ಬೆಂಗಳೂರು : ವಿಶ್ವದ ಬೃಹತ್ ಪರಿಸರ ಆಂದೋಲನವಾದ "ಭೂ ಸಮಯ" (ಅರ್ಥ್ ಹವರ್) ಆಚರಿಸಲು ನಾಳೆ ರಾತ್ರಿ 8-30 ರಿಂದ 9-30ರವರೆಗೆ ಒಂದು ಗಂಟೆ ಕಾಲ ಮನೆಗಳಲ್ಲಿ ಅಗತ್ಯವಿಲ್ಲದ ವಿದ್ಯುತ್ ದೀಪಗಳನ್ನು ಆರಿಸಿ ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.
![Bescom requests to people as off the light for an hour tomorrow](https://etvbharatimages.akamaized.net/etvbharat/prod-images/11168478_aaaaaaa.jpg)
ವಲ್ಡ್ ವೈಡ್ ಫಂಡ್ ಸಂಸ್ಥೆ ವಿಶ್ವದಾದ್ಯಂತ ಇದನ್ನು ಆಯೋಜಿಸಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾತಾವರಣ ಬದಲಾವಣೆಯ ವಿರುದ್ಧ ಬೆಂಬಲಿಸಲು ಒಂದು ಗಂಟೆ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಪರಿಸರದ ಬದ್ಧತೆ ಸೂಚಿಸುವ ಸಾಂಕೇತಿಕ ಕಾರ್ಯಕ್ರಮವಾಗಿದೆ.
ಇದನ್ನೂ ಓದಿ: ಪ್ರತಿಯೊಬ್ಬರ ಮೇಲೆ ಮೈಸೂರಿನಲ್ಲಿ 100 ಕ್ಕೂ ಹೆಚ್ಚು ಕೇಸ್ಗಳಿವೆ: ಪೊಲೀಸ್ ಆಯುಕ್ತ
ಜೊತೆಗೆ ಎಲ್ಲಾ ಅಧಿಕಾರಿ-ನೌಕರರು ತಮ್ಮ ಕಚೇರಿ-ಮನೆಗಳಲ್ಲಿ ವಿದ್ಯುತ್ ಉಳಿತಾಯ ಮಾಡಬೇಕೆಂದು ಬೆಸ್ಕಾಂ ಸುತ್ತೋಲೆ ಹೊರಡಿಸಿದೆ.