ETV Bharat / state

ಆಮ್‌ ಆದ್ಮಿ ಪಕ್ಷ ತ್ಯಜಿಸಿ ಬಿಜೆಪಿ ಸೇರಲು ಸಜ್ಜಾದ ಭಾಸ್ಕರ್ ರಾವ್: ನಾಳೆ ಪಕ್ಷ ಸೇರ್ಪಡೆ

author img

By

Published : Feb 28, 2023, 9:00 PM IST

Updated : Feb 28, 2023, 9:51 PM IST

ಆಮ್ ಆದ್ಮಿ ಪಕ್ಷದ​ ನಾಯಕ ಭಾಸ್ಕರ್​ ರಾವ್ ಅವರು​ ನಾಳೆ ಬಿಜೆಪಿ ಸೇರಲಿದ್ದಾರೆ.

bhaskar-rao-will-join-bjp-tomorrow
ನಾಳೆ ಬಿಜೆಪಿ ಸೇರ್ಪಡೆಯಾಗಲಿರುವ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರು: ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷ ಸೇರಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ತಮ್ಮ‌ ರಾಜಕೀಯದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಬಿಜೆಪಿ ಸೇರುವುದು ಖಚಿತವಾಗಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಾಳೆ ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅವರು ಪಕ್ಷ ಸೇರಲಿದ್ದಾರೆ.

ಇಂದು ಬೆಳಗ್ಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಭಾಸ್ಕರ್​ ರಾವ್​ ಭೇಟಿ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಬಿಜೆಪಿ ಸೇರುವ ಬಗ್ಗೆಯೂ ಮಾತುಗಳು ಕೇಳಿಬಂದಿತ್ತು. ಆದರೆ ಬಿಜೆಪಿ ನಾಯಕರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೇ ಭಾಸ್ಕರ್​ ರಾವ್ ​ ಕರ್ನಾಟಕ ಚುನಾವಣಾ ಉಸ್ತುವಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ತೆರಳಿದ್ದಾಗಿ ಹೇಳಲಾಗಿತ್ತು. ಇದೀಗ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿರುವ ಅವರು, ನಾಳೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಖಚಿತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ದಾವಣಗೆರೆ ಆಗಮಿಸಲಿರುವ​ ಕೇಜ್ರಿವಾಲ್: ಆಪ್​ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಮಾರ್ಚ್​ 4ರಂದು ಕರ್ನಾಟಕಕ್ಕೆ ಬರಲಿದ್ದಾರೆ. ದಾವಣಗೆರೆಯಲ್ಲಿ ಆಮ್​ ಆದ್ಮಿ ಪಾರ್ಟಿ​ ಹಮ್ಮಿಕೊಂಡಿರುವ ಬೃಹತ್​ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ನಡುವೆಯೇ ಆಪ್​ ನಾಯಕ ಭಾಸ್ಕರ್​ ರಾವ್​ ಬಿಜೆಪಿ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.

2022ರಲ್ಲಿ ಆಪ್ ಸೇರಿದ್ದ ಭಾಸ್ಕರ್​ ರಾವ್​: 2022ರ ಎಪ್ರಿಲ್​ 2 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಸಮ್ಮುಖದಲ್ಲಿ ಭಾಸ್ಕರ್​ ರಾವ್​ ಆಪ್​ ಸೇರಿದ್ದರು. ತಮ್ಮ ವೃತ್ತಿ ಜೀವನದಿಂದ ನಿವೃತ್ತರಾಗಲು ಇನ್ನೂ ಮೂರು ವರ್ಷ ಇರುವಾಗಲೇ​ ಆಪ್ ಸೇರುವ ಬಗ್ಗೆ ರಾವ್ ಚಿಂತನೆ ನಡೆಸಿದ್ದಾಗಿ ತಿಳಿಸಿದ್ದರು.

ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ರಾಜ್ಯದ ಯುವಕರು, ಮಹಿಳೆಯರು ಬದಲಾವಣೆ ಬಯಸಿದ್ದಾರೆ. ಕರ್ನಾಟಕಕ್ಕೆ ಶುದ್ಧ ಆಡಳಿತದ ಅವಶ್ಯಕತೆ ಇದೆ. ದೆಹಲಿ ಮಾದರಿ ಆಡಳಿತವನ್ನು ಇಲ್ಲಿ ಅನುಷ್ಠಾನ ಮಾಡಲು ಆಪ್​ ಸೇರಿದ್ದಾಗಿ ಅಂದು ಹೇಳಿದ್ದರು.

ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಆಪ್ ನಾಯಕ! ಜಗನ್ನಾಥ ಭವನಕ್ಕೆ ಭಾಸ್ಕರ್ ರಾವ್ ಬಂದಿದ್ದೇಕೆ?

Last Updated : Feb 28, 2023, 9:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.