ಬೆಂಗಳೂರು : ನಿನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ಪಕ್ಕಾ ಎಂಟರ್ಟೇನರ್ ಸಿನಿಮಾ ಬ್ರಹ್ಮಚಾರಿ. ಈ ಸಿನೆಮಾ ಟೀಸರ್ ಹಾಗೂ ಸಾಂಗ್ನಿಂದಾಗಿ ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.
"ಬ್ರಹ್ಮಚಾರಿ"ಯ ಬೆಡ್ ರೂಂ ಸಿಕ್ರೇಟ್ ದೃಶ್ಯವೊಂದು ಲೀಕ್ ಆಗಿದೆ. ಚಿತ್ರದ ಬೆಡ್ ರೂಂ ಕಾಮಿಡಿ ಸೀನ್ ಒಂದರಲ್ಲಿ ಬ್ರಹ್ಮಚಾರಿ ಸತೀಶ್ ಹಾಸಿಗೆ ಮೇಲೆ ಮಲಗಿದ್ದಾಗ ಅವರ ಕಾಲಿನ ಹೆಬ್ಬೆರಳಿಗೆ ಅದಿತಿ ದಾರ ಕಟ್ಟಿ ಮಲಗೋ ಸೀನ್ ಲೀಕ್ ಆಗಿದೆ.
ಇನ್ನೂ ಈ ಸೀನ್ ಸಖತ್ ಫನ್ನಿಯಾಗಿದ್ದು, ಅಯೋಗ್ಯ ಸತೀಶನ ಅವತಾರ ನಿಜಕ್ಕೂ ಹೊಸತನದಿಂದ ಕೂಡಿದೆ. ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಸದ್ಯ ಈ ಶೂಟಿಂಗ್ ಅವಾಂತರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕ್ವಾಟ್ಲೆ ಸತೀಶ ಮದುವೆಯಾಗಿದ್ರು. ಯಾಕಪ್ಪ ಬ್ರಹ್ಮಚಾರಿ ಆಗಿದ್ದಾನೆ ಎಂಬುದು ಸಿನಿಮಾ ಬಿಡುಗಡೆಗೊಂಡ ನಂತರವಷ್ಟೇ ಗೊತ್ತಾಗಲಿದೆ. ಇನ್ನೂ ಈ ಸಿನಿಮಾವನ್ನು ಚಂದ್ರಮೋಹನ್ ನಿರ್ದೇಶನ ಮಾಡಿದ್ದು. ನವೆಂಬರ್ನಲ್ಲಿ "ಬ್ರಹ್ಮಚಾರಿ"ಯ ಪೀಕಲಾಟ ಪ್ರೇಕ್ಷಕರ ಮುಂದೆ ಬರಲಿದೆ.