ಬೆಂಗಳೂರು: ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವ ಆರೋಪ ಹೊತ್ತಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ, ಬಿನೀಶ್ ಕೊಡಿಯೇರಿಗೆ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಿಟಿ ಸಿವಿಲ್ ಆವರಣದಲ್ಲಿರುವ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ವಿಚಾರಣೆ ಮುಗಿದ ಕಾರಣ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಇಡಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಹಾಗೆ ಬಿನೇಶ್ ಪರ ವಕೀಲರು ಸಲ್ಲಿಕೆ ಮಾಡಿರುವ ಅರ್ಜಿ, ನವೆಂಬರ್ 18 ರಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಡ್ರಗ್ ಪೆಡ್ಲರ್ ಅನೂಪ್ ಜೊತೆಗಿನ ವ್ಯವಹಾರ ಬಗ್ಗೆ ಮಾಹಿತಿ ಕಲೆಹಾಕಿ ಬಂಧನ ಮಾಡಲಾಗಿತ್ತು. ತನಿಖೆ ವೆಳೆ ಕೊಡಿಯೇರಿ ಬೆಂಗಳೂರು ಮತ್ತು ಕೇರಳದಲ್ಲಿ ಹೋಟೆಲ್ ನಡೆಸಿರುವ ವಿಚಾರ ಹಾಗೆ ಅನೂಪ್ ಜೊತೆ ಡ್ರಗ್ ಡಿಲಿಂಗ್ ನಲ್ಲಿ ಕೈ ಜೋಡಿಸಿ ಅಕ್ರಮ ಆಸ್ತಿ ಮಾಡಿರುವ ಮಾಹಿತಿ ಇಡಿಗೆ ಸಿಕ್ಕಿದೆ. ಸದ್ಯ ಇಡಿ ವಿಚಾರಣೆ ಮುಗಿದಿದ್ದು, ಎನ್ಸಿಬಿ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ.