ಬೆಂಗಳೂರು: ಬೈಕ್ ಡ್ರ್ಯಾಗ್ ರೇಸ್ ವೇಳೆ ಚಮಕ್ ಕೊಡಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.
8 ಬಾರಿ ಬೈಕ್ ಡ್ರ್ಯಾಗ್ ರೇಸ್‌ನಲ್ಲಿ ಗೆದ್ದಿದ್ದ ರಿಸ್ವಾನ್ ಸ್ಥಳದಲ್ಲೇ ಮೃತಟ್ಟಿದ್ದಾನೆ. ಡಿಕ್ಕಿ ಹೊಡೆಸಿಕೊಂಡ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆಂಗಳೂರು ಮತ್ತು ರಾಮನಗರದ ಯುವಕರ ನಡುವೆ ಭಾನುವಾರ ಬೈಕ್ ಡ್ರ್ಯಾಗ್ ರೇಸ್ ಆಯೋಜನೆಯಾಗಿತ್ತು. ಇದಕ್ಕಾಗಿ ಲಕ್ಷಗಟ್ಟಲೆ ಬೆಟ್ಟಿಂಗ್ ಕಟ್ಟಿದ್ದರು. ರೇಸ್ ವೇಳೆ 100 ಕಿ.ಮೀ. ವೇಗದಲ್ಲಿ ಬೈಕ್ ಡ್ರ್ಯಾಗ್ ಮಾಡುತಿದ್ದ ರಿಸ್ವಾನ್ ಆತನ ಎದುರಿಗಿದ್ದ ರಾಮನಗರದ ಯುವಕನಿಗೆ ಚಮಕಾಯಿಸಲು ಹೋಗಿ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇನ್ನು, ಘಟನೆ ಕುರಿತು ಕಗ್ಗಲಿಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.