ಬೆಂಗಳೂರು : ಸೋಲದೇವನಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದಾಗಿ ಬೈಕ್ ಕಳ್ಳತನ ಮತ್ತು ರಾಬರಿ ಮಾಡುತ್ತಿದ್ದ ಆರೋಪಿಯ ಬಂಧನವಾಗಿದೆ.
ಗಣೇಶ್ ಅಲಿಯಾಸ್ ಗಣಿ ಬಂಧಿತ ಆರೋಪಿ. ಈತನಿಂದ 3.85 ಲಕ್ಷ ಮೌಲ್ಯದ ಚಿನ್ನ, ಹಾಗೂ ಮೂರು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮೇಲೆ ಎಂಟಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈತನನ್ನ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಗೋಪಿಯ ಪಾಪಿ ಕೃತ್ಯ: ಆಸ್ತಿಗಾಗಿ ಹೆತ್ತ ತಾಯಿಯ ಕುತ್ತಿಗೆ ಸೀಳಿದ ಮಗ!