ETV Bharat / state

ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಬೆಟ್ಟಿಂಗ್: ಇಬ್ಬರ ಬಂಧನ - ETV Bharath Kannada news

World Cup finals: ವಿಶ್ವಕಪ್​ ಫೈನಲ್​ ಪಂದ್ಯದ ವೇಳೆ ಬೆಟ್ಟಿಂಗ್​ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ರಾಜರಾಜೇಶ್ವರಿ ನಗರ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

World Cup finals
World Cup finals
author img

By ETV Bharat Karnataka Team

Published : Nov 21, 2023, 9:20 PM IST

ವಿಶ್ವಕಪ್ ಫೈನಲ್‌ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಬಂಧಿಸಿದ್ದೇವೆ - ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ

ಬೆಂಗಳೂರು: ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿ‌ನ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದ ಮೇಲೆ ಬೆಟ್ಟಿಂಗ್ ಆಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಸಾಕೇತ್ ಹಾಗೂ ರಿಷಭ್ ಬಂಧಿತ ಆರೋಪಿಗಳು.

ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ರಸ್ತೆಯಲ್ಲಿರುವ ಸೆಂಚುರಿ ಇಂಡಸ್‌ ಅಪಾರ್ಟ್‌ಮೆಂಟಿನಲ್ಲಿದ್ದ ಆರೋಪಿಗಳು, ವಿವಿಧ ಬೆಟ್ಟಿಂಗ್ ವೆಬ್‌ಸೈಟ್‌ಗಳಲ್ಲಿ ಖಾತೆ ತೆರೆದು ಅದರ ಐಡಿ ಹಾಗೂ ಪಾಸ್ವರ್ಡ್​ಗಳನ್ನು ಆಡುವವರಿಗೆ ನೀಡುತ್ತಿದ್ದರು. ಅವರಿಂದ ಬೆಟ್ಟಿಂಗ್ ಆಡಿಸುತ್ತಿದ್ದರು. ಆರೋಪಿಗಳ ಕೃತ್ಯದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ವಿಶೇಷ ವಿಚಾರಣ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 65 ಲಕ್ಷ ಮೌಲ್ಯದ 10 ಚಿನ್ನದ ಬಿಸ್ಕೆಟ್, 3 ಲ್ಯಾಪ್‌ಟಾಪ್‌, 1 ಟ್ಯಾಬ್, 3 ಮೊಬೈಲ್ ಫೋನ್‌ ಹಾಗೂ 2,341 ರೂ. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ,"ಖಚಿತ ಮಾಹಿತಿಯ ಮೇರೆಗೆ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್​ ಮೇಲೆ ದಾಳಿ ಮಾಡಿದಾಗ ಲ್ಯಾಪ್​ಟಾಪ್​, ಮೊಬೈಲ್​ನಲ್ಲಿ ಅನಧಿಕೃತ ಬೆಟ್ಟಿಂಗ್​ ಆ್ಯಪ್​ಗಳನ್ನು ಬಳಸಿಕೊಂಡು ಆನ್​ಲೈನ್​ನಲ್ಲಿ ಆಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಅಲ್ಲಿ ಸಿಕ್ಕಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ಆನ್​ಲೈನಲ್ಲಿ ವ್ಯವಹಾರ ಆಗಿರುವುದರಿಂದ ಅವುಗಳ ಬಗ್ಗೆ ಮತ್ತು ದೊರೆತಿರುವ ಚಿನ್ನದ ಬಿಸ್ಕೇಟ್​ಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಚಿನ್ನದ ಖರೀದಿಯ ಬಗ್ಗೆ ಯಾವುದೇ ದಾಖಲಾತಿ ಕೊಟ್ಟಿಲ್ಲ. ಹೀಗಾಗಿ ತನಿಖೆ ಮಾಡುತ್ತಿದ್ದೇವೆ" ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 70 ಲಕ್ಷ ಮೌಲ್ಯದ ಚಿನ್ನ ಕದ್ದು ಮಣ್ಣಿನಲ್ಲಿ ಹೂತಿಟ್ಟಿದ್ದ ಎಸ್ಕೇಪ್​ ಕಾರ್ತಿಕ್​ ಬಂಧನ

ಭಾರತ - ಪಾಕ್​ ಪಂದ್ಯದ ವೇಳೆಯೂ ಬೆಟ್ಟಿಂಗ್​: ಅಕ್ಟೋಬರ್​ 14ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆಯೂ ಬೆಟ್ಟಿಂಗ್​ ನಡೆದಿತ್ತು. ಕ್ರಿಕೆಟ್‌ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು.

ಕಸಬಾಪೇಟ್ ಪೊಲೀಸ್ ಠಾಣೆಯ ಖಾಜಾ ಭಾವಿ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಅರವಿಂದನಗರ, ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರ ಓಣಿ, ಕೇಶ್ವಾಪುರ ಪೊಲೀಸ್ ಠಾಣೆಯ ರೇಲ್ವೇ ಗ್ರೌಂಡ್ ಶತಾಬ್ದಿ ಮದುವೆ ಹಾಲ್ ಸಮೀಪ ಹಾಗೂ ಕುಸುಗಲ್ ರೋಡ್ ರಿಲಯನ್ಸ್ ಮಾರ್ಟ್ ಹತ್ತಿರ ಮತ್ತು ಧಾರವಾಡ ಶಹರ ಪೊಲೀಸ್ ಠಾಣೆಯ ಗಾಂಧಿ ಚೌಕ್ ಪೋಸ್ಟ್ ಆಫೀಸ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದವರ ಮೇಲೆ ಒಟ್ಟು 8 ಪ್ರಕರಣಗಳನ್ನು ದಾಖಲಿಸಿ, 19 ಜನ ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ಪೊಲೀಸ್ ಇಲಾಖೆಯ ಗಸ್ತು ವಾಹನವನ್ನೇ ಅಪಹರಿಸಿದ ಭೂಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.