ETV Bharat / state

ಬೆಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಅಪಘಾತಗಳೆಷ್ಟು? ದಂಡ ಸಂಗ್ರಹವೆಷ್ಟು? - etv bharat kannada

ಬೆಂಗಳೂರು ನಗರದಲ್ಲಿ ವಾಹನ ಸವಾರರಿಂದ 179 ಕೋಟಿ ರೂಪಾಯಿ ದಂಡವನ್ನು ನಗರ ಸಂಚಾರ ಪೊಲೀಸರು ವಸೂಲಿ ಮಾಡಿದ್ದಾರೆ.

traffic cases
ಎಂ.ಎ‌ ಸಲೀಂ
author img

By

Published : Jan 5, 2023, 1:24 PM IST

Updated : Jan 5, 2023, 2:11 PM IST

ತಂತ್ರಜ್ಞಾನ ಬಳಕೆ ಬಗ್ಗೆ ಎಂ.ಎ‌.ಸಲೀಂ ಮಾತನಾಡಿದರು

ಬೆಂಗಳೂರು: ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ನಗರ ಸಂಚಾರ ಪೊಲೀಸರು ರಾಜಧಾನಿಯಲ್ಲಿ ಶೇ.92ರಷ್ಟು ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸಂಪರ್ಕರಹಿತವಾಗಿ ದಾಖಲಿಸಿದ್ದಾರೆ. ಶೇ 8ರಷ್ಟು ಮಾತ್ರ ಭೌತಿಕವಾಗಿ ವಾಹನ ಸವಾರರ‌ ಮೇಲೆ‌ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ‌.ಸಲೀಂ ಅವರು ವಿವರವಾದ ಮಾಹಿತಿ ನೀಡಿದ್ದಾರೆ.

ಸಂಪರ್ಕ ಹಾಗೂ ಸಂಪರ್ಕರಹಿತ ಪ್ರಕರಣಗಳು 2018ರಲ್ಲಿ ಶೇ.62 ಹಾಗೂ 38ರಷ್ಟು ದಾಖಲಾಗಿತ್ತು. ಆದರೆ, ಕಳೆದ ವರ್ಷ ಶೇ.8ರಷ್ಟು ಮಾತ್ರ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಉಳಿದ ಶೇ.92 ರಷ್ಟು ಪ್ರಕರಣಗಳು ನಿಯಮ ಉಲ್ಲಂಘಿಸಿದವರ ವಿವೇಚನೆಗೆ ಬಾರದಂತೆ ಸಿಸಿ ಕ್ಯಾಮರಗಳೇ ಸೆರೆಹಿಡಿದಿವೆ. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ದಾಖಲಾಗುವ ಸಂಪರ್ಕರಹಿತ ಪ್ರಕರಣಗಳನ್ನು ಶೇ 100ಕ್ಕೆ ತರುವ ಉದ್ದೇಶವಿದೆ ಎಂದರು.

ಕಳೆದ ವರ್ಷ ಸಂಗ್ರಹವಾದ ದಂಡ ಎಷ್ಟು?: ಕಳೆದ‌ ಐದು ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಅತಿ ಹೆಚ್ಚು ದಂಡ ಸಂಗ್ರಹಿಸಲಾಗಿದೆ. 179 ಕೋಟಿ ರೂ ದಂಡವನ್ನು ಒಂದೇ ವರ್ಷದಲ್ಲಿ ವಸೂಲಿ ಮಾಡಲಾಗಿದೆ. 2021 ರಲ್ಲಿ 140 ಕೋಟಿ‌, 2018, 2019 ಮತ್ತು 2020ರಲ್ಲಿ ಅನುಕ್ರಮವಾಗಿ 81, 89 ಹಾಗೂ 99 ಕೋಟಿ ದಂಡ ಸಂಗ್ರಹಿಸಲಾಗಿದೆ.

ಒಂದು ವರ್ಷದಲ್ಲಿ ಸಂಭವಿಸಿದ ಅಪಘಾತಗಳೆಷ್ಟು?: 2020- 2021 ನೇ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇತ್ತು. ದೇಶದಲ್ಲಿ ಕೊರೊನಾ ಲಾಕ್​ಡೌನ್​ ಇದ್ದ ಕಾರಣ ಅಷ್ಟಾಗಿ ಅಪಘಾತಗಳು ಸಂಭವಿಸಿರಲಿಲ್ಲ. ಅನುಕ್ರಮವಾಗಿ 3,236 ಮತ್ತು 3,213 ಅಪಘಾತಗಳಾಗಿತ್ತು. ಈ ಸಂಖ್ಯೆಗಳಿಗೆ ಹೋಲಿಸಿದರೆ 2022ರಲ್ಲಿ ಸಹಜ ಪರಿಸ್ಥಿತಿ ಇದ್ದೂ ಅಪಘಾತಗಳ ಸಂಖ್ಯೆ 3827ಕ್ಕೇರಿಕೆಯಾಗಿದೆ. 2018 ರಲ್ಲಿ ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಪ್ರತಿ 10 ಸಾವಿರ ವಾಹನಗಳಿಗೆ 6 ಅಪಘಾತಗಳು ಸಂಭವಿಸುತ್ತಿದ್ದವು. 2022ನೇ ಸಾಲಿನಲ್ಲಿ ಈ ಅನುಪಾತವು 3.5ಕ್ಕೆ ಇಳಿದಿದೆ. ವಾಹನಗಳ ಏರುಗತಿಗೆ ಹೋಲಿಸಿದಾಗ ನಗರದ ಅಪಘಾತಗಳ ಸಂಖ್ಯೆ ಕಡಿಮೆಯಾಗಿವೆ.

ಇದನ್ನೂ ಓದಿ: ಕಳೆದ ವರ್ಷದಲ್ಲಿ, ಪೊಲೀಸ್ ಇಲಾಖೆಯ ಕಾರ್ಯವೈಖರಿ ತೃಪ್ತಿ ತಂದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ನೋ ಪಾರ್ಕಿಂಗ್​ ಕೇಸ್​ಗೆ 283 ಸೆಕ್ಷನ್ ಅಸ್ತ್ರ:​ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಅನಧಿಕೃತ ವಾಹನ ನಿಲುಗಡೆಗಳನ್ನು ಸಮರ್ಥವಾಗಿ ತಡೆಯಲು ಐಪಿಸಿ ಸೆಕ್ಷನ್ 2830 ದಾಖಲಿಸುವ ಮೂಲಕ ನೋ‌ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವ ಸವಾರನ ವಿರುದ್ಧ ಐಪಿಸಿ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಈ ಮೊದಲು ಅನಧಿಕೃತ ನಿಲುಗಡೆ ವಿರುದ್ಧ ಐ.ಎಂ.ವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ದಂಡ ಪಾವತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪ್ರಸ್ತುತ ವಾಹನ ಚಾಲಕ ಅಥವಾ ಮಾಲೀಕರ ವಿರುದ್ಧ ಐಪಿಸಿ 283 ಪ್ರಕರಣಗಳನ್ನು ದಾಖಲಿಸಿ, ವಾಹನಗಳನ್ನು ವಶಕ್ಕೆ ಪಡೆದುಕೊಂಡು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ 3578 ಕೇಸ್​ಗಳು ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಾಗಿದೆ.

ಕಳೆದ ಐದು ವರ್ಷಗಳಿಂದ ನಗರದಲ್ಲಿ ಸಂಭವಿಸುತ್ತಿರುವ ಒಟ್ಟು ಅಪಘಾತಗಳ ಸಂಖ್ಯೆಯು 2018 ನೇ ಸಾಲಿಗೆ ಹೋಲಿಸಿದರೆ ಶೇ.17ರಷ್ಟು ಇಳಿಕೆ ಕಂಡಿದೆ. ಕಳೆದ‌ ವರ್ಷ ಒಟ್ಟು 748 ಮಾರಣಾಂತಿಕ ಪ್ರಕರಣಗಳು ಸಂಭವಿಸಿದ್ದು, ಒಟ್ಟು 777 ಜನ ರಸ್ತೆ ಅಪಘಾತಗಳಿಂದ ಸಾವಿಗೀಡಾಗಿದ್ದರು ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: 2022ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಬೆಂಗಳೂರಲ್ಲಿ ಇಳಿಮುಖ: ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ

Last Updated : Jan 5, 2023, 2:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.