ETV Bharat / state

ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ

author img

By

Published : Feb 14, 2022, 9:24 PM IST

Updated : Feb 14, 2022, 10:38 PM IST

ಹಿರಿಯ ಪೊಷಕ ನಟಿ ಭಾರ್ಗವಿ ನಾರಾಯಣ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಭಾರ್ಗವಿ ನಾರಾಯಣ್ ನಿಧನದ ಟ್ವಿಟರ್ ಮೂಲಕ ಮೊಮ್ಮಗಳು ಸಂಯುಕ್ತ ಹೊರನಾಡು ಮಾಹಿತಿ ನೀಡಿದ್ದಾರೆ.

ಹಿರಿಯ ಪೊಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ
ಹಿರಿಯ ಪೊಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ

ರಂಗಭೂಮಿ ಹಾಗು ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಯ ನಟಿ ಭಾರ್ಗವಿ ನಾರಾಯಣ್ ಇಂದು ರಾತ್ರಿ 7.30ಕ್ಕೆ ನಿಧನರಾಗಿದ್ದಾರೆ. ಭಾರ್ಗವಿ ನಾರಾಯಣ್​​​​ಗೆ 84 ವರ್ಷ ವಯಸ್ಸಾಗಿದ್ದು, ಮೊಮ್ಮಗಳು ಸಂಯುಕ್ತ ಹೊರನಾಡ್ ಅಜ್ಜಿಯ ಸಾವಿನ ಸುದ್ದಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ

ಈ ಬಗ್ಗೆ ಪುತ್ರ ಪ್ರಕಾಶ್ ಬೆಳವಾಡಿ ಪ್ರತಿಕ್ರಿಯಿಸಿದ್ದು, ಎರಡು ವರ್ಷಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸೊಂಟದ ಮೂಳೆ ಮುರಿತಕ್ಕೊಳಗಾಗಿತ್ತು. ಸಂಜೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರು ಬಳಲಿದಂತೆ ಕಂಡು ಬಂದರು. ನಮ್ಮ ಜೊತೆ ಕೆಲ ಮಾತುಗಳನ್ನಾಡಿ ಸಂಜೆ 7.30ರ ವೇಳೆಗೆ ಕೊನೆಯುಸಿರೆಳೆದರು ಎಂದಿದ್ದಾರೆ.

ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್

ಭಾರ್ಗವಿ ನಾರಾಯಣ್ ಆಸೆಯಂತೆ ಅವರ ದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾನ ಮಾಡಲಾಗುತ್ತದಂತೆ. ಈ ಸಂಬಂಧ ಭಾರ್ಗವಿ ಅವರು ಬಹಳ ಹಿಂದೆಯೇ ತಮ್ಮ ಮಕ್ಕಳಿಗೆ ತಿಳಿಸಿದ್ದರಂತೆ.

ಇನ್ನು ವೈದ್ಯಕೀಯ ಪರೀಕ್ಷೆಗಾಗಿ ಭಾರ್ಗವಿ ನಾರಾಯಣ್ ದೇಹವನ್ನ ನೀಡಲಾಗುವುದು ಅಂತಾ ಪ್ರಕಾಶ್ ಬೆಳವಾಡಿ ಈಟಿವಿ ಭಾರತ ಜೊತೆ ಹಂಚಿಕೊಂಡರು. ನಾಳೆ ಬೆಳಗ್ಗೆ ಪ್ರಕಾಶ್ ಬೆಳವಾಡಿ ಮನೆಯಲ್ಲಿ ಇವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು ಇದೇ ವೇಳೆ ತಿಳಿಸಿದರು.

ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ

ಇನ್ನು ಸಿನಿಮಾ, ಕಿರುತೆರೆ ಜೊತೆಗೆ ರಂಗಭೂಮಿಯಲ್ಲೂ ಅಪಾರ ಅನುಭವ ಹೊಂದಿದ್ದ ಭಾರ್ಗವಿ ಅವರದ್ದು ಕಲಾ ಕುಟುಂಬ ಎಂದೇ ಹೇಳಬಹುದು. ಭಾರ್ಗವಿ ಅವರ ಪತಿ ನಾರಾಯಣ್ ಅವರನ್ನು ಮೇಕಪ್ ನಾಣಿ ಎಂದೇ ಕರೆಯಲಾಗುತ್ತಿತ್ತು.

ಭಾರ್ಗವಿ ಅವರ ಪುತ್ರ ಪ್ರಕಾಶ್ ಬೆಳವಾಡಿ ಅವರದ್ದು ರಂಗಭೂಮಿಯಲ್ಲಿ ದೊಡ್ಡ ಹೆಸರು. ಕನ್ನಡ ಸಿನಿಮಾಗಳ ಜೊತೆಗೆ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಭಾರ್ಗವಿ ಪುತ್ರಿ ಸುಧಾ ಬೆಳವಾಡಿ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ, ಭಾರ್ಗವಿ ಅವರ ಮೊಮ್ಮಗಳು, ಸುಧಾ ಬೆಳವಾಡಿ ಅವರ ಪುತ್ರಿ ಸಂಯುಕ್ತಾ ಹೊರನಾಡು ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ‌.

ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್

ಭಾರ್ಗವಿ ನಾರಾಯಣ್ 600 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ , 60ರ ದಶಕದಲ್ಲೇ ಭಾರ್ಗವಿ ನಾರಾಯಣ್ ಕನ್ನಡ ಚಿತ್ರರಂಗಕ್ಕೆ ಪದರ್ಪಣೆ ಮಾಡಿದ್ದರು.

ಹಾಸ್ಯ ಚಕ್ರವರ್ತಿ ನರಸಿಂಹರಾಜು ಅಭಿನಯದ ಪ್ರೊ. ಹುಚ್ಚುರಾಯ ಚಿತ್ರದಲ್ಲಿ ಭಾರ್ಗವಿ ಅಭಿನಯಿಸಿದ್ದರು. ಈ‌ ಸಿನಿಮಾದ ಅಭಿನಯಕ್ಕಾಗಿ 1974-75ರ ಸಾಲಿನ ಅತ್ಯುತ್ತಮ ಪೋಷಕ ನಟಿ ಅಂತಾ ಭಾರ್ಗವಿ ನಾರಾಯಣ್​​ಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.

ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್
ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್

ಇನ್ನು ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, ವಂಶವೃಕ್ಷ, ಪ್ರೊಫೆಸರ್‌ ಹುಚ್ಚುರಾಯ, ಎರಡು ಕನಸು, ಹಂತಕರ ಸಂಚು ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಭಾರ್ಗವಿ ನಾರಾಯಣ್ ಅಭಿನಯಿಸಿದ್ದಾರೆ. ಇನ್ನು ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಭಾರ್ಗವಿ ನಾರಾಯಣ್ ಅಭಿನಯದ ಕೊನೆಯ ಸಿನಿಮಾವಾಗಿದೆ.

ಭಾರ್ಗವಿ ನಾರಾಯಣ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆತ್ಮೀಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಭಾರ್ಗವಿ ನಾರಾಯಣ್ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ.

Last Updated : Feb 14, 2022, 10:38 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.