ಮಹದೇವಪುರ: ಕಸದ ಸಮಸ್ಯೆ ಬಿಬಿಎಂಪಿಗೆ ಮಾತ್ರವಲ್ಲ, ಪಂಚಾಯಿತಿಗಳ ವ್ಯಾಪ್ತಿಯಲ್ಲೂ ದೊಡ್ಡ ಸಮಸ್ಯೆಯಾಗಿನ ಪರಿಣಮಿಸಿದೆ. ಒಂದೆಡೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದರೆ, ಮತ್ತೊಂದೆಡೆ ಕಟ್ಟಡಗಳು ಹಾಗೂ ಅಂಗಡಿಗಳ ಮಾಲೀಕರು ತ್ಯಾಜ್ಯವನ್ನು ರಸ್ತೆಬದಿಗಳಲ್ಲಿ ಸುರಿಯುತ್ತಿದ್ದಾರೆ.
ಮಹದೇವಪುರದ ಬಿದರಹಳ್ಳಿ ಗ್ರಾಮದಿಂದ ಕಿತ್ತಗನೂರು ಹೋಗುವ ಮಾರ್ಗದುದ್ದಕ್ಕೂ ರಾಶಿ - ರಾಶಿ ಕಸ ಸುರಿಯಲಾಗಿದೆ. ಈ ಮಾರ್ಗದಲ್ಲಿ ಬೀದಿನಾಯಿಗಳ ಕಾಟ ಕೂಡ ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ವಾರದಲ್ಲಿ 3 ರಿಂದ 4 ವಾಹನ ಸವಾರರು ಬೀದಿ ನಾಯಿಗಳಿಂದ ಅಪಘಾತಕ್ಕೀಡಾಗುತ್ತಿದ್ದಾರೆ. ಬಿದರಹಳ್ಳಿ ಗ್ರಾಮ ಪಂಚಾಯಿತಿಗೆ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಸದಸ್ಯರು ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದಿನವೂ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಕೆ.ಆರ್.ಪುರ, ಮಹದೇವಪುರ, ಬೆಂಗಳೂರು ನಗರಕ್ಕೆ ಹೋಗಬೇಕಾದರೆ ಇದೇ ರಸ್ತೆಯಲ್ಲಿ ಸಂಚಾರ ಮಾಡಬೇಕಾಗುತ್ತದೆ. ಮಾಂಸದಂಗಡಿಗಳ ತ್ಯಾಜ್ಯಗಳನ್ನೂ ಸಹ ಇಲ್ಲೇ ಸುರಿಯುತ್ತಿರುವುದರಿಂದ ಸಾಂಕ್ರಮಿಕ ರೋಗಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಓದಿ: ಗೋವಿಂದಪುರ ಡ್ರಗ್ಸ್ ಕೇಸ್: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ಗೌಡ ಬಂಧನ