ETV Bharat / state

ಅಪಘಾತವಾದವರನ್ನು ಉಪಚರಿಸುವ ಸೋಗಿನಲ್ಲಿ ಬೈಕ್​ ಕಳ್ಳತನ.. ಆರೋಪಿ ಬಂಧನ - ಬೈಕ್ ಸೈಡಿಗೆ ಪಾರ್ಕ್ ಮಾಡ್ತಿನಿ

ಅಪಘಾತವಾದರೆ ಹೋಗಿ ಸಹಾಯ ಮಾಡೋದನ್ನು ಕೇಳಿರ್ತಿರಾ. ಬೈಕ್‌ನಲ್ಲಿ ಬಿದ್ದರೆ ನೀರು ಕೊಟ್ಟು, ಉಪಚರಿಸೋದನ್ನ ನೋಡಿರ್ತಿರಾ. ಆದರೆ, ಇಲ್ಲೊಬ್ಬ 420 ಸಹಾಯ ಮಾಡೋ ನೆಪದಲ್ಲಿ ಬಂದು ಅಪಘಾತವಾದವರ ಬೈಕ್, ಮೊಬೈಲ್ ದೋಚಿದ್ದಾನೆ.

ಆರೋಪಿ ಬಂಧನ
author img

By

Published : Sep 4, 2019, 7:47 PM IST

ಬೆಂಗಳೂರು: ಕಳೆದ ಅಗಸ್ಟ್​ 8ರ ರಾತ್ರಿ ಅಪಘಾತವೊಂದು ನಡೆದಿತ್ತು. ಆಗ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಆತನ ಬೈಕ್​ ಎಗರಿಸಿದ್ದ ಕಳ್ಳನೋರ್ವನನ್ನು ಈಗ ​ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

ಬಾಲಾಜಿ ಎಂಬುವರು ಅಗಸ್ಟ್‌ 8ರ ರಾತ್ರಿ 9:30ರ ಸುಮಾರಿಗೆ ಜಯನಗರದ ಬಳಿ ಬರುತ್ತಿದ್ದರು. ಈ ವೇಳೆ ತಮ್ಮ ಸುಜುಕಿ ಜಿಕ್ಸರ್ ಬೈಕ್‌ನಿಂದ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಗಾಯಾಳು ಬಾಲಾಜಿಗೆ ಸಹಾಯ ಮಾಡುವ ನೆಪದಲ್ಲಿ ಆರೋಪಿ ಸಿರಾಜ್ ಬಂದಿದ್ದಾನೆ. ಬಾಲಾಜಿಯವರನ್ನ ಬೈಕ್‌ನ ಹಿಂಬದಿ ಕೂರಿಸಿಕೊಂಡು ಜಯನಗರದ ಆರ್ಥೊಪೆಡಿಕ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯರು ಚಿಕಿತ್ಸೆ ನೀಡುವ ವೇಳೆ, ನೀವು ಚಿಕಿತ್ಸೆ ಪಡೆದುಕೊಳ್ಳಿ,‌ ಬೈಕ್ ಸೈಡಿಗೆ ಪಾರ್ಕ್ ಮಾಡ್ತೀನಿ ಅಂತಾ ಬೈಕ್ ಕೀ ಪಡೆದಿದ್ದಾನೆ. ನಂತರ ಬಾಲಾಜಿ ಟ್ರೀಟ್ಮೆಂಟ್ ಪಡೆದು ಬರೋ ವೇಳೆಗಾಗಲೇ ಆರೋಪಿ ಸಿರಾಜ್ ಬೈಕ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ.

ಅಪಘಾತವಾದವರನ್ನು ಉಪಚರಿಸುವ ಸೋಗಿನಲ್ಲಿ ಬೈಕ್​ ಕಳ್ಳತನ..

ಸಿಗರೇಟ್ ಸೇದಲಿಕ್ಕೆ ದುಡ್ಡಿಲ್ಲ ಅಂದ್ರೇ ಬೈಕ್ ಎಗರಿಸುತ್ತಿದ್ದ:

ಆರೋಪಿ ಸಿರಾಜ್ ಈ ಹಿಂದೆ ಜಯನಗರ ವ್ಯಾಪ್ತಿಯಲ್ಲಿ ಇದೇ ರೀತಿ ಕೈಚಳಕ ತೋರಿ ಜೈಲಿಗೆ ಹೋಗಿ ಬಂದಿದ್ದ. ಆದರೂ, ಬೈಕ್​ಗಳನ್ನ ಎಗರಿಸುವ ತನ್ನ ಹಳೇ ಚಾಳಿಯನ್ನ ಮುಂದುವರೆಸಿದ್ದಾನೆ. ಖರ್ಚಿಗೆ ಕಾಸಿಲ್ಲ ಅಂದ್ರೆ, ಧಮ್ ಹೊಡೆಯಲಿಕ್ಕೆ ದುಡ್ಡಿಲ್ಲ ಅಂದ್ರೆ ಬೈಕ್​ಗಳನ್ನ ಎಗರಿಸುತ್ತಿದ್ದನಂತೆ. ಕೈ ಚಳಕ ತೋರಲು ಸಾಧ್ಯವಾಗದ ದಿನಗಳಲ್ಲಿ ಈ ರೀತಿ ಸಹಾಯ ಮಾಡುವ ನೆಪದಲ್ಲಿ ಬೈಕ್​​ ಚೋರಿ ಮಾಡಿ ಎಸ್ಕೇಪ್ ಆಗ್ತಾನಂತೆ.

ಸದ್ಯ ಈ ಘಟನೆ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನ ಬಂಧಿಸಿರುವ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

Intro:nullBody:
ಅಪಘಾತವಾಗಿದ್ದವರ ಉಪಚರಿಸುವ ಸೋಗಿನಲ್ಲಿ ಅವರ ಬೈಕ್, ಮೊಬೈಲ್ ದೋಚಿದ್ದ ಕಳ್ಳನ ಬಂಧನ

ಬೆಂಗಳೂರು: ಅಪಘಾತವಾದರೆ ಹೋಗಿ ಸಹಾಯ ಮಾಡೋದನ್ನು ಕೇಳಿರ್ತಿರಾ. ಬೈಕ್ ನಲ್ಲಿ ಬಿದ್ದರೆ ನೀರು ಕೊಟ್ಟು, ಉಪಚರಿಸೋದನ್ನ ನೋಡಿರ್ತಿರ.. ಆದರೆ ಇಲ್ಲೊಬ್ಬ 420 ಆಸಾಮಿ ಸಹಾಯ ಮಾಡೋ ನೆಪದಲ್ಲಿ ಬಂದವನು ಅಪಘಾತವಾಗಿ ಅಯ್ಯೊ.. ಅಮ್ಮ ಅಂತಿದ್ದವರ ಬೈಕ್, ಮೊಬೈಲ್ ದೋಚಿದ್ದ
ಬಾಲಾಜಿ ಎಂಬುವವರು ಕಳೆದ ತಿಂಗಳ 8 ರ ರಾತ್ರಿ 9:30 ರ ಸುಮಾರಿಗೆ ಜಯನಗರದ ಬಳಿ ಬರುತ್ತಿದ್ದರು. ಈ ವೇಳೆ ತಮ್ಮ ಸುಜುಕಿ ಜಿಕ್ಸರ್ ಬೈಕ್ ನಿಂದ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಗಾಯಾಳು ಬಾಲಾಜಿಗೆ ಸಹಾಯ ಮಾಡುವ ನೆಪದಲ್ಲಿ ಆರೋಪಿ ಸಿರಾಜ್ ಬಂದಿದ್ದಾನೆ.
ಬಾಲಾಜಿರನ್ನ ಬೈಕ್ ನ ಹಿಂಬದಿ ಕೂರಿಸಿಕೊಂಡು ಜಯನಗರದ ಆರ್ಥೊಪೆಡಿಕ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯರು ಚಿಕಿತ್ಸೆ ನೀಡುವ ವೇಳೆ, ನೀವು ಚಿಕಿತ್ಸೆ ಪಡೆದುಕೊಳ್ಳಿ..‌ ಬೈಕ್ ನಾನು ಸೈಡಿಗೆ ಪಾರ್ಕ್ ಮಾಡ್ತಿನಿ ಅಂತ ಬೈಕ್ ಕೀ ಪಡೆದಿದ್ದಾನೆ. ನಂತರ ಬಾಲಾಜಿ ಟ್ರೀಟ್ಮೆಂಟ್ ಪಡೆದು ಬರೋ ವೇಳೆಗಾಗಲೇ ಆರೋಪಿ ಸಿರಾಜ್ ಬೈಕ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ.

ಸಿಗರೇಟ್ ಸೇದಲಿಕ್ಕೆ ದುಡ್ಡಿಲ್ಲ ಅಂದ್ರೆ ಬೈಕ್ ಎಗರಿಸ್ತಿದ್ದ..

ಆರೋಪಿ ಸಿರಾಜ್ ಈ ಹಿಂದೆ ಜಯನಗರ ವ್ಯಾಪ್ತಿಯಲ್ಲಿ ಇದೇ ರೀತಿ ಕೈಚಳಕ ತೋರಿ ಹೊರಬಂದಿದ್ದ. ಹೊರಬಂದ ನಂತರವೂ ಬೈಕ್ ಗಳನ್ನ ಎಗರಿಸುವ ತನ್ನ ಹಳೇ ಚಾಳಿಯನ್ನ ಮುಂದುವರೆಸಿದ್ದ. ಖರ್ಚಿಗೆ ಕಾಸಿಲ್ಲ ಅಂದ್ರೆ, ಧಮ್ ಹೊಡೆಯಲಿಕ್ಕೆ ದುಡ್ಡಿಲ್ಲ ಅಂದ್ರೆ ಬೈಕ್ ಗಳನ್ನ ಎಗರಿಸ್ತಿದ್ನಂತೆ. ಕೈ ಚಳಕ ತೋರಲು ಸಾಧ್ಯವಾಗದ ದಿನಗಳಲ್ಲಿ ಈ ರೀತಿ ಸಹಾಯ ಮಾಡುವ ನೆಪದಲ್ಲಿ ತನ್ನ ಕೈ ಚಳಕ ತೋರಿ ಎಸ್ಕೇಪ್ ಆಗ್ತಾನಂತೆ.

ಸದ್ಯ ಘಟನೆ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನ ಬಂಧಿಸಿರುವ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.