ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ ಆಗ್ತಿದೆ. ಈ ನಡುವೆಯೂ ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚಾಗಿದ್ದು, ಲಾಕ್ಡೌನ್ ಮುಂದುವರೆದಿದೆ. ಆದರೆ ಪಾಸಿಟಿವಿಟಿ ಕಡಿಮೆ ಇರುವ ಕಡೆ ಅನ್ಲಾಕ್ ಇಂದಿನಿಂದ ಜಾರಿಯಾಗಿದೆ.
ಹೀಗಾಗಿ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುವ ಆತಂಕ ಶುರುವಾಗಿದೆ. ಆರೋಗ್ಯ ಇಲಾಖೆಗೆ, ಬಿಬಿಎಂಪಿಗೆ ಇದೀಗ ನಿದ್ದೆಗೆಡುವಂತಾಗಿದೆ. ಇದಕ್ಕೆ ಕಾರಣ ನಗರದಲ್ಲಿ ಅನ್ಲಾಕ್ ಜಾರಿ ಮಾಡುತ್ತಿದ್ದಂತೆ ಹಳ್ಳಿಯಿಂದ ನಗರದತ್ತ ವಲಸೆ ಬರಲು ಶುರು ಮಾಡಿರುವುದು ಎಂಬುದು ತಿಳಿದುಬಂದಿದೆ.
ಈಗಷ್ಟೇ ಸೋಂಕಿತರ ಸಂಖ್ಯೆ ಕಡಿಮೆ ಆಗ್ತಿರೋ ಈ ಸಮಯದಲ್ಲಿ ಈ ಮಹಾವಲಸೆಯಿಂದ ಕೊರೊನಾ ಸೋಂಕು ಮತ್ತಷ್ಟು ಹರಡುವ ಭೀತಿ ಶುರುವಾಗಿದೆ. ಈ ಮೂಲಕ ಗ್ರಾಮಾಂತರ ಭಾಗದಲ್ಲಿ ಹರಡಿದ್ದ ನಂಜು ನಗರಕ್ಕೂ ಆವರಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಱಂಡಮ್ ಟೆಸ್ಟ್ ಮೊರೆ: ರಾಜಧಾನಿ ಬೆಂಗಳೂರಿಗೆ ಬರುವವರಿಗೆಲ್ಲಾ ಱಂಡಮ್ ಟೆಸ್ಟ್ ಮಾಡುವ ಕುರಿತು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಟೋಲ್‌ಗಳ ಬಳಿ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಕೂಡಾ ಜಾಸ್ತಿಯಾಗಿದ್ದು, ಹೀಗಾಗಿ ಟೆಸ್ಟ್ ಮಾಡಿಸಲೇಬೇಕಿದೆ.
ಇವತ್ತು ಬೆಂಗಳೂರಿನಲ್ಲಿ ಟ್ರಾಫಿಕ್ನ್ನು ನಾನು ನೋಡಿದ್ದೇನೆ, ಬಹಳಷ್ಟು ಜನ ಹೊರಗಡೆ ಬರುತ್ತಿದ್ದಾರೆ. ಬಹಳ ಎಚ್ಚರಿಕೆಯಿಂದ ನಾವೂ ಇರಬೇಕು, ಮುಂಜಾಗ್ರತಾ ಕ್ರಮಗಳನ್ನ ಮುಂದುವರಿಸಬೇಕು. ಕೊರೊನಾ ಹೊರಟು ಹೋಗಿದೆ ಅಂತಾ ಜನರು ಮೈಮರೆಯಬಾರದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೊರ ಬರುತ್ತಿರುವುದು ನನಗೂ ಕೂಡಾ ಆತಂಕ ತರಿಸಿದೆ. ಹೀಗಾಗಿ, ಇವತ್ತು ನಾಳೆ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡುತ್ತೇವೆ. ಸೋಂಕು ಹೆಚ್ಚಳದ ಬಗ್ಗೆ ನಿಗಾವಹಿಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಪಾಸಿಟಿವಿಟಿ ರೇಟ್ ಹೇಗಿದೆ?: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಕ್ರಿಯ ಪಾಸಿಟಿವಿಟಿ ದರ ಶೇ. 6.02 ರಷ್ಟು ಇದ್ದು, ಸಾವಿನ ಪ್ರಮಾಣ ಶೇ. 1.60 ರಷ್ಟು ಇದೆ. ಜಿಲ್ಲಾವಾರು ಪಾಸಿಟಿವಿಟಿ ರೇಟ್ನ್ನು ನೋಡುವುದಾದರೆ..
ಟಾಪ್ -5 ಜಿಲ್ಲೆ | ಶೇ. 13ಕ್ಕಿಂತ ಹೆಚ್ಚಿರುವ ಜಿಲ್ಲೆಗಳು |
ಚಿಕ್ಕಮಗಳೂರು | ಶೇ.17.12% |
ದಕ್ಷಿಣ ಕನ್ನಡ | ಶೇ. 15.67% |
ಮೈಸೂರು | ಶೇ. 14.62% |
ಹಾಸನ | ಶೇ.13.52% |
ಚಾಮರಾಜನಗರ | ಶೇ. 13.31% |
ಶೇ.5ರೊಳಗೆ ಪಾಸಿಟಿವಿಟಿ ದರ
ರಾಯಚೂರು | 3.81% |
ಬೆಂಗಳೂರು ನಗರ | 3.50% |
ಹಾವೇರಿ | 2.87% |
ರಾಮನಗರ | 2.74% |
ಯಾದಗಿರಿ | 2.07% |
ಕಲಬುರಗಿ | 1.87% |
ಬೀದರ್ | 0.59% |
ಓದಿ: ಆಯುರ್ವೇದ ಚಿಕಿತ್ಸೆಗೆ ಸಂಶೋಧನೆ, ಆವಿಷ್ಕಾರವೂ ಬಹಳ ಮುಖ್ಯ - ಸಚಿವ ಡಾ. ಸುಧಾಕರ್