ಮಹದೇವಪುರ: ಬಿದರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವರುಣ್ ಬಿ.ವಿ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುಜಾತ ಚುನಾಯಿತರಾಗಿದ್ದಾರೆ.
36 ಸದಸ್ಯರನ್ನು ಹೊಂದಿರುವ ಪಂಚಾಯತಿಗೆ ಇಂದು ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವರುಣ್ ಮತ್ತು ರಾಜೇಶ್, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತ ಎನ್ ಮತ್ತು ತೊಳಸಮ್ಮ ನಾಮಪತ್ರ ಸಲ್ಲಿಸಿದ್ದರು.
ಬಿದರಹಳ್ಳಿ ಗ್ರಾಪಂ ಚುನಾವಣೆ: ಕಾಂಗ್ರೆಸ್ಗೆ ಅಧ್ಯಕ್ಷ ಪಟ್ಟ,ಬಿಜೆಪಿಗೆ ಉಪಾಧ್ಯಕ್ಷ ಪಟ್ಟ 18 ಮತಗಳನ್ನು ಪಡೆದ ವರುಣ್ ಅಧ್ಯಕ್ಷರಾದರೆ, 19 ಮತಗಳನ್ನು ಪಡೆದು ಸುಜಾತ ಎನ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆಂದು ಚುನಾವಣಾಧಿಕಾರಿ ಗೀತಾ ಘೋಷಿಸಿದರು.ಮತದಾನದ ನಂತರ ಪಂಚಾಯಿತಿ ಕಚೇರಿಯಿಂದ ಹೊರ ಬಂದ ಅಭ್ಯರ್ಥಿಗಳು ಜೈಕಾರ ಹಾಕಿ ಪಟಾಕಿ ಸಿಡಿಸಿ ತಮಟೆ ವಾದ್ಯದ ಜೊತೆ ಸಂಭ್ರಮಾಚರಣೆಯನ್ನು ಕಾಂಗ್ರೆಸ್ ಬೆಂಬಲಿಗರು ಮಾಡುತ್ತಿದ್ದರು. ಅದೇ ಸಮಯದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಾಜೇಶ್ ಅವರಿಗೆ ಕಾಂಗ್ರೆಸ್ಸಿನ ಬೆಂಬಲಿಗರು ಹೂ ಹಾರವನ್ನು ಹಾಕಲು ಯತ್ನಿಸಿದಾಗ ಗದ್ದಲ ಉಂಟಾಯಿತು. ಆಗ ಪೊಲೀಸರು ಅಲ್ಲಲ್ಲಿ ನೆರೆದಿದ್ದ ನೂರಾರು ಬೆಂಬಲಿಗರನ್ನು ಲಘು ಲಾಠಿ ಚಾರ್ಜ್ ಮಾಡುವ ಮೂಲಕ ಚದುರಿಸಿದರು.
ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದ ರಾಜೇಶ್ ಅವರು ಬಿಜೆಪಿಯ ಸಹಕಾರದಿಂದ ಬಂಡಾಯವಾಗಿ ಚುನಾವಣೆಯಲ್ಲಿ ಸೋತಿದ್ದರು. ಇದರಿಂದ ಕಾಂಗ್ರೆಸ್ಸಿನ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.