ETV Bharat / state

ಶಕ್ತಿ ಯೋಜನೆಗೆ ಶತಕೋಟಿ ಸಂಭ್ರಮ: 5 ತಿಂಗಳಲ್ಲಿ 100 ಕೋಟಿ ದಾಟಿದ ಮಹಿಳಾ ಪ್ರಯಾಣಿಕರು! - ಮಹಿಳೆಯರಿಗೆ ಉಚಿತ ಬಸ್ ಸೇವೆ

Shakti Scheme for woman: ರಾಜ್ಯ ಕಾಂಗ್ರೆಸ್​ ಸರ್ಕಾರದ ಮಹತ್ವದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ನೂರು ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

Shakti Yojana
ಶಕ್ತಿ ಯೋಜನೆಗೆ ಶತಕೋಟಿ ಸಂಭ್ರಮ: ಸಾರಿಗೆ ಬಸ್​ಗಳಲ್ಲಿ ಪುರುಷರಿಗಿಂತ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚು
author img

By ETV Bharat Karnataka Team

Published : Nov 25, 2023, 7:22 AM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕನಸಿನ ಶಕ್ತಿ ಯೋಜನೆ ಶತಕೋಟಿ ಸಂಭ್ರಮವನ್ನು ಆಚರಿಸುತ್ತಿದೆ. ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ನೂರು ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಮಹಿಳೆಯರಿಗಾಗಿ ಜಾರಿಯಾದ ಉಚಿತ ಬಸ್ ಪ್ರಯಾಣಿಸುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರ ಜೂನ್ 11ರಿಂದ ತನ್ನ ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಮೊದಲು ಅನುಷ್ಠಾನಗೊಳಿಸಿತು. ಈ ಯೋಜನೆ ಅಡಿ ಸಾಮಾನ್ಯ ಸಾರಿಗೆ ಬಸ್​ಗಳಲ್ಲಿ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಯೋಜನೆ ಜಾರಿಯಾದಾಗಿನಿಂದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ.

ಪ್ರಮುಖವಾಗಿ ಪುಣ್ಯ ಕ್ಷೇತ್ರಗಳತ್ತ ಮಹಿಳೆಯರು ತೆರಳಿ ಉಚಿತ ಪ್ರಯಾಣದ ಅನುಕೂಲ ಪಡೆಯುತ್ತಿದ್ದಾರೆ. ಶನಿವಾರ ಬಹುತೇಕ ಎಲ್ಲಾ ಸರ್ಕಾರಿ ಬಸ್​ಗಳು ಅದರಲ್ಲೂ ಧರ್ಮಸ್ಥಳ, ಚಾಂಮುಂಡೇಶ್ವರಿ ದೇವಾಲಯ ಸೇರಿ ರಾಜ್ಯದ ಪ್ರಸಿದ್ಧ ದೇವಾಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ಐದೂವರೆ ತಿಂಗಳಾಗಿದ್ದು, ಉಚಿತ ಮಹಿಳಾ ಪ್ರಯಾಣಿಕರ ಸಂಖ್ಯೆ ನೂರು ಕೋಟಿಯ ಗಡಿ ದಾಟಿದೆ. ಈವರೆಗೆ ಒಟ್ಟು 100.47 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.

ಶಕ್ತಿ ಯೋಜನೆ ನಂತರ ಮಹಿಳೆಯರ ಪ್ರಯಾಣ ಹೆಚ್ಚಳ: ಶಕ್ತಿ ಯೋಜನೆ ಜಾರಿಯಾದ ಬಳಿಕ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್​ಗಳಲ್ಲಿ ಪುರುಷರಿಗಿಂತ ಮಹಿಳಾ ಪ್ರಯಾಣಿಕರದ್ದೇ ಸಂಖ್ಯೆ ಹೆಚ್ಚಾಗಿದೆ.‌ ಶಕ್ತಿ ಯೋಜನೆ ಜಾರಿಯಾದ ಬಳಿಕ ಈವರೆಗೆ ಬಸ್​ಗಳಲ್ಲಿ ಒಟ್ಟು 178.67 ಕೋಟಿ ಜನರು ಪ್ರಯಾಣಿಸಿದ್ದಾರೆ. ಈ ಪೈಕಿ ಮಹಿಳಾ ಪ್ರಯಾಣಿಕರ ಸಂಖ್ಯೆ 100.47 ಕೋಟಿ ತಲುಪಿದೆ. ಅಂದರೆ ಒಟ್ಟು ಪ್ರಯಾಣಿಕರ ಪೈಕಿ ಮಹಿಳಾ ಪ್ರಯಾಣಿಕರ ಪ್ರಮಾಣ 56.23% ರಷ್ಟಿದೆ. ಈವರೆಗೆ ಮಹಿಳಾ ಪ್ರಯಾಣಿಕರ ಪ್ರಯಾಣದ ಶೂನ್ಯ ಟಿಕೆಟ್ ಮೌಲ್ಯ 2,397.80 ಕೋಟಿ ರೂ.ಗಳಾಗಿವೆ. ಶಕ್ತಿ ಯೋಜನೆಯ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರತಿದಿನ ಸುಮಾರು 67 ಲಕ್ಷ ಕಿಮೀ ಹೆಚ್ಚಳ ಮಾಡಿ ಕಾರ್ಯಾಚರಿಸುತ್ತಿದೆ.

ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ 22,017 ಸಾರಿಗೆ ಸೇವೆಗಳನ್ನು ಹೊಂದಿದ್ದು, ಒಟ್ಟು 24,352 ಬಸ್​​ಗಳನ್ನು ಹೊಂದಿವೆ. ಪ್ರತಿನಿತ್ಯ 66.98 ಲಕ್ಷ ಕಿಮೀ ಕಾರ್ಯಾಚರಿಸುತ್ತಿವೆ. ನಿತ್ಯ ಒಟ್ಟು 103.12 ಲಕ್ಷ ಪ್ರಯಾಣಿಕರು ರಸ್ತೆ ಸಾರಿಗೆ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರತಿನಿತ್ಯ ಶಕ್ತಿ ಯೋಜನೆಯಡಿ 61-62 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ರಸ್ತೆ ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.

ರಸ್ತೆ ಸಾರಿಗೆ ನಿಗಮಗಳಲ್ಲಿ ಶಕ್ತಿ ಪ್ರಯಾಣಿಕರೆಷ್ಟು?: ಕೆಎಸ್ಆರ್​ಟಿಸಿಯಲ್ಲಿ ಜೂನ್ 11ರಿಂದ ನ.22ರವರೆಗೆ ಒಟ್ಟು 53.44 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಪೈಕಿ 30.12 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಒಟ್ಟು 900.29 ಕೋಟಿ ರೂ. ಮೊತ್ತದ ಟಿಕೆಟ್ ವೆಚ್ಚವಾಗಿದೆ.

ಬಿಎಂಟಿಸಿ ಬಸ್​ನಲ್ಲಿ ಈವರೆಗೆ ಒಟ್ಟು 58.14 ಕೋಟಿ ಪ್ರಯಾಣ ಬೆಳೆಸಿದ್ದಾರೆ. ಈ ಪೈಕಿ 31.69 ಕೋಟಿ ಮಹಿಳಾ ಪ್ರಯಾಣಿಕರು ಪಯಣಿಸಿದ್ದಾರೆ. ಈವರೆಗೆ 420.82 ಕೋಟಿ ರೂ. ಉಚಿತ ಮಹಿಳಾ ಪ್ರಯಾಣದ ವೆಚ್ಚವಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್​ನಲ್ಲಿ ಈವರೆಗೆ ಒಟ್ಟು 39.72 ಕೋಟಿ ಪ್ರಯಾಣಿಕರು ಪಯಣಿಸಿದ್ದಾರೆ. ಈ ಪೈಕಿ 23.37 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ ಸುಮಾರು 600.69 ಕೋಟಿ ರೂ. ಆಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಒಟ್ಟು 27.35 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದರಲ್ಲಿ 14.28 ಮಹಿಳಾ ಪ್ರಯಾಣಿಕರಿದ್ದು, ಉಚಿತ ಟಿಕೆಟ್ ಮೌಲ್ಯ ಸುಮಾರು 475.98 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಮರಣ ಪ್ರಮಾಣ ಪತ್ರಕ್ಕೆ ಇ -ಕೆವೈಸಿ ಅನುಸರಿಸಲು ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.