ETV Bharat / state

ಮದುವೆಯಾದ ಮೊದಲ ದಿನವೇ ಅನುಮಾನ... ಪತ್ನಿ ಕನ್ಯತ್ವ ಪರೀಕ್ಷೆ ಮಾಡಿಸಿ ಜೈಲು ಸೇರಿದ ಪತಿ - etv bharat

ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಸರಿಯಾಗಿ ಕೊಟ್ಟಿಲ್ಲ, ಮದುವೆಯಾದ್ರು ಬೇರೆಯವನನ್ನ ಪ್ರೀತಿಸ್ತಿದ್ದಾಳೆ.. ಹುಡುಗಿ ಸರಿಯಿಲ್ಲ ಅಂತೆಲ್ಲ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣಗಳನ್ನು ನೋಡಿರುತ್ತೀರಿ. ಆದ್ರೆ ಇಲ್ಲೊಬ್ಬ ಮಹಾಶಯ ಪತ್ನಿಯ ವರ್ಜಿನಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಆಸ್ಪತ್ರೆಗೆ ಕರೆದೊಯ್ದು ಕನ್ಯತ್ವ ಪರೀಕ್ಷೆ ಸಹ ಮಾಡಿಸಿದ್ದಾನಂತೆ.

ಮಹಿಳಾ ಸಹಾಯವಾಣಿ
author img

By

Published : Mar 29, 2019, 12:52 PM IST

ಬೆಂಗಳೂರು: ಪತ್ನಿಯ ಮೇಲಿನ ಗಂಡನ ಅನುಮಾನದ ಭೂತ ಪೊಲೀಸ್​ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಪತ್ನಿಯ ಕನ್ಯತ್ವ(ವರ್ಜಿನಿಟಿ)ದ ಮೇಲೆಯೇ ಅನುಮಾನಗೊಂಡ ಪತಿ ಈಗ ಜೈಲು ಸೇರಿರುವ ವಿಚಿತ್ರ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಸರಿಯಾಗಿ ಕೊಟ್ಟಿಲ್ಲ, ಮದುವೆಯಾದ್ರು ಬೇರೆಯವನನ್ನ ಪ್ರೀತಿಸ್ತಿದ್ದಾಳೆ.. ಹುಡುಗಿ ಸರಿಯಿಲ್ಲ ಅಂತೆಲ್ಲ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣಗಳನ್ನು ನೋಡಿರುತ್ತೀರಿ. ಆದ್ರೆ ಮಹಾಶಯ ಪತ್ನಿಯ ವರ್ಜಿನಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಆಸ್ಪತ್ರೆಗೆ ಕರೆದೊಯ್ದು ಕನ್ಯತ್ವ ಪರೀಕ್ಷೆ ಸಹ ಮಾಡಿಸಿದ್ದಾನಂತೆ.

ವಾಂತಿ ಮಾಡಿಕೊಂಡ ಪತ್ನಿ:

ಕನ್ಯತ್ವ ಪರೀಕ್ಷೆ ಬಳಿಕ ಪತ್ನಿಗೆ ಹುಷಾರಿಲ್ಲದ ಕಾರಣ ಆಗಾಗ ವಾಂತಿ ಶುರುವಾಗಿತ್ತು. ಇದನ್ನು ತಪ್ಪಾಗಿ ತಿಳಿದುಕೊಂಡು ನೀನು ಮತ್ತೋರ್ವನ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಿಯಾ ಎಂದು ಪತಿಯ ಕುಟುಂಬಸ್ಥರೆಲ್ಲ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಲ್ಲದೆ ಮಹಿಳಾ ಸಹಾಯವಾಣಿಯ ಮೊರೆ ಹೋಗಿದ್ದಾಳೆ.

ಪ್ರಕರಣದ ಹಿನ್ನೆಲೆ:

ಆಕೆಯದು ಬಡ ಕುಟುಂಬ. ಮೂವರು ಅಕ್ಕ-ತಂಗಿಯರಿದ್ದು ಅವರಿಗೆಲ್ಲಾ ಮದುವೆಯಾಗಿದೆ. ಇನ್ನು ತಂದೆ ತೀರಿಕೊಂಡಿದ್ದರು. ಹೀಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ನನ್ನ ತಾಯಿಯನ್ನ ನೋಡಿಕೊಳ್ಳುತ್ತಿದ್ದಳು. ಆದರೆ ತಾಯಿಗೆ ಕ್ಯಾನ್ಸರ್ ಇದ್ದ ಕಾರಣ ಮನೆಯಲ್ಲಿ ಮದುವೆಯ ಚಿಂತೆಯಿತ್ತು. ಈ ವೇಳೆ ಮದುವೆಗೆ ಸಂಬಂಧವೊಂದು ಕೂಡಿ ಬಂದಿತ್ತು. ಮದುವೆ ಮುನ್ನವೇ ತಾಯಿ ತೀರಿಕೊಂಡಿದ್ದರು.

ತಾಯಿ ತೀರಿಕೊಂಡರೂ ಸಹ ಆಗ ನೋಡಿದ್ದ ಹುಡುಗನನ್ನೇ ವಿವಾಹವಾಗಲು ಯುವತಿ ಒಪ್ಪಿದ್ದಳು. ಈ ನಡುವೆ ತಾಯಿ ಕೊನೆಯುಸಿರೆಳೆದ ವೇಳೆ ಯುವತಿಗೆ ಒಬ್ಬಂಟಿತನ‌ ಕಾಡ್ತಿತ್ತು. ಆಗ ತಂದೆ ಸಮಾನರಂತಿದ್ದ ವ್ಯಕ್ತಿವೋರ್ವನ ಬಳಿ ತನಗಾದ ನೋವಿನ ಬಗ್ಗೆ ಹೇಳಿಕೊಳ್ಳುತ್ತಿದ್ದಳು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಯುವಕ ಮದುವೆಯಾದ ಮೊದಲ ದಿನವೇ ಪತ್ನಿಯ ಕನ್ಯತ್ವದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದನಂತೆ.

ಬಳಿಕ ಆಸ್ಪತ್ರೆಗೆ ಕರೆದೊಯ್ದು ವರ್ಜಿನಿಟಿ ಟೆಸ್ಟ್ ಕೂಡ ಮಾಡಿಸಿದ್ದಾನೆ. ಬಳಿಕ ಆರೋಗ್ಯ ಹದಗೆಟ್ಟು ಆಗಾಗ ವಾಂತಿ ಆಗುತ್ತಿರುವುದನ್ನೂ ತಪ್ಪಾಗಿ ತಿಳಿದುಕೊಂಡು ಬೇರೊಬ್ಬನಿಂದ ನೀನು ಗರ್ಭಿಣಿಯಾಗಿದ್ದಿಯಾ ಎಂದು ಪತಿಯ ಕುಟುಂಬಸ್ಥರೆಲ್ಲಾ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಲ್ಲದೆ ಮಹಿಳಾ ಸಹಾಯವಾಣಿಯ ಮೊರೆ ಹೋಗಿ
ಎಲ್ಲ ವಿವರಿಸಿದ್ದಾಳೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಸಹಾಯವಾಣಿ, ಸದ್ಯ ಸಂತ್ರಸ್ತೆಯಿಂದ ಶಿವಾಜಿನಗರ ಪೊಲೀಸ್ ಠಾಣೆಗೆ ದೂರು ಕೊಡಿಸಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

Kn_Bng_08_lady assault _bhavya_7204498
Bhavya

ಸಿಲಿಕಾ ನ್ ಸಿಟಿಯಲ್ಲಿ ವಿಚಿತ್ರ ಘಟನೆ ಬೆಳಕಿಗೆ
ಮದುವೆಯಾದ ದಿನವೇ ಹೆಂಡತಿಯ ಜೊತೆ ವಿಚಿತ್ರವಾಗಿ ನಡೆದುಕೊಂಡ ಭೂಪ

ಮದುವೆ ಈ ಮೂರಕ್ಷರದಲ್ಲಿ ತೀರದ ಸಂಬಂಧ ಅಡಗಿದೆ.. ಆದ್ರೆ ಒಮ್ಮೆ ಆ ಸಂಬಂಧಕ್ಕೆ ಗಟ್ಟಿಯಾದ್ರೆ ಕಷ್ಟಾನೋ ಸುಖಾನೋ ಬಾಳಲೇ ಬೇಕು..ಆದ್ರೆ ಇಲ್ಲೊಬ್ಬ ಪತ್ನಿ ಮಾತ್ರ ಮದುವೆಯಾಗಿದ ತಪ್ಪಿಗೆ ಮದುವೆಯಾದ ಮೊದಲ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಅದೇನು ಅನ್ನೋದ್ರ ಸ್ಟೊರಿ ಹೇಳ್ತೀವಿ ಕೇಳಿ
ಲುಕ್
ವರದಕ್ಷಿಣೆ, ಹುಡುಗಿ ಸರಿಯಿಲ್ಲ, ಪ್ರೀತಿಯಲ್ಲಿದ್ದಾಳೆ ಹೀಗೆ ನಾನಾ ಕಾರಣ ನೀಡಿ ಇಂದು ಹವರ ಸಂಸಾರ ಬೀದಿಗೆ ಬಿದ್ದಿದೆ... ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಸರಿಯಾಗಿ ಕೊಟ್ಟಿಲ್ಲ ಮದುವೆಯಾದ್ರು ಬೇರೆಯವನನ್ನ ಪ್ರೀತಿಸ್ತಿದ್ದಾಳೆ.. ಹುಡುಗಿ ಸರಿಯಿಲ್ಲ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನೋಡಿದ್ದೀರಾ ಆದ್ರೆ ಇವತ್ತು ಹೇಳ್ತೀರೋ ಸ್ಟೋರಿ ಎಂಥವರನ್ನೂ ಕೂಡ ಶಾಕ್ ಒಳಗೆ ಪಡಿಸುತ್ತೆ..

ಆಕೆಬಶ್ರೀಮಂತ ಕುಟುಂಬದಿಂದ ಬಂದವಳು ಮೂರು ಜನ ಅಕ್ಕ ತಂಗಿಯರು..ಅವರಿಗೆಲ್ಲಾ ಮದುವೆಯಾಗಿದೆ, ತಂದೆ  ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡ್ರು ಹೀಗಾಗಿ  ಪ್ರೈವೇಟ್ ಸೆಕ್ಟರ್ ನಲ್ಲಿ ಕೆಲಸ ಮಾಡಿಕೊಂಡು ನನ್ನ ತಾಯಿಯನ್ನ ನೋಡಿಕೊಳ್ತಿದ್ಲು.ಆದ್ರೆ ಅವರಿಗೆ ಕ್ಯಾನ್ಸರ್ ಇದ್ದ ಕಾರಣ ಮನೆಯಲ್ಲಿ ಮದುವೆಯ ಚಿಂತೆಯಿತ್ತು ಹೀಗಾಗಿ ಒಂದು ಸಂಬಂಧ ಕೂಡಿ ಬಂದಿತ್ತು ..ಆತ  ಇಷ್ಟ ಪಟ್ಟ ಕಾರಣ  ಹೀಗಾಗಿ ಮನೆಯಲ್ಲಿ ಇರುವ ಕಷ್ಟವನ್ನ‌ ನೋಡಿ ಮದುವೆಗೆ ಸಮ್ಮತಿ ಸೂಚಿಸಿದ್ಲು

ಆದ್ರೆ‌ ಮದುವೆಗೆ ಮುನ್ನವೇ ತಾಯಿ ಖಾಯಿಲೆಯಿಂದ ಸತ್ತುಹೋದರು..ಆದ್ರೆ ಅದಾದ ಮೇಲೆ  ನೋಡಿದ ಗಂಡನ್ನೇ ಮದುವೆಯಾಗಲು ಒಪ್ಪಿದ್ರು..  ಈ ನಡುವೆ  ತಾಯಿ ತೀರಿಹೋದ ಕಾರಣ ಒಬ್ಬಂಟಿತನ‌ ಕಾಡ್ತಿತ್ತು.. ಹೀಗಾಗಿ ಕೆಲ ದಿನ‌‌ ಖಿನ್ನತೆಗೆ ಹೋಗಿದ್ಲು ಸಂತ್ರಸ್ಥೆ . ಆದ್ರೆ ಇದನ್ನೇ ತಪ್ಪಾಗಿ ಅರ್ಥೈಸಿ ಪದೆ ಪದೆ ತಪ್ಪು ತಿಳಿದುಕೊಳ್ತಿದ್ದ ಆರೋಪಿ

ಈ ವೇಳೆ  ತಂದೆ ಸಮಾನರಂತಿದ್ದ ವ್ಯಕ್ತಿಯೊಡನೆ   ತಮಗಾದ ನೋವಿನ ಬಗ್ಗೆ ಹೇಳಿಕೊಳ್ತಿದ್ಲು . ಅದನ್ನೂ ತಪ್ಪಾಗಿ ಅರ್ಥೈಸಿ ಮದುವೆಯಾದ ಮೊದಲ ದಿನವೇ  ಸಂತ್ರಸ್ಥೆ ವರ್ಜಿನಿಟಿ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡ ಪತಿ.. ಆಸ್ಪತ್ರೆಗೆ ಕರೆದುಕೊಂಡು ಹೋಗಿ ವರ್ಜಿನಿಟಿ ಟೆಸ್ಟ್ ಮಾಡಿಸಿದ್ದಾರೆ.. ಅಲ್ಲದೆ ಅದಾದ ಬಳಿಕ ತೀರಾ ಹುಷಾರಿಲ್ಲದ ಕಾರಣ ಆಗಾಗ್ಗೆ ವಾಂತಿ ಶುರುವಾಗಿತ್ತು ಇದನ್ನು ತಪ್ಪಾಗಿ ತಿಳಿದುಕೊಂಡು ನೀನು ಮತ್ತೊಬ್ಬ ಮಗುವಿಗೆ ಜನ್ಮ ನೀಡಲು ಮುಂದಾಗಿದ್ಯ ಎಂದು ಪತಿಯ ಕುಟುಂಬಸ್ಥರೆಲ್ಲಾ ಹಲ್ಲೆ ಮಾಡಿ ದ್ದಾರೆ.  ತುಂಬಾ ನೋವಾದ ಕಾರಣ ಸಙತ್ರಸ್ಥೆ  ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.. ಮಹಿಳಾ ಸಹಾಯವಾಣಿಯ ಮೊರೆ ಹೋಗಿ
ಎಳೆಎಳೆಯಾಗಿ ಸಂತ್ರಸ್ಥೆ ಮಹಿಳಾ ಸಹಾಯವಾಣಿ ಮೊರೆ ಹೋಗಿದ್ಲು ಇದಕ್ಕೆ ಪ್ರತಿಕ್ರಯಿಸಿದ ಮಹಿಳಾ ಸಹಾಯವಾಣಿ.. ಸದ್ಯ ಸಂತ್ರಸ್ಥೆಯಿಂದ ಶಿವಾಜಿನಗರ ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಿ  ಕಲಆತನನ್ನ ಅರೆಸ್ಟ್ ಮಾಡಿದ್ದಾರೆ..
ಒಟ್ನಲ್ಲಿ ಅನಾಥ ಭಾವ ಕಾಡ್ತಿದ್ದ ಹೆಣ್ಟು ಮಗಳಿಗೆ ಆಸರೆಯಾಗಿ ಬಂದು ಮದುವೆಯೂ ಆಗಿ ಆಕೆಯ ಮೇಲೆ ನಿತ್ಯ ಅನುಮಾನಪಟ್ಟು ಆಕೆಯ ಶೀಲದ ಬಗ್ಗೆಯೇ ಶಂಕಿಸಿದ್ದ ಈ ಪಾಪಿ ಪತಿಗೆ ಏನನ್ನ ಬೇಕು ಹೇಳಿ.ಡೌಟ್ ಪತಿಗೆ ಪೊಲೀಸರು ಸರಿಯಾದ ಶಾಸ್ತಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.