದಿ ಮಾಡಿದ್ದ ಮೋದಿ... ಮೋದಿ..... ಘೋಷಣೆ ಬಿಜೆಪಿ ಕಾರ್ಯಕರ್ತರಲ್ಲಿ ಈ ಸಾರಿ ಮತ್ತೊಮ್ಮೆ ಕೇಳಿ ಬಂತು. ಕಳೆದ ಸಾರಿ ಈ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಎಲ್ಲಿ ಹೋಗಿದ್ದಾರೆ? ಹೆಚ್ಚಿನವರು ನಿರುದ್ಯೋಗಿಗಳಾಗಿದ್ದಾರೆ ಎಂದು ಸಾಕಷ್ಟು ಸಾರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದೀಗ ಬಿಜೆಪಿ ಕಾರ್ಯಕರ್ತರು ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದು, ಗಮನಿಸಿದಾಗ ಸಿದ್ದರಾಮಯ್ಯ ಹೇಳಿಕೆಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಮುನಿರತ್ನ ರೌಡಿಸಂ ಎಂದ ಹುಲಿಯಾ:

ಸಂಜೆ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ಬಿಜೆಪಿ ಕಾರ್ಯಕರ್ತರ ಗದ್ದಲಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾವು ಕೂಡ ಇವರ ರೀತಿಯೇ ಗಲಾಟೆ ಮಾಡಬಹುದು. ಇದು ಮುನಿರತ್ನ ರೌಡಿಸಂ ಎಂದು ಹೇಳಿದಾಗ ಕಾಂಗ್ರೆಸ್ ಕಾರ್ಯಕರ್ತರು ಹೌದು ಹುಲಿಯ, ಹೌದು ಹುಲಿಯಾ ಎಂದರು. ’’ಮುನಿರತ್ನ ನಾಯ್ಡುನೇ ಇವರನ್ನು ಕಳಿಸಿದ್ದಾನೆ. ನಾನು ಪ್ರಚಾರಕ್ಕೆ ಬಂದಿದ್ದೇನೆ. ಹೀಗಾಗಿ ತನ್ನ ಸೋಲು ಖಚಿತ ಅನ್ನುವುದು ಅವನಿಗೆ ಅರಿವಾಗಿದೆ. ಸೋಲುತ್ತೇನೆ ಎಂಬ ಭಯದಿಂದ ರೌಡಿಸಂ ಮಾಡಿಸುತ್ತಿದ್ದಾರೆ. ಆದರೆ ಮತದಾರರು ಇದನ್ನೆಲ್ಲ ನೋಡುತ್ತಿದ್ದರೆ ಹುಷಾರ್. ನಿಮ್ಮ ಈ ರೌಡಿತನಕ್ಕೆ ನವಂಬರ್ 3 ರಂದು ಮತದಾರರು ತಕ್ಕ ಉತ್ತರ ನೀಡುತ್ತಾರೆ‘‘ ಎಂದು ಮಾಜಿ ಸಿಎಂ ಟಾಂಗ್​ ಕೊಟ್ಟರು.

ಈ ಗುಂಡಾಗಿರಿ ರಾಜಕಾರಣಕ್ಕೆ ಯಾರು ಹೆದರಿಕೊಳ್ಳಬೇಡಿ. ಇದೇ ರೀತಿ ಮುಂದುವರಿದರೆ ನಾವು ಕೂಡ ಬಿಜೆಪಿ ಎಲ್ಲಿಯೂ ಸಭೆ ಮಾಡಲು ಬಿಡಲ್ಲ. ಅವರಿಗೆ ಮೆರವಣಿಗೆ ಮಾಡಲು ಬಿಡಲ್ಲ. ಗೂಂಡಾಗಿರಿ ಹಾಗೂ ಬೆದರಿಕೆಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರಲ್ಲ ಎನ್ನುವುದನ್ನು ಅವರಿಗೆ ತಿಳಿಸಲು ಬಯಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Oct 27, 2020, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.