ಬೆಂಗಳೂರು: ಲಾಕ್ಡೌನ್ನ ಎರಡನೇ ದಿನವಾದ ಇಂದು 10 ಗಂಟೆಯಾಗುತ್ತಿದ್ದಂತೆ ನಗರ ಪೊಲೀಸರು ಪೀಲ್ಡಿಗಿಳಿದು ಕರ್ತವ್ಯದಲ್ಲಿ ತೊಡಗಿದ್ದು, ಖುದ್ದು ಡಿಸಿಪಿ ಸಂಜೀವ್ ಪಾಟೀಲ್ ಸಿಟಿ ರೌಂಡ್ಸ್ ಹೊಡೆದು ಪರಿಸ್ಥಿತಿ ಪರಿಶೀಲನೆ ಮಾಡಿದರು.
ಸುಖಾಸುಮ್ಮನೆ ರಸ್ತೆಗಿಳಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯಕ್ತರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅನಗತ್ಯವಾಗಿ ಓಡಾಡುತಿದ್ದರೆ ವಾಹನ ಸೀಜ್ ಮಾಡುವಂತೆ ಆದೇಶಿಸಿದ್ದಾರೆ.
ಅವಶ್ಯಕತೆ ಇದ್ದರೆ ಮಾತ್ರ ಲಾಠಿ ಬೀಸಿ: ಸುಖಾಸುಮ್ಮನೆ ಜನರಿಗೆ ಹೊಡೆಯಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಬೆತ್ತದ ರುಚಿ ತೋರಿಸಿ ಎಂದು ಪೊಲೀಸ್ ಆಯುಕ್ತರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ, ಲಾಠಿ ಬಿಟ್ಟು ಕೇವಲ ವಾಹನ ಸೀಜ್ ಮಾಡುವ ಸಲುವಾಗಿ ಪೊಲೀಸರು ಒನ್ ವೇ ಮಾಡಿ ತಪಾಸಣೆಯಲ್ಲಿ ತೊಡಗಿದ್ದಾರೆ.
ಲಾಠಿ ಬಿಟ್ಟ ಖಾಕಿ: ಲಾಕ್ಡೌನ್ನ ಮೊದಲ ದಿನ ರಸ್ತೆಗಿಳಿದವರ ಕಾರಣ ಕೇಳದೆ ಪೊಲೀಸರು ಪ್ರಾಣಿಗಳಿಗೆ ಹೊಡೆದಂತೆ ಹೊಡೆದಿದ್ದರು. ಈ ಬಗ್ಗೆ ಪ್ರತಿಪಕ್ಷ ನಾಯಕರು ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಇಂದಿನಿಂದ ಲಾಠಿ ಬೀಸದೆ, ನಿಯಮ ಮೀರಿದವರ ವಿರುದ್ಧ ಕ್ರಮ ಜರುಗಿಸಲು ತೀರ್ಮಾನಿಸಿದೆ. ಹಾಗಾಗಿ, ನಗರದ ಸಿಟಿ ಮಾರುಕಟ್ಟೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡದೆ ಜನರನ್ನು ಎಚ್ಚರಿಸುತ್ತಿರುವುದು ಕಂಡು ಬಂತು.
ಓದಿ : ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಹೇಳ್ತಿಯಾ ಎಂದ ವ್ಯಕ್ತಿಗೆ ಡಿಸಿಪಿ ತರಾಟೆ