ಬೆಂಗಳೂರು : ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ ಹೇಳಿದ್ದಾರೆ. ಪ್ರಸ್ತುತ ರೈಲ್ವೆ ವಿಭಾಗದ ಎಡಿಜಿಪಿ ಆಗಿದ್ದ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಭಾವನಾತ್ಮಕ ಟ್ವೀಟ್ ಮಾಡಿರುವ ಅವರು, ಕಚೇರಿಯಿಂದ ಮನೆಯ ಕಡೆ ಕೊನೆಯ ಟ್ರಿಪ್ ಎಂದು ಬರೆದು, ಸಿಬ್ಬಂದಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
2021ರ ಸೆಪ್ಟೆಂಬರ್‌ನಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದ ಭಾಸ್ಕರ್ ರಾವ್, ಸರ್ಕಾರವು ಕೂಡಲೇ ಅದನ್ನು ಪರಿಗಣಿಸಬೇಕು ಎಂದು ಕೋರಿದ್ದರು. ಕಳೆದ 7 ತಿಂಗಳಿಂದ ಕೇಂದ್ರ ಸರ್ಕಾರವು ಸ್ವಯಂ ನಿವೃತ್ತಿ ಅರ್ಜಿಗೆ ಅನುಮೋದನೆ ನೀಡಿರಲಿಲ್ಲ. ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಮಾಹಿತಿ ನೀಡಿ, ಅಧಿಕಾರ ಹಸ್ತಾಂತರ ಮಾಡಿದ್ದಾರೆ.
-
Last trip home after curtains down of 32 years in IPS. I have extreme gratitude to my family, the people of Karnataka and all my colleagues,friends,elders & young people in my life and finally the Governments of Karnataka across parties🙏🏽 heading into choppy seas pic.twitter.com/6oXcxn8htx
— Bhaskar Rao (@deepolice12) April 2, 2022 " class="align-text-top noRightClick twitterSection" data="
">Last trip home after curtains down of 32 years in IPS. I have extreme gratitude to my family, the people of Karnataka and all my colleagues,friends,elders & young people in my life and finally the Governments of Karnataka across parties🙏🏽 heading into choppy seas pic.twitter.com/6oXcxn8htx
— Bhaskar Rao (@deepolice12) April 2, 2022Last trip home after curtains down of 32 years in IPS. I have extreme gratitude to my family, the people of Karnataka and all my colleagues,friends,elders & young people in my life and finally the Governments of Karnataka across parties🙏🏽 heading into choppy seas pic.twitter.com/6oXcxn8htx
— Bhaskar Rao (@deepolice12) April 2, 2022
1964ರಲ್ಲಿ ಜನಿಸಿದ್ದ ಭಾಸ್ಕರ್ ರಾವ್, 1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. 2019-20ರ ಅವಧಿಯಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸಿದ್ದರು.
ಭಾಸ್ಕರ್ ರಾವ್ ರಾಜಕೀಯಕ್ಕೆ : ಸದ್ಯ ಭಾಸ್ಕರ್ ರಾವ್ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳಿವೆ. ಆದರೆ, ಈ ಬಗ್ಗೆ ಅವರಿನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಿಂದೂ-ಮುಸ್ಲಿಂ-ಕ್ರೈಸ್ತರೆಲ್ಲ ಅಣ್ಣ-ತಮ್ಮಂದಿರಂತೆ ಯುಗಾದಿ ಹಬ್ಬ ಆಚರಿಸಿದರು.. ಸೌಹಾರ್ದತೆಗೆ ಬಸವಣ್ಣನೇ ಸಾಕ್ಷಿ..