ETV Bharat / state

ನೈಸ್​​​​ ರಸ್ತೆಯಲ್ಲಿ ಜೆಸಿಬಿ-ಬೈಕ್​​​ ಡಿಕ್ಕಿ: ಬೈಕ್​​ ಸವಾರ ಸಾವು - undefined

ನೈಸ್ ರಸ್ತೆಯಲ್ಲಿ ಬೈಕ್ ಮತ್ತು ಜೆಸಿಬಿ ನಡುವೆ ಡಿಕ್ಕಿ‌ ಸಂಭವಿಸಿ ಬೈಕ್​ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೈಕ್ ಮತ್ತು ಜೆಸಿಬಿ ನಡುವೆ ಡಿಕ್ಕಿ‌
author img

By

Published : Mar 30, 2019, 5:29 PM IST

ಬೆಂಗಳೂರು: ನೈಸ್ ರಸ್ತೆಯಲ್ಲಿ ಬೈಕ್ ಮತ್ತು ಜೆಸಿಬಿ ನಡುವೆ ಡಿಕ್ಕಿ‌ ಸಂಭವಿಸಿದ ಪರಿಣಾಮ ಬೈಕ್​ ಸವಾರ ತೀವ್ರವಾಗಿ ಗಾಯಗೊಂಡಿದ್ದ. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ‌ ಕೊನೆಯುಸಿರೆಳೆದಿದ್ದಾನೆ.

ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ನೈಸ್ ರಸ್ತೆಯ ಸೋಂಪುರ ಟೋಲ್ ಕಡೆಯಿಂದ ಕನಕಪುರ ರಸ್ತೆಗೆ ಬರುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. KA-04 JR-2959 ಡ್ಯೂಕ್ ಬೈಕ್ ಸವಾರ ರಕ್ಷಿತ್ ಗೌಡ ಅಸುನೀಗಿದ ಯುವಕ ಎಂದು ಗುರುತಿಸಲಾಗಿದೆ.

nice_road_accident
ನೈಸ್ ರಸ್ತೆಯಲ್ಲಿ ಜೆಸಿಬಿ-ಬೈಕ್ ಡಿಕ್ಕಿ

ಡ್ಯೂಕ್ ಬೈಕ್ ಸವಾರ ರಕ್ಷಿತ್ ಗೌಡ ವೇಗವಾಗಿ ಬೈಕ್​ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಎದುರಿಗೆ ಬಂದ ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು. ಚಿಕಿತ್ಸೆಗೆ ರಕ್ಷಿತ್ ಗೌಡನನ್ನು ಸಾಯಿರಾಮ್ ಆಸ್ಪತ್ರೆಗೆ ದಾಖಲು ಮಾಡಲು ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.