ETV Bharat / state

ಕೆ.ಆರ್.​ಪುರಂನಲ್ಲಿ ನಂದೀಶ್​​ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್​​​ ನೀಡಲು ಒತ್ತಾಯ - ಬಿಜೆಪಿ

ನಂದೀಶ್​ ರೆಡ್ಡಿ ಅವರಿಂದ ಕೆ.ಆರ್.​ಪುರಂನಲ್ಲಿ ಬಿಜೆಪಿ ಉಳಿದಿದೆ. ಕಳೆದ ಐದು ವರ್ಷಗಳಲ್ಲಿ ಕೆ.ಆರ್​.ಪುರಂನಲ್ಲಿ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮಾಡಿಲ್ಲ. ಇಂತಹವರನ್ನು ಬಿಜೆಪಿ ನಾಯಕರು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕೆ.ಆರ್​.ಪುರಂನಲ್ಲಿ ಬಿಜೆಪಿ ಪಕ್ಷ ಉಳಿಯುವುದಿಲ್ಲ. ಹಾಗಾಗಿ ಕೆ.ಆರ್​.ಪುರಂನಲ್ಲಿ ನಂದೀಶ್ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

BJP Activists
author img

By

Published : Sep 26, 2019, 1:32 AM IST

ಬೆಂಗಳೂರು: ಕೆ.ಆರ್.​ಪುರಂನಲ್ಲಿ ನಂದೀಶ್ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಂದೀಶ್ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್​ ನೀಡುವಂತೆ ಕಾರ್ಯಕರ್ತರ ಒತ್ತಾಯ

ನಗರದಲ್ಲಿರುವ ಕಚೇರಿಗೆ ಆಗಮಿಸಿದ್ದ ಕಾರ್ಯಕರ್ತರು ಬಿಜೆಪಿ ಸರ್ಕಾರ, ಮೋದಿ ಪರವಾಗಿ ಘೋಷಣೆ ಕೂಗಿದರು. ಬಳಿಕ ನಂದೀಶ್​ ರೆಡ್ಡಿ ಅವರಿಂದ ಕೆ.ಆರ್.​ಪುರಂನಲ್ಲಿ ಬಿಜೆಪಿ ಉಳಿದಿದೆ. ಕಳೆದ ಐದು ವರ್ಷಗಳಲ್ಲಿ ಕೆ.ಆರ್.​ಪುರಂನಲ್ಲಿ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮಾಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 15 ಸಾವಿರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇಂತಹವರನ್ನು ಬಿಜೆಪಿ ನಾಯಕರು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕೆ.ಆರ್​.ಪುರಂನಲ್ಲಿ ಬಿಜೆಪಿ ಪಕ್ಷ ಉಳಿಯುವುದಿಲ್ಲ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಅಭ್ಯರ್ಥಿ ನಂದೀಶ್ ರೆಡ್ಡಿಯಾವರೇ ಆಗಬೇಕು. ಎರಡು ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು, ನಿಷ್ಠಾವಂತ ನಾಯಕ. ಹಾಗಾಗಿ ಯಾವುದೇ ಕಾರಣಕ್ಕೂ ವಲಸೆ ಬಂದಿರುವ ಬೈರತಿಗೆ ಟಿಕೆಟ್ ನೀಡಬಾರದು. ಅನರ್ಹ ಶಾಸಕ ಬೈರತಿಗೆ ಟಿಕೆಟ್ ಕೊಡಬಾರದು. ಬೈರತಿ ಬಸವರಾಜ್ ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಆಗಲೇ ಅವರ ವರ್ತನೆ ಬೇರೆ ರೀತಿ ಇದೆ. ಮೂಲ ಬಿಜೆಪಿಯವರನ್ನು ಅವರು ಕಡೆಗಣಿಸುತ್ತಾರೆ. ನಾವು ಅವರ ಪರ ಮತ ಕೇಳುವುದಿಲ್ಲ. ನಾವು ಬಸವರಾಜ್ ಅವರಿಗೆ ಮತ ಹಾಕುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಸಿದರು.

Intro:ಕೆಆರ್ ಪುರಂನಲ್ಲಿ ನಂದೀಶ್ ರೆಡ್ಡಿ ಪರ ಕಾರ್ಯಕರ್ತರ ಬ್ಯಾಟಿಂಗ್

ಕೆಆರ್ ಪುರಂನಲ್ಲಿ
ನಂದೀಶ್ ರೆಡ್ಡಿಗೆ ಬಿಜೆಪಿ ಟಿಕೆಟ್ ನೀಡುವಂತೆ ಕಾರ್ಯಕರ್ತರ ಒತ್ತಾಯ ಮಾಡುತ್ತಿದ್ದಾರೆ
ಕೆಆರ್ ಪುರಂನಲ್ಲಿ ಬಿಜೆಪಿ ಉಳಿದಿರೋದೆ ನಂದೀಶ್ ರೆಡ್ಡಿ ಅವರಿಂದ, ಅವರು ಮಾಡಿದ್ದ ಅಭಿವೃದ್ದಿ ಕೆಲಸಗಳೇ ಮಾತನಾಡುತ್ತೆ 5ವರ್ಷದಲ್ಲಿ ನಂದೀಶ್ ರೆಡ್ಡಿ ಅವರು ಮಾಡಿದ ಕೆಲಸ ಬೇರೆಯವರು ಯಾರು ಮಾಡಿಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ
ಕೆ ಆರ್ ಪುರ ಕ್ಷೇತ್ರದಲ್ಲಿ ಹದಿನೈದು ಸಾವಿರ ಮತಗಳ ಲೀಡ್ ನ್ನು ತರುವಲ್ಲಿ ಯಶಸ್ವಿಯಾದರು ಅಂತವರಿಗೆ
ಬಿಜೆಪಿ ನಾಯಕರು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕೆ ಆರ್ ಪುರದಲ್ಲಿ ಬಿಜೆಪಿ ಪಕ್ಷ ಊಳಿಯುವುದಿಲ್ಲ
ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

Body:ಕಳೆದ ಐದಾರು ವರ್ಷಗಳ ಕಾಲ
ಬೈರತಿ ಬಸವರಾಜ್ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೆವೆ ಈಗ ಅವರ ಪರವಾಗಿ ನಾವು ಹೇಗೆ ಕೆಲಸ ಮಾಡುವುದು ಎಂದು ಹೇಳಿದರು.ಬೈರತಿ ಬಸವರಾಜ್ ಇನ್ನು ಪಕ್ಷಕ್ಕೆ ಸೇರ್ಪಡೆ ಆಗಿಲ್ಲ ಆಗಲೇ ಅವರ ವರ್ತನೆ ಬೇರೆ ರೀತಿ ಇದೆ ಮೂಲ ಬಿಜೆಪಿಯವನ್ನು ಅವರು ಕಡೆಗಣಿಸುತ್ತಾರೆ ನಾವು ಅವರ ಪರ ಮತ ಕೇಳುವುದಿಲ್ಲ ನಾವು ಬಸವರಾಜ್ ಅವರಿಗೆ ಮತ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Conclusion:ನಮ್ಮ ಅಭ್ಯರ್ಥಿ ನಂದೀಶ್ ರೆಡ್ಡಿ ಅವರೇ ಆಗಬೇಕು ಕ್ಷೇತ್ರದಲ್ಲಿ 2ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ನಂದೀಶ್ ರೆಡ್ಡಿ ಲೋಕಸಭೆ ಚುನಾವಣೆಯಲ್ಲಿ ಕೆಆರ್ ಪುರಂ ಕ್ಷೇತ್ರದಿಂದ ಬಿಜೆಪಿಗೆ 15ಸಾವಿರ ಲೀಡ್ ಬಂದಿದೆ ಇಂದು ನಂದೀಶ್ ರೆಡ್ಡಿ ಅವರ ಶ್ರಮದಿಂದ ಇಷ್ಟು ಲೀಡ್ ಬಂದಿದೆ,ಬೈರತಿಗೆ ಕ್ಷೇತ್ರದಲ್ಲಿ ಆಗಿರುವ ಹಿನ್ನೆಡೆಗೆ ಲೋಕಸಭಾ ಫಲಿತಾಂಶ ಸಾಕ್ಷಿಯಾಗಿದೆ

ನಂದೀಶ್ ರೆಡ್ಡಿ ನಿಷ್ಟಾವಂತ ನಾಯಕ ಯಾವುದೇ ಕಾರಣಕ್ಕೂ ವಲಸೆ ಬಂದಿರುವ ಬೈರತಿಗೆ ಟಿಕೆಟ್ ನೀಡಬಾರದು
ಅನರ್ಹ ಶಾಸಕ ಬೈರತಿಗೆ ಟಿಕೆಟ್ ಕೊಟ್ರೆ ನಮ್ಮ ದಾರಿ ನಮಗೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟ ಕೆಆರ್ ಪುರ ಬಿಜೆಪಿ ಕಾರ್ಯಕರ್ತರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.