ETV Bharat / state

ಸಂಭ್ರಮದ ಸಂಕ್ರಾಂತಿಯ ಕಳೆ ಹೆಚ್ಚಿಸಿದ ‘ಬೆಂಗಳೂರು ಉತ್ಸವ’

author img

By

Published : Jan 7, 2023, 9:11 AM IST

ಅದ್ಧೂರಿಯಾಗಿ ಆಯೋಜನೆಗೊಂಡ ಬೆಂಗಳೂರು ಉತ್ಸವ-ಬೆಂಗಳೂರಿನ ಕಳೆ ಹೆಚ್ಚಿಸಿದ ಸಂಕ್ರಾಂತಿ ಸಂಭ್ರಮ.

Actress Salome D'Souza and Actress Deena Pujari
ನಟಿ ಸಲೋಮಿ ಡಿಸೋಜಾ ಮತ್ತು ನಟಿ ದೀನಾ ಪೂಜಾರಿ

ಬೆಂಗಳೂರು: ಸಂಕ್ರಾಂತಿ ಎಂದರೆ ಸಂಭ್ರಮ, ಸಡಗರ! ಹಬ್ಬಕ್ಕೆ ಹೊಸಬಟ್ಟೆ ಶಾಪಿಂಗ್ ಮಾಡುವುದು, ಪ್ರೀತಿಪಾತ್ರರಿಗೆ ಏನಾದರೂ ಉಡುಗೊರೆ ನೀಡುವುದು ಇದೆಲ್ಲವೂ ಮನಸ್ಸಿಗೆ ಖುಷಿ ನೀಡುವ ಸಂಗತಿಗಳು. ಶಾಪಿಂಗ್ ಗೆ ಎಲ್ಲಿ ಹೋಗುವುದು, ಏನು ಖರೀದಿ ಮಾಡುವುದು ಎಂಬ ಚಿಂತೆ ಮಾಡುವವರಿಗೆ ಇಲ್ಲಿದೆ ಒಂದು ಖುಷಿಯ ವಿಷಯ. ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ಅದ್ಧೂರಿಯಾಗಿ ಆಯೋಜಿಸಿದೆ.

ನಿನ್ನೆಯಿಂದ (ಜನವರಿ 6 ರಿಂದ) ಜನವರಿ 15ರವರೆಗೆ 10 ದಿನಗಳ ಕಾಲ ಇಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಕಣ್ಮನ ಸೆಳೆಯುವ ಈ ಮೇಳವನ್ನು ಅಷ್ಟೇ ಸುಂದರವಾಗಿರುವ ನಟಿ ಹಾಗೂ ರೂಪದರ್ಶಿಯರಾದ ಸಲೋಮಿ ಡಿಸೋಜಾ ಹಾಗೂ ದೀನಾ ಪೂಜಾರಿ ಅವರು ಖುಷಿಯಿಂದ ಚಾಲನೆ ನೀಡಿ ಸಂಭ್ರಮಪಟ್ಟರು. ಇನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಈ ಮೇಳದ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಸಲೋಮಿ ಡಿಸೋಜಾ ಇಲ್ಲಿ ಅನೇಕ ರೀತಿಯ ಕರಕುಶಲ ವಸ್ತುಗಳು, ವಿಭಿನ್ನ ವಿನ್ಯಾಸದ ಕಿವಿಯೋಲೆಗಳು, ಬೆಡ್ ಶೀಟ್ ಗಳು ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಚೆಂದವಿದೆ. ನಾನು ಕೂಡ ಇಲ್ಲಿಂದ ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದೇನೆ. ಹತ್ತು ದಿನಗಳ ಕಾಲ ನಡೆಯುವ ಈ ಮೇಳಕ್ಕೆ ನೀವೆಲ್ಲರೂ ಬನ್ನಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ತುಂಗೆಯ ಮಡಿಲಲ್ಲಿ ಅದ್ಧೂರಿಯಾಗಿ ನಡೆದ ಕೋಟೆ ಶ್ರೀ ಸೀತಾರಾಮ ತೆಪ್ಪೋತ್ಸವ

ಇನ್ನೋರ್ವ ನಟಿ ದೀನಾ ಪೂಜಾರಿ ಇಲ್ಲಿನ ವಸ್ತುಗಳನ್ನೆಲ್ಲಾ ಬೆರಗು ಕಣ್ಣಿನಿಂದ ನೋಡುತ್ತಾ ತಮ್ಮ ಸಂತಸ ಹಂಚಿಕೊಂಳ್ಳುತ್ತಾ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ ಈ ‘ಬೆಂಗಳೂರು ಉತ್ಸವ’ದಲ್ಲಿ ಭಾಗಿಯಾಗಿರುವುದು ನನಗೆ ತುಂಬಾ ಖುಷಿ ನೀಡಿದೆ. ಇಲ್ಲಿರುವ ವಸ್ತುಗಳನ್ನು ನೋಡಿದರೆ ಯಾವುದನ್ನು ಕೊಂಡುಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲವಾಗುತ್ತಿದೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಈ ವಸ್ತುಗಳು ತಯಾರಕರಿಂದ ನೇರವಾಗಿ ಗ್ರಾಹಕರಿಗೆ ತಲುಪುತ್ತದೆ. ಹ್ಯಾಂಡ್ ಮೇಡ್ ಆಭರಣಗಳು, ಸೀರೆಗಳು, ಎಲ್ಲವೂ ಚೆಂದವಿದೆ. ಇಲ್ಲಿಗೆ ಭೇಟಿ ನೀಡಿದರೆ ನಿಮ್ಮಿಷ್ಟದ ವಸ್ತುಗಳನ್ನು ಕೊಂಡುಕೊಳ್ಳಬಹುದು ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು.

ಹಬ್ಬದ ಸಿಹಿ ತಯಾರಿಯ ಜೊತೆಗೆ ಶಾಪಿಂಗ್ ಪಟ್ಟಿ ಮಾಡಿಕೊಂಡವರು ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಬೆಂಗಳೂರು ಉತ್ಸವಕ್ಕೆ ಭೇಟಿ ನೀಡಿದರೆ ವೈವಿಧ್ಯಮಯ ಉಡುಪು, ಆಭರಣ,ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬಹುದು. ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗೆಳು ಇರುವುದರಿಂದ ನಿಮಗೆ ಬೇಕೆನಿಸಿದ ವಸ್ತುಗಳು ಒಂದೇ ಸೂರಿನಡಿ ಸಿಗುವುದು. ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಎಲ್ಲವೂ ಇಲ್ಲಿ ಲಭ್ಯವಿರುವುದರಿಂದ ನಿಮ್ಮ ಮನಸ್ಸಿಗೆ ಈ ಮೇಳ ಮುದ ನೀಡುವುದು ಖಚಿತವಾಗಿದೆ.

ಇದನ್ನೂ ಓದಿ: ಬಾದಾಮಿ ಬನಶಂಕರಿ ದೇವಿ ಅದ್ಧೂರಿ ಜಾತ್ರಾ ಮಹೋತ್ಸವ : ದೇವಿಯ ದರ್ಶನ ಪಡೆದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.