ETV Bharat / state

ಭಗವದ್ಗೀತೆ ಜೀವನದ ಧರ್ಮ ಯೋಗವಾಗಿದೆ: ಅಭಿನವನ ಶಂಕರ ಭಾರತಿ ಸ್ವಾಮೀಜಿ

ಬೆಂಗಳೂರಿನಲ್ಲಿ ಶ್ರೀ ಗೀತಾ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಪಾರಾಯಣ ಯಜ್ಞದಲ್ಲಿ ಭಗವದ್ಗೀತೆಯ ಬಗ್ಗೆ ಅಭಿನವನ ಶಂಕರ ಭಾರತಿ ಮಹಾಸ್ವಾಮೀಜಿ ಪ್ರವಚನ ನೀಡಿದರು.

ಅಭಿನವನ ಶಂಕರ ಭಾರತಿ ಮಹಾಸ್ವಾಮೀಜಿrat
ಅಭಿನವನ ಶಂಕರ ಭಾರತಿ ಮಹಾಸ್ವಾಮೀಜಿ
author img

By ETV Bharat Karnataka Team

Published : Dec 22, 2023, 10:55 PM IST

ಬೆಂಗಳೂರು: ಭಗವದ್ಗೀತೆ ವಯಸ್ಸಾದ ಮೇಲೆ ಕಾಲಹರಣ ಮಾಡುವುದಕ್ಕೆ ಓದುವುದು ಎನ್ನುವಂತಾಗಿದೆ. ಆದರೆ ಅದು ಜೀವನದ ಧರ್ಮ ಯೋಗ. ಪ್ರತಿಯೊಬ್ಬರೂ ಹೇಗೆ ಬದುಕಬೇಕು ಎನ್ನುವ ಮರ್ಮ ಅದರಲ್ಲಿ ಅಡಗಿದೆ. ಶೋಕ್ಲಗಳ ಮೂಲಕ ಜೀವನ ನಿರ್ವಹಣೆಯ ಪಾಠ ಹೇಳಿಕೊಡುತ್ತದೆ ಎಂದು ಕೂಡಲಿ ಶೃಂಗೇರಿ ಮಠದ ಶ್ರೀ ಅಭಿನವನ ಶಂಕರ ಭಾರತಿ ಮಹಾಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷತ್​ ಎನ್.ಆರ್.ಕಾಲನಿಯ ರಾಮ ಮಂದಿರದಲ್ಲಿ ಶ್ರೀ ಗೀತಾ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಪಾರಾಯಣ ಯಜ್ಞದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಜೀವನದ ಸಂಕ್ಷಿಪ್ತ ರೂಪ ಭಗದ್ಗೀತೆಯಾಗಿದೆ. ರಣರಂಗದ ಕರ್ಮ ಸಂದೇಶದ ಮೂಲಕ ಜೀವನ ಸಂದೇಶವನ್ನು ಕೊಡಲಾಗಿದೆ. ಹೀಗಾಗಿ ಭಗವದ್ಗೀತೆ ಪ್ರತಿಯೊಬ್ಬರ ಜೀವನದಲ್ಲಿ ಅನಿವಾರ್ಯವಾಗಿದೆ ಎಂದರು.

ಸಾಮೂಹಿಕ ಪಾರಾಯಣ ಯಜ್ಞ
ಸಾಮೂಹಿಕ ಪಾರಾಯಣ ಯಜ್ಞ

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಲೋಕಾರ್ಪಣೆ ನಿರ್ವಿಘ್ನವಾಗಿ ನಡೆಯಬೇಕು ಎನ್ನುವ ಆಶಯ ಈ ಯಜ್ಞದಲ್ಲಿ ಅಡಕವಾಗಿದೆ. ಈ ಗೀತಾ ಜಯಂತಿಯ ಫಲ ಮಹಾದಿನಕ್ಕೆ ಸಮರ್ಪಣೆಯಾಗಿರುವುದು ಒಳ್ಳೆಯ ಸಂಗತಿ ಎಂದು ಶ್ರೀಗಳು ತಿಳಿಸಿದರು.

ಜನವರಿ 22ರ ಪ್ರಾಣ ಪ್ರತಿಷ್ಠಾಪನೆಗೆ ಮೂರು ವಸ್ತುಗಳು ಬಂದಿವೆ. ಇವು ಪವಿತ್ರ ಮಂತ್ರಾಕ್ಷತೆ, ರಾಮನ ಭಾವಚಿತ್ರ ಮತ್ತು ಕರಪತ್ರವಾಗಿದೆ. ಮೂರು ವಸ್ತುಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಕೈಗೊಳ್ಳುತ್ತಿದೆ. ಡಿಸೆಂಬರ್ 31ರೊಳಗೆ ದೇಶದ ಮೂಲೆ ಮೂಲೆಗಳಿಗೆ ತಲುಪಲಿದೆ. ಜನವರಿ 1 ರಿಂದ 15 ರವರೆಗೆ ಸಂಪರ್ಕ ಅಭಿಯಾನದ ಮೂಲಕ ತಲುಪಿಸಲು ಸಜ್ಜಾಗಿದೆ. ಇದಕ್ಕೆ ಸಕಲ ಹಿಂದೂ ಭಾಂಧವರು ಮತ್ತು ರಾಮ ಭಕ್ತರು ಕೈಜೋಡಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಸಜ್ಜಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಪ್ರಾಣ ಪ್ರತಿಷ್ಠಾಪನೆಯ ದಿನ ಎಲ್ಲರೂ ಅಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ನಮ್ಮ ಊರನ್ನೇ ಅಯೋಧ್ಯೆ ಮಾಡಬೇಕಿದೆ. ನಮ್ಮ ಇಷ್ಟದೇವರ ಮಂದಿರಗಳಲ್ಲೇ ರಾಮನ ವಿಗ್ರಹವಿಟ್ಟು ಪೂಜಿಸುವಂತಾಗಬೇಕು. ಐದು ಶತಮಾನಗಳ ಹೋರಾಟದ ಫಲ ರಾಮಮಂದಿರವಾಗಿದೆ. ಅಂದು ದೇಪಗಳನ್ನು ಬೆಳಗಿ ಸನಾತನ ಧರ್ಮದ ಆದರ್ಶ ವ್ಯಕ್ತಿಯಾದ ರಾಮನನ್ನು ಮನೆ ಮನಗಳಲ್ಲಿ ಬೆಳಗಬೇಕು. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ರಾಮ ಮಂದಿರ ಪುನರ್ಸ್ತಾಪನೆಯ ದಿನ ಕನಿಷ್ಠ ಐದು ದೀಪಗಳನ್ನು ಪ್ರತಿ ಮನೆಯಲ್ಲೂ ಬೆಳಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ. ಭಾರತದಲ್ಲಿ ಸುಮಾರು 11 ಕೋಟಿ ಹಿಂದೂ ಕುಟುಂಬಗಳು ದೀಪವನ್ನು ಹಚ್ಚಿದರೆ 100 ಕೋಟಿಗೂ ಹೆಚ್ಚು ದೀಪಗಳು ಅಂದು ಏಕಕಾಲಕ್ಕೆ ಬೆಳಗಲಿವೆ. ಉಪಗ್ರಹದಿಂದ ಛಾಯಾಚಿತ್ರ ತೆಗೆದರೆ ಜ್ಯೋತಿರ್ಮಯವಾಗಿ ಕಾಣಬೇಕು. 500 ವರ್ಷದಿಂದ ಇದಕ್ಕಾಗಿ ಹೋರಾಟ ಮಡಿದ ಎಲ್ಲರಿಗೂ ನಿಜವಾದ ಅರ್ಥದಲ್ಲಿ ನಮನ ಸಲ್ಲಿಸಿದಂತೆ ಆಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್‌ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಡಿ.23ಕ್ಕೆ ವೈಕುಂಠ ಏಕಾದಶಿ: ತಿರುಪತಿ ತಿಮ್ಮಪ್ಪನ ವೈಕುಂಠ ದ್ವಾರ ದಾಟಲು ಹರಿದು ಬಂದ ಭಕ್ತಸಾಗರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.