ETV Bharat / state

ವ್ಹೀಲಿಂಗ್ ಮಾಡಲೆಂದೇ ಬೈಕ್‌ ಕಳ್ಳತನ.. ಬೆಂಗಳೂರಲ್ಲಿ ಇಬ್ಬರು ಖದೀಮರ ಬಂಧನ - bike theft for wheeling

ವ್ಹೀಲಿಂಗ್​ ಮಾಡುವ ಉದ್ದೇಶಕ್ಕೆಂದೇ ಬೈಕ್​ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

bike thieves arrested in bengaluru
ವ್ಹೀಲಿಂಗ್ ಮಾಡಲೆಂದೇ ಬೈಕ್‌ ಕಳ್ಳತನ
author img

By

Published : Nov 23, 2021, 4:53 PM IST

ಬೆಂಗಳೂರು: ವ್ಹೀಲಿಂಗ್ ಮಾಡುವುದಕ್ಕಾಗಿಯೇ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳ 9 ದ್ವಿಚಕ್ರ ವಾಹನಗಳನ್ನು ಚಂದ್ರಾ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ.

ನವಾಜ್ ಪಾಷಾ ಹಾಗೂ ರಿಜ್ವಾನ್ ಪಾಷಾ ಬಂಧಿತರು. ಇವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಶೋಕಿಗಾಗಿ ತಿರುಗಾಡಲು ಹಾಗೂ ವ್ಹೀಲಿಂಗ್ ಮಾಡಲು ಬೈಕ್ ಕದಿಯುತ್ತಿರುವ ವಿಚಾರ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

bike thieves arrested in bengaluru
ವ್ಹೀಲಿಂಗ್ ಮಾಡಲೆಂದೇ ಬೈಕ್‌ ಕಳ್ಳತನ

ಮೆಕ್ಯಾನಿಕ್ ಆಗಿ ಬೈಕ್ ಗ್ಯಾರೇಜ್​​ನಲ್ಲಿ ಕೆಲಸ ಮಾಡುತ್ತಿದ್ದ ನವಾಜ್ ಪಾಷಾ ಹಾಗೂ ಸಹಚರ ಸೇರಿ ಮನೆ‌ ಮುಂದೆ ನಿಲ್ಲಿಸಿದ್ದ ಬೈಕ್​ಗಳ‌ ಹ್ಯಾಂಡಲ್‌‌ ಮುರಿದು ಕಳ್ಳತನ ಮಾಡಿದ್ದರು. ಬಳಿಕ ಬೈಕ್​​ಗಳ ಬಂಪರ್ ಸೇರಿದಂತೆ ಸಂಪೂರ್ಣವಾಗಿ ಬದಲಾಯಿಸುತ್ತಿದ್ದರು. ಜೊತೆಗೆ ಬೈಕ್​​​ಗಳ ನೋಂದಣಿ ಸಂಖ್ಯೆ ಚೇಂಜ್ ಮಾಡುತ್ತಿದ್ದರು. ಕದ್ದ ಬೈಕಿನಲ್ಲಿ ನಗರದೆಲ್ಲೆಡೆ ವ್ಹೀಲಿಂಗ್ ಮಾಡುತ್ತಿದ್ದರು.

ಇವರ ವಿರುದ್ಧ ಕಾಟನ್ ಪೇಟೆ,‌ ಮಹಾಲಕ್ಷ್ಮೀ ಲೇಔಟ್, ವಿಜಯನಗರ,‌ ಯಲಹಂಕ ಹಾಗೂ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ 3ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೇಮ ವೈಫಲ್ಯ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.