ಬೆಂಗಳೂರು: ಡಿಜಿಟಲ್ ಅಗ್ರಿ ಪ್ಲಾಟ್‌ಫಾರ್ಮ್ ಆಗಿರುವ 'ಬಿಗ್‌ಹಾತ್' ಕನ್ನಡದಲ್ಲಿ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಮತ್ತು 'ಬಿಗ್‌ಹಾತ್' ಸಿಇಒ ಸತೀಶ ನೂಕಾಲ ಅವರು ಈ ಆ್ಯಪ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಯೋಗಿ ಕಳಸದ, ಕರ್ನಾಟಕದಲ್ಲಿ ಜನಸಂಖ್ಯಾ ಗಣತಿ 2011ರ ವರದಿಯ ಪ್ರಕಾರ ಕೃಷಿಯು 13 ದಶಲಕ್ಷಕ್ಕೂ ಹೆಚ್ಚು ರೈತರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಒಟ್ಟು 114.54 ಲಕ್ಷ ಹೆಕ್ಟೇರ್ ಭೂಮಿಯನ್ನು ಸಾಗುವಳಿ ಮಾಡಲು ಲಭ್ಯವಿದೆ. ಇದು ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇ.64.6ರಷ್ಟಾಗಿದೆ. ಕನ್ನಡದಲ್ಲಿ 'ಬಿಗ್‌ಹಾತ್' ಆ್ಯಪ್ ಮೂಲಕ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬಿಗ್‌ಹಾತ್ ಸಿಇಒ ಮತ್ತು ಸಹ ಸಂಸ್ಥಾಪಕ ಸತೀಶ್ ನೂಕಲಾ ಮಾತನಾಡಿ, ರೈತರಿಗೆ ಸ್ಥಳೀಯ ಅಗತ್ಯತೆಗಳಿಗಾಗಿ ಅವರವರ ಭಾಷೆಯಲ್ಲಿ ಸಂವಹನ ನಡೆಸುವುದು ಅವರು ವೇಗವಾಗಿ ನಿರ್ಧಾರ ತೆಗೆದುಕೊಳ್ಳಲು ಈ ಆ್ಯಪ್ ಸಹಾಯ ಮಾಡುತ್ತದೆ. ಸುಗ್ಗಿ ಮತ್ತು ಪೂರ್ವ ಕೊಯ್ಲಿಗೆ ಬೇಕಾದ ಅಗತ್ಯತೆಗಳ ಮಾಹಿತಿಯೊಂದಿಗೆ ಕನ್ನಡದಲ್ಲಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದರು.
ಆ್ಯಪ್ ಬಳಕೆ ಸರಳವಾಗಿದ್ದು, ವಿಸ್ತೀರ್ಣ, ಜಿಯೋಲೊಕೇಶನ್ ಮತ್ತು ಮಣ್ಣಿನ ಮಾದರಿಯನ್ನು ಆಧರಿಸಿ ಬೆಳೆ ಸಂರಚನೆ ಮತ್ತು ಪ್ರೊಫೈಲಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ರೈತರಿಗೆ ಸಹಾಯ ಮಾಡುತ್ತದೆ. ಉತ್ಪನ್ನಗಳ ಬಗ್ಗೆ ಮಾಹಿತಿಗಳನ್ನೂ ನೀಡುತ್ತದೆ. ಇಳುವರಿ ಹೆಚ್ಚಿಸಲು ನೆರವಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಸರಣಿ ಬಂದ್ಗೆ ಕರೆ