ಬೆಂಗಳೂರು : ರಸ್ತೆ ಬದಿ ನಿಲ್ಲಿಸಿದ್ದ ಬಸ್ನಿಂದ ಇಳಿಯುತ್ತಿದ್ದ ಬಿಎಂಟಿಸಿ ಕಂಡಕ್ಟರ್ಗೆ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ ಜುಲೈ 7 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ಸಿಸಿಟಿವಿ ದೃಶ್ಯದಲ್ಲಿ ಕಾಣುವಂತೆ, ರಸ್ತೆ ಬದಿ ಬಿಎಂಟಿಸಿ ಬಸ್ ನಿಂತಿತ್ತು. ನಿರ್ವಾಹಕ ಪ್ರಯಾಣಿಕರಿಂದ ಟಿಕೆಟ್ ಪಡೆದು ಮುಂಬಾಗಿಲ ಮೂಲಕ ಕೆಳಗೆ ಇಳಿಯುತ್ತಿದ್ದಂತೆ ವೇಗವಾಗಿ ಬಂದ ಬೈಕ್ ಸವಾರ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಂಡಕ್ಟರ್ ರಸ್ತೆಗೆ ಹಾರಿ ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು ಧಾವಿಸಿ ಬಂದು ಕಂಡಕ್ಟರ್ ಅನ್ನು ಉಪಚರಿಸಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.
ಓದಿ : ಕಾರು-ಟ್ರಕ್ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ
ಗಾಯಗೊಂಡ ಕಂಡಕ್ಟರ್ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ.